ಜೂನ್ 30: ಶ್ರೀ ಗಜಾನನ ವಿದ್ಯಾಸಂಸ್ಥೆಯಲ್ಲಿ ಸಾಮೂಹಿಕ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ದೀಪ ಪ್ರಜ್ವಲನೆಯ ಮೂಲಕ ಶಾಲಾ ನಾಯಕಿ ಕು. ಶಾಸ್ತಾ ರೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹುಟ್ಟು ಹಬ್ಬ ಆಚರಿಸುತ್ತಿರುವ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕಿಯರು ತಿಲಕವನ್ನಿಟ್ಟು ಆರತಿ ಬೆಳಗಿ ಕೊಡುಗೆಯನ್ನು ನೀಡಿ ಶುಭಹಾರೈಸಿದರು. ಪ್ರಾಂಶುಪಾಲ ಕೆ ಶಾಮಣ್ಣ ಇವರು ಅತಿಥಿಗಳನ್ನು ಸ್ವಾಗತಿಸಿ, ಸಾಮೂಹಿಕ ಹುಟ್ಟು ಹಬ್ಬವನ್ನು ಆಚರಿಸುತ್ತಿರುವ ಮಹತ್ವವನ್ನು ತಿಳಿಸಿದರು. ’ಮಕ್ಕಳು ಜಾಗೃತರಾದರೆ ಮನೆಯೊಂದು ಜಾಗೃತವಾದಂತೆ’ ಎಂದು ಎರಡನೇ ತರಗತಿ ವಿದ್ಯಾರ್ಥಿನಿ ಪ್ರಣತಿ ಕುಂಟಿಕಾನ ಇವರ ಪೋಷಕ ಸತ್ಯಪ್ರಕಾಶ್ ಕುಂಟಿಕಾನ ತಿಳಿಸಿದರು. ವೇದಿಕೆಯಲ್ಲಿ ಪೋಷಕರಾದ ಚೇತನ್ ಬೊಮ್ಮೆಟ್ಟಿ, ತೇಜಸ್ವಿನಿ, ಸತೀಶ್ ಕೆಮ್ಮನಬಳ್ಳಿ, ರಾಕೇಶ್ ರೈ, ಹರಿರಾಜ್ ಭಂಡಾರಿ ಉಪಸ್ಥಿತರಿದ್ದರು. ಸಿಹಿತಿಂಡಿಯನ್ನು ವಿತರಿಸಲಾಯಿತು. ಕು. ಸ್ನೇಹಾ ಕಾರ‍್ಯಕ್ರಮವನ್ನು ನಿರೂಪಿಸಿದರು.