ಹಿಂದೂ ಸಮಾಜವನ್ನು ಜೋಡಿಸುವ ಕೆಲಸಕ್ಕೆ ಶಕ್ತಿ ಕೊಡಬೇಕು – ಸಂಪ್ಯ ಉದಯಗಿರಿ ಶನೈಶ್ಚರ ಪೂಜೆಯಲ್ಲಿ ಅರುಣ್ ಕುಮಾರ್ ಪುತ್ತಿಲ

0

ಪುತ್ತೂರು: ಹಿಂದು ಸಮಾಜಕ್ಕೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ಪ್ರಿತಂ ಪುತ್ತೂರಾಯ ಅವರು ಸಮಾಜವನ್ನು ಜೋಡಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಶಕ್ತಿಯನ್ನು ಕೊಡುವ ಕೆಲಸ ನಾವು ಮಾಡಬೇಕು ಎಂದು ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಹೇಳಿದರು.

ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಜು.1 ರಂದು ನಡೆದ ಸಾಮೂಹಿಕ ಶ್ರೀ ಶನೈಶ್ಚರ ಪೂಜೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೊನ್ನೆ ನಡೆದ ಚುನಾವಣೆಯಲ್ಲಿ ಹಿಂದು ಸಮಾಜಕ್ಕೆ ಒಂದಷ್ಟು ಹಿನ್ನಡೆ ತಂದಿದೆ. ಧರ್ಮಆಧಾರಿತ ರಾಜಕಾರಣ ಇರಬೇಕೆಂದು ನಾವೆಲ್ಲ ಅತ್ಯಂತ ಒಟ್ಟಾಗಿ ಕೆಲಸ ಮಾಡಬೇಕು. ಮುಂದಿನ 5 ವರ್ಷ ನಾವೆಲ್ಲ ಅತ್ಯಂತ ಸಂಘಟನೆಯಲ್ಲಿ ಕೆಲಸ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ ಅವರು ಮಾತನಾಡಿ ಧಾರ್ಮಿಕ ಕಾರ್ಯಕ್ರಮ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸ ಆಗಲಿದೆ ಎಂದರು.

ನೂತನ ನಾಟಕ ತಂಡ ಉದ್ಘಾಟನೆ:
ಕೇಶವ ಮಚ್ಚಿಮಲೆ ಅವರ ನೇತೃತ್ವದಲ್ಲಿ ರಚನೆಗೊಂಡ ನೂತನ ನಾಟಕ ತಂಡ ‘ಅಭಿನಯ ಕಲಾ ತಂಡ’ ಪುತ್ತೂರು ಇದನ್ನು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಉದ್ಘಾಟನೆ ಮಾಡಲಾಯಿತು. ತಂಡದ ಉದ್ಘಾಟನೆ ದಿನವೇ ಕೇಶವ ಮಚ್ಚಿಮಲೆ ನಿರ್ದೇಶನದಲ್ಲಿ ತುಳು ನಿಗೂಢಮಯ ನಾಟಕ “ಮಣ್ಣ್ ಕಾರ್ನಿಕದ !” ಕ್ಕೆ ಮುಹೂರ್ತ ಮಾಡಲಾಯಿತು. ಕ್ಷೇತ್ರದ ಧರ್ಮದರ್ಶಿ ಪ್ರೀತಂ ಪುತ್ತೂರಾಯ ಅವರು ನಾಟಕದ ಪೋಸ್ಟಾರ್ ಅನ್ನು ಬಿಡುಗಡೆಗೊಳಿಸಿದರು.

ಅಭಿನಂದನೆ:
ಕಾರ್ಯಕ್ರಮದಲ್ಲಿ ನೂತನ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದರೂ ಹಾಗು ಅರುಣ್ ಕುಮಾರ್ ಪುತ್ತಿಲ ಅವರಿಗೆ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆದರೆ ಮೂವರ ಪೈಕಿ ಕಾರ್ಯಕ್ರಮಕ್ಕೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ ಅವರನ್ನು ಶನೈಶ್ಚರ ಪೂಜಾ ಸಮಿತಿಯಿಂದ ಅಭಿನಂದಿಸಿದರು. ಮಂಜಪ್ಪ ರೈ ಬಾರಿಕೆ, ಶನೈಶ್ಚರ ಪೂಜಾ ಸಮಿತಿ ಅಧ್ಯಕ್ಷ ಉಮೇಶ್ ಆಚಾರ್ಯ ಕುಕ್ಕಾಡಿ, ಕಾರ್ಯದರ್ಶಿ ಮೋಹನ್ ಸಿಂಹವನ, ಖಜಾಂಜಿ ಸತೀಶ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀ ಶನೈಶ್ಚರ ಪೂಜಾ ಸಮಿತಿ ಸಂಚಾಲಕ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಣಮ್ಯ ಪುತ್ತೂರಾಯ ಪ್ರಾರ್ಥಿಸಿದರು.ರಾಜೇಶ್ ಬನ್ನೂರು ಸ್ವಾಗತಿಸಿ, ಜಯಂತ ಕಂಬಳತ್ತಡ್ಡ ವಂದಿಸಿದರು. ಉದಯ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು. ಅರ್ಚಕ ಉದಯ ಭಟ್ ಅವರು ಶನೈಶ್ಚರ ಪೂಜೆಯ ವೈದಿಕ ಕಾರ್ಯಕ್ರಮ ನೆರವೇರಿಸಿದರು. ಬೆಳಿಗ್ಗೆ ಹೊಟೇಲ ಉದ್ಯಮಿ ಗೋಪಾಲಕೃಷ್ಣ ಹೇರಳೆ ಅವರು ಭಜನಾ ಕಾರ್ಯಕ್ರಮ ಉದ್ಘಾಟಿಸಿದರು.

LEAVE A REPLY

Please enter your comment!
Please enter your name here