ಪುತ್ತೂರು: ಸಿರಾಜುಲ್ ಹುದಾ ಸ್ಟೂಡೆಂಟ್ ಫೆಡರೇಶನ್ ಸುಲ್ತಾನ್ ನಗರ ಕಬಕ ಇದರ ವಾರ್ಷಿಕ ಮಹಾ ಸಭೆ ಸುಲ್ತಾನ್ ನಗರ ಮದ್ರಸ ವಠಾರದಲ್ಲಿ ಗೌರವಾಧ್ಯಕ್ಷರಾದ ಆಸೀಫ್ ಝುಹ್ರಿ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಸತತವಾಗಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಮುಹಮ್ಮದ್ ಸಂಶೀರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಉಮ್ಮರ್ ಫಾರೂಕ್, ಪ್ರಧಾನ ಕಾರ್ಯದರ್ಶಿಯಾಗಿ ಶೇಖ್ ಅಲಿ ಫರ್ಸಾನ್, ಜೊತೆ ಕಾರ್ಯದರ್ಶಿಯಾಗಿ ಸಂಶುದ್ದೀನ್, ಫೈರೂಝ್, ಕೋಶಾಧಿಕಾರಿಯಾಗಿ ಸಲ್ಮಾನ್ ಫಾರಿಸ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಲಿ, ಶಹೀದ್, ರಿಶಾದ್, ರಾಝಿಕ್, ತೌಸಿಫ್ ಆಯ್ಕೆಯಾದರು.
