ಮಗನ ಮದುವೆ ಮುನ್ನಾ ದಿನವೇ ಅಪ್ಪ ಕಾಣೆ
ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ನಿವಾಸಿ ಉಮ್ಮರ್ ಎಂಬವರು ಜು.1 ರಂದು ದಿಢೀರಣೆ ನಾಪತ್ತೆಯಾಗಿದ್ದಾರೆ. ಜು.1 ರಂದು ಮಧ್ಯಾಹ್ನ 3 ಗಂಟೆಯವರೆಗೆ ಪುತ್ತೂರಿನಲ್ಲಿದ್ದ ಇವರು ಆ ಬಳಿಕ ನಾಪತ್ತೆಯಾಗಿದ್ದು ಮೊಬೈಲ್ ಸ್ವಿಚ್ ಆಫ್ ಆಗಿದೆ.
ಇವರ ಮಗನ ಮದುವೆ ಜು.3 ರಂದು ನಡೆಯಲಿದೆ. ಜು. 2 ರಂದು ನಡೆಯಬೇಕಿದ್ದ ಮದರಂಗಿ ಶಾಸ್ತ್ರ ಅಪ್ಪನಿಲ್ಲದ ಕಾರಣಕ್ಕೆ ಮಗ ರದ್ದು ಮಾಡಿದ್ದಾರೆ. ಮನೆಯ ಯಜಮಾನ ಧಿಡೀರಣೆ ನಾಪತ್ತೆಯಾಗಿರುವುದು ಮತ್ತು ಮೊಬೈಲ್ ಸ್ವಿಚ್ ಆಫ್ ಆಗಿರುವುದು ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ. ಎಲ್ಲಿದ್ದಾರೆ ಎಂದು ಪೊಲೀಸರು ಅವರ ಮೊಬೈಲ್ ಆಧಾರದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.