ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ನೆಲ್ಯಾಡಿ ಗ್ರಾಮ ಸಮಿತಿ

0

ಗೌರವಾಧ್ಯಕ್ಷ: ಡಾ.ಸದಾನಂದ ಕುಂದರ್, ಅಧ್ಯಕ್ಷ: ಮೋಹನ್‌ಕುಮಾರ್ ದೋಂತಿಲ, ಕಾರ್ಯದರ್ಶಿ: ಜನಾರ್ದನ ಬಾಣಜಾಲು
ಮಹಿಳಾ ಘಟಕ-ಅಧ್ಯಕ್ಷೆ: ದೀಕ್ಷಾ ಸಾಲಿಯಾನ್, ಕಾರ್ಯದರ್ಶಿ: ಪದ್ಮಾವತಿ

ನೆಲ್ಯಾಡಿ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ನೆಲ್ಯಾಡಿ ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆ ಜೂ.18ರಂದು ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ 2023-24ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಡಾ.ಸದಾನಂದ ಕುಂದರ್, ಅಧ್ಯಕ್ಷರಾಗಿ ಮೋಹನ್‌ಕುಮಾರ್ ದೋಂತಿಲ, ಪ್ರಧಾನ ಕಾರ್ಯದರ್ಶಿಯಾಗಿ ಜನಾರ್ದನ ಬಾಣಜಾಲು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಲಿತಿನ್ ಕೊಣಾಲು, ಕೋಶಾಧಿಕಾರಿಯಾಗಿ ಲೋಕೇಶ್ ಬಾಣಜಾಲು, ಜೊತೆ ಕಾರ್ಯದರ್ಶಿಯಾಗಿ ನೋಣಯ್ಯ ಅಂಬರ್ಜೆಯವರನ್ನು ಆಯ್ಕೆ ಮಾಡಲಾಯಿತು.

ಮಹಿಳಾ ಸಮಿತಿ:
ಮಹಿಳಾ ಘಟಕದ ಅಧ್ಯಕ್ಷೆಯಾಗಿ ದೀಕ್ಷಾ ಸಾಲಿಯಾನ್, ಕಾರ್ಯದರ್ಶಿಯಾಗಿ ಪದ್ಮಾವತಿ ಪಟ್ಲಡ್ಕ ಆಯ್ಕೆಯಾದರು. ಉಪಾಧ್ಯಕ್ಷೆಯಾಗಿ ಲೀಲಾವತಿ ಪರಂತಮೂಲೆ, ಕೋಶಾಧಿಕಾರಿಯಾಗಿ ಅನಿತಾ ಸುರೇಶ್, ಜೊತೆ ಕಾರ್ಯದರ್ಶಿಯಾಗಿ ಉಷಾ ಕಲಾಯಿ ಅವರನ್ನು ಆಯ್ಕೆ ಮಾಡಲಾಯಿತು.
ಪುತ್ತೂರು ಬಿಲ್ಲವ ಸಂಘದ ಕೋಶಾಧಿಕಾರಿ ಬಿ.ಟಿ.ಮಹೇಶ್ಚಂದ್ರ ಸಾಲ್ಯಾನ್‌ರವರು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿದರು. ಡಾ.ಸದಾನಂದ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸಂಚಾಲಕಿ ಉಷಾ ಅಂಚನ್, ಮೋಹನ್ ಕುಮಾರ್ ದೋಂತಿಲ, ಲೋಕೇಶ್ ಬಾಣಜಾಲು, ವೀರಪ್ಪ ಅಂಬರ್ಜೆ, ಮಹೇಶ್ ಬರೆಗುಡ್ಡೆ, ಸಂತೋಷ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಜನಾರ್ದನ ಬಾಣಜಾಲು ವಂದಿಸಿದರು.

LEAVE A REPLY

Please enter your comment!
Please enter your name here