ಎಸ್ಕೆಎಸ್ಸೆಸೆಫ್ ಸವಣೂರು ಶಾಖೆಯ ವತಿಯಿಂದ ಸಮಸ್ತ ಸ್ಥಾಪಕ ದಿನಾಚರಣೆ

0

ಪುತ್ತೂರು – ಸವಣೂರು ಎಸ್ಕೆಎಸ್ಸೆಸೆಫ್ ಶಾಖೆಯ ವತಿಯಿಂದ ಸಮಸ್ತ ಸ್ಥಾಪಕ ದಿನಾಚರಣೆಯ ಪ್ರಯುಕ್ತ ಸಮಸ್ತ ಧ್ವಜಾರೋಹಣ ಕಾರ್ಯಕ್ರಮ ಚಾಪಲ್ಲ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.

ಚಾಪಲ್ಲ ಮುದರ್ರಿಸ್ ಉಸ್ತಾದ್ ಅಶ್ರಫ್ ಫಾಝಿಲ್ ಬಾಖವಿ ಉಸ್ತಾದ್ ನೇತೃತ್ವದಲ್ಲಿ ಖಬರ್ ಝಿಯಾರತಿನೊಂದಿಗೆ, ಚಾಪಲ್ಲ ಜಮಾಅತಿನ ಅಧ್ಯಕ್ಷ ಜನಾಬ್ ಉಮರ್ ಹಾಜಿ ಕೆನರಾ ಧ್ವಜಾರೋಹಣ ಮಾಡಿದರು.

ಉಸ್ತಾದ್ ಅಶ್ರಫ್ ಫಾಝಿಲ್ ಬಾಖವಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಎಸ್ಕೆಎಸ್ಸೆಸೆಫ್ ಸವಣೂರು ಶಾಖೆಯ ಅಧ್ಯಕ್ಷ ಉಸ್ತಾದ್ ಜಲೀಲ್ ಫೈಝಿ ಸವಣೂರು ಮಾತನಾಡಿ “ಸಮಸ್ತ” ಅದು ಇಸ್ಲಾಮಿನ ಸರಿಯಾದ ಆದರ್ಶವಾಗಿದೆ, ಅದಕ್ಕೆ ನೇತೃತ್ವ ನೀಡಿದವರೆಲ್ಲರೂ ಅಲ್ಲಾಹನ ಔಲಿಯಾಗಳಾಗಿದ್ದಾರೆ ಸಮಸ್ತದ ಸಂದೇಶಗಳಿಗೆ ಇಂದಿನ ವರೆಗೂ ಯಾವುದೇ ಕೋರ್ಟ್ ಹತ್ತಬೇಕಾದ ಅಥವಾ ಚರ್ಚಿಸಬೇಕಾದ ಅನಿವಾರ್ಯತೆ ಬಂದಿಲ್ಲ ಶತಮಾನದತ್ತ ಹೆಜ್ಜೆ ಇಡುತ್ತಿರುವ ಸಮಸ್ತ ಅದು ಸಾತ್ವಿಕ ಸಂಘಟನೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸವಣೂರು ಸದಸ್ಯ ರಫೀಕ್ ಎಂ.ಎ ಹಾಗೂ ಅಲ್-ನೂರ್ ಯೂತ್ ಫೆಡರೇಶನ್ ಅಧ್ಯಕ್ಷ ಝಕರಿಯಾ ,ಬಿಜೆಎಮ್ ಚಾಪಲ್ಲ ಆಡಳಿತ ಸಮಿತಿಯ ಸದಸ್ಯರಾದ ಮುಹಮ್ಮದ್ ಹಾಜಿ ಕಣಿಮಜಲು,ಅಹ್ಮದ್ ಹಾಜಿ ಬಿ ಎಮ್, ಅಬೂಬಕ್ಕರ್ ಹಾಜಿ ಕಾಯರ್ಗ,ಎಸ್‌ ಆರ್ ಇಬ್ರಾಹಿಂ ಅಲ್-ನೂರ್ ಯೂತ್ ಫೆಡರೇಶನ್ ಕಾರ್ಯದರ್ಶಿ ಅಶ್ರಫ್ ಬಿ ಎಮ್, ಮತ್ತು ಪದಾಧಿಕಾರಿಗಳು,ಎಸ್ಕೆಎಸ್ಸೆಸೆಫ್ ಪುತ್ತೂರು ವಲಯ ಉಪಾಧ್ಯಕ್ಷ ರಝಾಕ್ ಅಝ್ಹರಿ,ಎಸ್ಕೆಎಸ್ಸೆಸೆಫ್ ಪುತ್ತೂರು ವಲಯ ಸಹಚಾರಿ ಕಾರ್ಯದರ್ಶಿ ಎಸ್‌ ಆರ್ ಕರೀಂ ಮೌಲ , ಎಸ್ಕೆಎಸ್ಸೆಸೆಫ್ ಸವಣೂರು ಶಾಖಾ ಪದಾಧಿಕಾರಿಗಳು, SKSBV ಪದಾಧಿಕಾರಿಗಳು, ಮಕಾಸಿಬುಲ್ ಖುಲೂಬ್ ಚಾಪಲ್ಲ ದರ್ಸ್ ವಿಧ್ಯಾರ್ಥಿಗಳು ಹಾಗೂ ಸಮಸ್ತ ಸ್ನೇಹಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಹನೀಫ್ ಸವಣೂರು ಸ್ವಾಗತಿಸಿದರು. ಎಸ್ಕೆಎಸ್ಸೆಸೆಫ್ ಸವಣೂರು ಶಾಖಾ ಪ್ರ.ಕಾರ್ಯದರ್ಶಿ ಶರೀಫ್ ದಾರಿಮಿ ವಂದಿಸಿದರು.

LEAVE A REPLY

Please enter your comment!
Please enter your name here