ಪ್ರಾಥಮಿಕ ಶಾಲಾ ಗ್ರೇಡ್ – 2 ದೈಹಿಕ ಶಿಕ್ಷಣ ಶಿಕ್ಷಕರ ಸಂಘ – ನೂತನ ಪದಾಧಿಕಾರಿಗಳ ಆಯ್ಕೆ 

0

ಪುತ್ತೂರು: ಪ್ರಾಥಮಿಕ ಶಾಲಾ ಗ್ರೇಡ್ – 2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾತೃ ಸಂಘದ ಅಧ್ಯಕ್ಷ ಸೀತಾರಾಮ ಗೌಡ ಮಿತ್ತಡ್ಕ, ಕಾರ್ಯದರ್ಶಿ ದಾಮೋದರ ಕಜೆ ಮತ್ತು ಕೋಶಾಧಿಕಾರಿ ಸುಧೀರ್ ರೈ ಉಪಸ್ಥಿತಿಯಲ್ಲಿ ಇತ್ತೀಚೆಗೆ ನಡೆಯಿತು. 

ನೂತನ ಅಧ್ಯಕ್ಷರಾಗಿ ಪಾಣಾಜೆ ಉ.ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ ರೈ ಗಿಳಿಯಾಲು, ಕಾರ್ಯದರ್ಶಿಯಾಗಿ ಬೆಳ್ಳಿಪ್ಪಾಡಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್, ಕೋಶಾಧಿಕಾರಿಯಾಗಿ ಉಪ್ಪಳಿಗೆ ಹಿ.ಪ್ರಾ.ಶಾಲೆಯ ವಾಣಿಶ್ರೀಯವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಪೇರಲ್ತಡ್ಕ ಶಾಲೆಯ ಸೀತರಾಮ ಗೌಡ ಮಿತ್ತಡ್ಕ, ಕಾರ್ಯಾಧ್ಯಕ್ಷರಾಗಿ ಸರ್ವೆ ಶಾಲೆಯ ನವೀನ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿಯಾಗಿ ನೆ.ಮುಡ್ನೂರು ಶಾಲೆಯ ರಮೇಶ್, ಜೊತೆ ಕಾರ್ಯದರ್ಶಿಯಾಗಿ ಸಿದ್ದಲಿಂಗಮ್ಮ ಭಕ್ತಕೋಡಿ, ಕಾರ್ಯಕಾರಿ ಸದಸ್ಯರಾಗಿ ಕುಸುಮಾವತಿ ಕೆಮ್ಮಾಯಿ, ಪ್ರೇಮಲತಾ ಅರಿಯಡ್ಕ, ಉಮಾ ನಾಯ್ಕ್ ಪಾಪೆಮಜಲು, ಶ್ರೀಲತಾ ನರಿಮೊಗರು ರವರನ್ನು ಆಯ್ಕೆ ಮಾಡಲಾಗಿದೆ‌.

LEAVE A REPLY

Please enter your comment!
Please enter your name here