ಕುರಿಯ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ, ಶಾಸಕರಿಗೆ ಸನ್ಮಾನ

0

ಕಾರ್ಯಕರ್ತರ ಪರಿಶ್ರಮದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ: ಶಾಸಕ ಅಶೋಕ್‌ ಕುಮಾರ್ ರೈ
ಪುತ್ತೂರು: ಪುತ್ತೂರಿನಲ್ಲಿ ಕಾಂಗ್ರೆಸ್ ಗೆಲ್ಲಲೇಬೇಕು ಎಂಬ ಕಾರ್ಯಕರ್ತರ ಒಗ್ಗಟ್ಟು ಮತ್ತು ಪರಿಶ್ರಮ ಈ ಬಾರಿ ಪುತ್ತೂರಿನಲ್ಲಿ ಕಾಂಗ್ರೆಸ್ ಗೆದ್ದಿದೆ ಈ ಗೆಲುವು ಕಾರ್ಯಕರ್ತರ ಗೆಲುವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.‌


ಅವರು ಕುರಿಯ ವಲಯ ಕಾಂಗ್ರೆಸ್ ವತಿಯಿಂದ ಕುರಿಯ ರಾಜೀವ ಗಾಂಧಿ ಸೇವಾಕೇಂದ್ರ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.


ಕಾಂಗ್ರೆಸ್ ಶಾಸಕರಿಲ್ಲದೆ ಕಾರ್ಯಕರ್ತರು ಸಂಕಷ್ಟದಲ್ಲಿದ್ದರು, ಅನೇಕ ನೋವುಗಳನ್ನು ಅನುಭವಿಸುತ್ತಿದ್ದರು. ಜನರ ಸೇವೆ ಮಾಡಲು ನಮ್ಮ ಕಾರ್ಯಕರ್ತರಿಗೆ ಸಾಧ್ಯವಾಗುತ್ತಿರಲಿಲ್ಲ ಇನ್ನುಮುಂದೆ ಅದೆಲ್ಲವೂ ಸುಗಮವಾಗಿ ನಡೆಯಲಿದೆ, ಪ್ರತೀಯೊಬ್ಬ ಕಾರ್ಯಕರ್ತನೂ ಈ ಕ್ಷೇತ್ರದ ಶಾಸಕರಂತೆ ಎಂದು ಕಾರ್ಯಕರ್ತರನ್ನು ಶಾಸಕರು ಹುರಿದುಂಬಿಸಿದರು. ಕಾಂಗ್ರೆಸ್ ಸರಕಾರ ಎಂದೆಂದೂ ಬಡವರನ್ನು ಕೈ ಬಿಡುವುದಿಲ್ಲ, ಬಡವರಿಗಾಗಿಯೇ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ, ಗ್ಯಾರಂಠಿ ಯೋಜನೆಯನ್ನು ಬಿಜೆಪಿ ಲೇವಡಿ ಮಾಡಿತ್ತು ಆದರೆ ದ ಕ ಯೋಜನೆಯನ್ನು ನೋಂದಣಿ ಮಾಡುವುದರಲ್ಲಿ ಪ್ರಥಮ ಸ್ಥಾನದಲ್ಲಿದ್ದು ಪಕ್ಷ ಬೇದವಿಲ್ಲದೆ ಎಲ್ಲರೂ ಗ್ಯಾರಂಟಿಯನ್ನು ಬೆಂಬಲಿಸಿದ್ದಾರೆ ಎಂಬುದು ಸಾಭೀತಾಗಿದೆ ಎಂದು ಹೇಳಿದರು. ಪಕ್ಷ ಬೇದವಿಲ್ಲದೆ ಎಲ್ಲರಿಗೂ ಸರಕಾರದ ಐದು ಗ್ಯಾರಂಟಿ ದೊರೆಯಲಿದ್ದು ಅದರ ಪ್ರಯೋಜನವನ್ನೂ ಪಕ್ಷ ಬೇದವಿಲ್ಲದೆ ಎಲ್ಲರೂ ಅನುಭವಿಸಬೇಕು ಎಂದು ಶಾಸಕರು ಹೇಳಿದರು.

ಕಾಂಗ್ರೆಸ್ ಗೆಲ್ಲಲೇಬೇಕು ಎಂದು ಪಣತೊಟ್ಟಿದ್ದೆವು; ಶಿವರಾಮ ಆಳ್ವ
ಕಾಂಗ್ರೆಸ್ ಉಸ್ತುವಾರಿ ಶಿವರಾಮ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ ಈ ಬಾರಿ ಕಾಂಗ್ರೆಸ್ ಗೆಲ್ಲಲೇಬೇಕು ಎಂದು ಕಾರ್ಯಕರ್ತರೆಲ್ಲರೂ ಪಣ ತೊಟ್ಟಿದ್ದರು. ಹಗಲಿರುಳೆನ್ನದೆ ಪಕ್ಷಕ್ಕಾಗಿ ಕೆಲಸ ಮಾಡಿದ ಕಾರ್ಯಕರ್ತರ ಮನಸ್ಸಿಗೆ ಎಂದೂ ನೋವುಂಟಾಗಬಾರದು. ಯಾವುದೇ ಪ್ರತಿಪಲಾಪೆಕ್ಷೆಯಿಲ್ಲದೆ ಗ್ರಾಮ ಗ್ರಾಮಗಳಲ್ಲಿ ಕಾರ್ಯಕರ್ತರು ಮನೆ ಮನೆ ಭೇಟಿ ಮಾಡಿ ಮತಯಾಚನೆ ಮಾಡಿದ್ದಾರೆ ಇದೆಲ್ಲದರ ಪರಿಶ್ರಮ ಪಲಿತಾಂಶ ರೂಪದಲ್ಲಿ ಹೊರಬಂದಿದೆ. ಕುರಿಯ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ಶ್ರಮವಹಿಸಿದ್ದಾರೆ, ಶಾಸಕರಿಲ್ಲದ ಸಮಯದಲ್ಲಿ ಇಲ್ಲಿನ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸಿದಾಗಲೂ ಅದನ್ನು ತಡೆಯುವ ಕೆಲಸವನ್ನು ನಾವೆಲ್ಲರೂ ಒಟ್ಟಾಗಿ ಎದುರಿಸಿದ್ದೇವೆ. ಪಕ್ಷದ ಕಾರ್ಯಕರ್ತರೆಲ್ಲರೂ ಎಂದೆಂದೂ ಒಟ್ಟಾಗಿ ಇರಬೇಕು, ಪಕ್ಷಕ್ಕಾಗಿ ಕೆಲಸ ಮಾಡುವವರಾಗಗಬೇಕು, ಒಗ್ಗಟ್ಟು ಮುರಿಯುವವರನ್ನು ನಾವು ದೂರ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ಹೇಳಿದರು.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಉಪ್ಪಿನಂಗಡಿ- ವಿಟ್ಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಮುರಳೀದರ್ ರೈ ಮಠಂತಬೆಟ್ಟು ಸಭೆಯನ್ನುದ್ದೇಶಿಸಿ ಮಾತನಾಡಿ ಪಕ್ಷದ ಅಭ್ಯರ್ಥಿಯ ಗೆಲುವು ಕಾರ್ಯಕರ್ತರಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದೆ. ಈ ಉತ್ಸಾಹ ಎಂದೆಂದೂ ಉಳಿಯಬೇಕಾದರೆ ಕಾರ್ಯಕರ್ತರ ಜೊತೆ ನಾಯಕರಾದವರು ನಿರಂತರ ಸಂಪರ್ಕ ಇರಿಸಬೇಕು. ಬೂತ್ ಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸಬೇಕು. ಕಾರ್ಯಕರ್ತರ ನೋವಿಗೆ ಸ್ಪಂದಿಸುವ ಮೂಲಕ ಅವರಲ್ಲಿ ಧೈರ್ಯ ತುಂಬುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.


ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ದಿನಾರ್, ಆರ್ಯಾಪು ಸಿ ಎಬ್ಯಾಂಕ್ ನಿರ್ದೇಶಕರಾದ ಸುರೇಂದ್ರ ರೈ ಬಳ್ಳಮಜಲು,ಬೂತ್ ಅಧ್ಯಕ್ಷರುಗಳಾದ ಸೂಪಿ, ಆಸಿಫ್, ಇಬ್ರಾಹಿಂ ಇಡಬೆಟ್ಟು, ಮಾಜಿ ಗ್ರಾಪಂ ಸದಸ್ಯ ಜಯಪ್ರಕಾಶ್ ರೈ ಬಳ್ಳಮಜಲು, ರಮೇಶ್ ರೈ ಡಿಂಬ್ರಿ, ನವೀನ್ ರೈ ಬಳ್ಳಮಜಲು, ದಿವಾಕರ ರೈ ಬಳ್ಳಮಜಲು, ಸದಾಶಿವ ಶೆಟ್ಟಿ , ಐತಪ್ಪ ನಾಯ್ಕ, ಸಂಜೀವ ರೈ, ಮೋನಪ್ಪ ಪೂಜಾರಿ, ಭವಿತ್, ದಯಾನಂದ , ನಾರಾಯಣ ರೈ ಬಳ್ಳಮಜಲು, ಜತ್ತಪ್ಪ ಪೂಜಾರಿ, ಉಮೇಶ್, ಯಾದವ, ಕಿಟ್ಟ ಮೊದಲಾದವರು ಉಪಸ್ತಿತರಿದ್ದರು. ಕಾರ್ಯಕ್ರಮದಲ್ಲಿ ಶಾಸಕರನ್ನು ವಲಯ ಕಾಂಗ್ರೆಸ್ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕುರಿಯ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸನತ್ ರೈ ಸ್ವಾಗತಿಸಿದರು.ಗ್ರಾಪಂ ಸದಸ್ಯ ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here