ವಿವೇಕಾನಂದ ಯುವಕ ವೃಂದದಿಂದ ನಡೆದ ಉಚಿತ ಯೋಗ ಶಿಬಿರದ ಸಮಾರೋಪ

0

ಅರಿಯಡ್ಕ: ಭಾರತ ಸರಕಾರ, ಯುವ ಕಾರ್ಯ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು, ತಾಲೂಕು ಯುವಜನ ಒಕ್ಕೂಟ ಪುತ್ತೂರು ಇವುಗಳ ಸಹಯೋಗದೊಂದಿಗೆ, ತಾಲೂಕು ಅತ್ಯುತ್ತಮ ಯುವ ಸಂಸ್ಥೆ ಪ್ರಶಸ್ತಿ ಪುರಸ್ಕೃತ ಕೌಡಿಚ್ಚಾರು ವಿವೇಕಾನಂದ ಯುವಕ ವೃಂದದ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ, ಮತ್ತು ಉಚಿತ ಯೋಗ ಶಿಬಿರ 5 ದಿನಗಳ ಕಾಲ ನಡೆದು ಜೂ.25ರಂದು ಸಮಾಪನಗೊಂಡಿತು. ಯುವಕ ವೃಂದದ ಅಧ್ಯಕ್ಷ ಉದಯ್ ಕುಮಾರ್ ಆಕಾಯಿ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಯುವಜನ ಒಕ್ಕೂಟಗಳ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಪುತ್ತೂರು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲ್ಯಾನ್, ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಸಮಿತಿಯ ಅದ್ಯಕ್ಷ ತಿಲಕ್ ರೈ ಕುತ್ಯಾಡಿ ಹಾಗೂ ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ ಶುಭ ಹಾರೈಸಿದರು. ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಯೋಗ ಶಿಕ್ಷಕ ನವೀನ್ ಕುಮಾರ್‌ರವರಿಗೆ ಶಿಬಿರಾರ್ಥಿಗಳಿಂದ ಗುರುವಂದನ ಕಾರ್ಯಕ್ರಮ ನಡೆಯಿತು. ಬಳಿಕ ಮಾತನಾಡಿದ ಅವರು ಯುವಕ ವೃಂದದಿಂದ ಸತತ 9 ವರ್ಷಗಳು ಉಚಿತ ಯೋಗ ತರಬೇತಿ ನೀಡಿದ್ದು ಅಭಿನಂದನೀಯ ಎಂದು ಹೇಳಿ ತಮಗೂ ತರಬೇತಿ ನೀಡಲು ಅವಕಾಶ ನೀಡಿದ್ದನ್ನು ಶ್ಲಾಘಿಸಿದರು. ಶಿಬಿರಾರ್ಥಿ ಡಾ.ಸುರೇಶ್ ಭಟ್ ಪಿ. ಮಾತನಾಡಿ ,ಯೋಗ ತರಬೇತಿಯು ಬಹಳ ಸುಲಭವಾಗಿ ಅರ್ಥವಾಗುವಂತೆ ಹೇಳಿಕೊಟ್ಟಿರುತ್ತಾರೆ ಮತ್ತು ಕಾರ್ಯಕ್ರಮ ಆಯೋಜಿಸಿದ ಯುವಕ ವೃಂದದಕ್ಕೆ ಅಭಿನಂದಿಸಿದರು. ಯುವಕ ವೃಂದದ ಪ್ರಧಾನ ಕಾರ್ಯದರ್ಶಿ ಪ್ರತೀಕ್ ಪೂಜಾರಿ ಆಕಾಯಿ, ಕೋಶಾಧಿಕಾರಿ ದುರ್ಗಾಪ್ರಸಾದ್ ನಾಯ್ಕ ಮುಂಗ್ಲಿಮೂಲೆ, ಗೌರವ ಸಲಹೆಗಾರ ವಸಂತ ಕುಲಾಲ್ ಆಕಾಯಿ, ಜತೆ ಕಾರ್ಯದರ್ಶಿ ಸತೀಶ್ ರೈ ಪಾಪೆಮಜಲು ಸದಸ್ಯರಾದ ಮುಕುಂದ ನಾಯ್ಕ ದೇವುಮೂಲೆ, ಸುಕುಮಾರ್ ಕರ್ಕೆರ ಮಡ್ಯಂಗಳ, ಹರಿಶ್ಚಂದ್ರ ಆಚಾರ್ಯ ಹೊಸಗದ್ದೆ, ಚರಣ್ ರಾಜ್ ಎಂ.ಡಿ ಹೊಸಗದ್ದೆ, ಹರೀಶ್ ಪಿ.ಆರ್ ಪಾದಲಾಡಿ, ಜಯಪ್ರಕಾಶ್ ನಾಯ್ಕ ಜೆ.ಪಿ ಕುತ್ಯಾಡಿ ಹಾಗೂ ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷ ರಾಮದಾಸ ರೈ ಮದ್ಲ, ರಾಘವ ಗೌಡ ಹೊಸಗದ್ದೆ, ಸುಂದರ ನಾಯ್ಕ ಪಾಪೆಮಜಲು, ಮತ್ತು ಅರುಣ್ ನಾಯ್ಕ ನಿದಿಮುಂಡ, ಅಕ್ಷಯ್ ಶೇಖಮಲೆ ಉಪಸ್ಥಿತರಿದ್ದರು. ಸದಸ್ಯರಾದ ಪದ್ಮನಾಭ ಆಚಾರ್ಯ ಶೇಖಮಲೆ ಪ್ರಾರ್ಥಿಸಿ, ಗೌರವ ಸಲಹೆಗಾರರಾದ ದೀಪಕ್ ಕುಲಾಲ್ ಆಕಾಯಿ ಸ್ವಾಗತಿಸಿ, ಗೌರವಾಧ್ಯಕ್ಷ ಬಾಲಕೃಷ್ಣ ಕುಲಾಲ್ ಕೌಡಿಚ್ಚಾರು ವಂದಿಸಿ, ಸದಸ್ಯ ಯತೀಂದ್ರ ಕೌಡಿಚ್ಚಾರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here