ಕಾಣಿಯೂರು : ಕೊಡಿಯಾಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂವಪ್ಪೆ-ಕಾಣಿಯೂರು ರಸ್ತೆ 2 ಕಿ.ಮೀ. ಸಂಪೂರ್ಣ ಕೆಸರುಮಯವಾಗಿದ್ದು, ರಸ್ತೆಯಲ್ಲಿ ವಾಹನ ಸವಾರರಿಗೆ,ಶಾಲಾ ಮಕ್ಕಳಿಗೆ, ಜನಸಾಮಾನ್ಯರಿಗೆ ನಡೆದುಕೊಂಡು ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು.
2 ಕಿ.ಮೀ. ರಸ್ತೆಯು ಸಂಪೂರ್ಣ ಕೆಸರುಮಯವಾದುದರಿಂದ ಊರಿನವರು, ಶಾಲಾ ಮಕ್ಕಳು 7 ಕಿ.ಮೀ. ದೂರ ಪರ್ಯಾಯ ಮಾರ್ಗವಾಗಿ ಹೋಗುವ ಪರಿಸ್ಥಿತಿ ಉಂಟಾಗಿದೆ. ಮೂವಪ್ಪೆ-ಕಾಣಿಯೂರು ಹದಗೆಟ್ಟ ರಸ್ತೆಯ ದುರಸ್ತಿ ಕಾರ್ಯವನ್ನು ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ (ರಿ.) ಕಲ್ಪಡ ಕೊಡಿಯಾಲ ವತಿಯಿಂದ ಸತತ ಎರಡು ದಿನಗಳ ಕಾಲ ಶ್ರಮದಾನದ ಮೂಲಕ ಮಾಡಲಾಯಿತು. ಶ್ರಮದಾನದಲ್ಲಿ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ನ ಸದಸ್ಯರುಗಳಾದ ಸುಬ್ರಹ್ಮಣ್ಯ ಕೆ.ಎಂ., ಹರ್ಷನ್ ಕೆ.ಟಿ., ಅಶ್ವಿನ್ ಕುಮಾರ್ ನಟ್ಟಿಹಿತ್ಲು, ಚೆನ್ನಪ್ಪ ಗೌಡ ಕಲ್ಪಡ, ಪುನೀತ್ ಅಂಗಾರಡ್ಕ, ಗಣೇಶ ಪೆರ್ಲೊಡಿ, ನವೀನ್ ಕೊಡೆಂಕಿರಿ, ಆನಂದ ಗೌಡ ಕಲ್ಪಡ, ಮನೋಹರ ಕಲ್ಪಡ, ಭರತ್ ಕಟ್ಟತ್ತಾರು, ದೇವಿಪ್ರಸಾದ್ ಗುತ್ತು, ಪದ್ಮನಾಭ ಗುತ್ತು, ಶ್ರೀಧರ ಕಲ್ಪಡ, ಮೋಹನ್ ಕೆ.ಟಿ., ಬಾಬು ಪೂಜಾರಿ, ತಾರನಾಥ ಕಲ್ಪಡ, ಜಯರಾಮ ಪೊಟ್ರೆ, ವಿಜಯ ಕುಮಾರಿ ಪೊಟ್ರೆ ಸಹಕರಿಸಿದರು.