ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ವಿವೇಕ ಸಂಜೀವಿನಿ” ಕಾರ್ಯಕ್ರಮ

0

ಪ್ರಕೃತಿಯೊಂದಿಗೆ ನಮ್ಮ ಸಂಬಂಧ ತಾಯಿ ಮಗುವಿನಂತಿರಬೇಕು ಡಾ.ಶಿವಪ್ರಕಾಶ್.ಎಂ.

ಪುತ್ತೂರು:ಎಳೆಯ ಮಕ್ಕಳು ಔಷಧೀಯ ಸಸ್ಯಗಳನ್ನು ಗುರುತಿಸಿ, ನೆಟ್ಟು ಬೆಳೆಸುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು ಎಂದು ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊಫೆಸರ್ ವಿ.ಜಿ.ಭಟ್ ಹೇಳಿದರು.

ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಔಷಧೀಯ ಸಸ್ಯಗಳ ಗಿಡ ನೆಡುವ ಕಾರ್ಯಕ್ರಮ “ವಿವೇಕ ಸಂಜೀವಿನಿ”ಯನ್ನು ಉದ್ಘಾಟಿಸಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹಲವಾರು ವಿಧದ ಔಷಧೀಯ ಸಸ್ಯಗಳಿದ್ದು, ಅವುಗಳ ಉಪಯೋಗಗಳನ್ನು ತಿಳಿದುಕೊಂಡು ಉಳಿಸುವುದು ಇಂದಿನ ಪೀಳಿಗೆಯ ಪ್ರಮುಖ ಗುರಿಯಾಗಬೇಕು ಎಂದು ಹೇಳಿದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್ ಎಂ ಮಾತನಾಡಿ ಪ್ರಕೃತಿಯೊಂದಿಗೆ ನಮ್ಮ ಸಂಬಂಧ ತಾಯಿ ಮಗುವಿನಂತಿರಬೇಕು ಎಂದು ಹೇಳಿದರು.

ಶಾಲಾ ಪ್ರಾಥಮಿಕ ವಿಭಾಗ ಮುಖ್ಯಸ್ಥೆ ಸಂಧ್ಯಾ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಸಹಶಿಕ್ಷಕಿ ಕುಮಾರಿ ಅಕ್ಷತಾ  ವಂದಿಸಿದರು. ಸಹಶಿಕ್ಷಕಿಯರಾದ ದೀಪ್ತಿ ಹಾಗೂ ಕುಮಾರಿ ಸುಕನ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲಾ ಮುಖ್ಯ ಗುರುಗಳ ಮಾರ್ಗದರ್ಶನದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ವಿವಿಧ ಔಷಧೀಯ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here