ಮೆಡಿಕಲ್ ಕಾಲೇಜು ಈ ಭಾಗದ ಹಿರಿಮೆಯನ್ನು ಹೆಚ್ಚಿಸಲಿದೆ: ಶಾಸಕ ಅಶೋಕ್ ರೈ
ಪುತ್ತೂರು:ಪುತ್ತೂರಿನ ಜನತೆಯ ಬಹುಕಾಲದ ಬೇಡಿಕೆ ಈಡೇರುವ ಕಾಲ ಬಂದಿದೆ, ಬನ್ನೂರಿನಲ್ಲಿ ಜಾಗ ಗುರುತಿಸಲಾಗಿದೆ. ಈ ಭಾಗದಲ್ಲಿ ಮೆಡಿಕಲ್ ಕಾಲೇಜು ಆರಂಭವಾದರೆ ಅದು ಈ ಭಾಗದ ಹಿರಿಮೆಯನ್ನು ಹೆಚ್ಚಿಸಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಜು.2 ರಂದು ಬನ್ನೂರಿನ ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಸಭಾಂಗಣದಲ್ಲಿ ಬನ್ನೂರು ಹಾಗೂ ಸೇಡಿಯಾಪಿನ ಸಾರ್ವಜನಿಕರು ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪುತ್ತೂರಿಗೆ ಮೆಡಿಕಲ್ ಕಾಲೇಜು ಆಗಬೇಕೆಂಬುದು ಎಲ್ಲರ ಕನಸಾಗಿತ್ತು. ಇದಕ್ಕಾಗಿ ಹೋರಾಟ ಸಮಿತಿಯನ್ನು ರಚನೆ ಮಾಡಲಾಗಿದೆ. ಎಂ ಬಿ ವಿಶ್ವನಾಥ ರೈ ನೇತೃತ್ವದ ತಂಡ ನಿರಂತರ ಹೋರಾಟವನ್ನು ಮಾಡುತ್ತಿದೆ. ಈ ಬಾರಿ ಕನಸು ನನಸಾಗುವ ಹಂತಕ್ಕೆ ಬಂದಿದೆ ಎಂದು ಹೇಳಿದರು. ಇಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾದರೆ ಬನ್ನೂರು ಸುತ್ತಮುತ್ತ ಅಭಿವೃದ್ದಿಯಾಗುವುದರ ಜೊತೆಗೆ ಇಲ್ಲಿಗೆ ಸಾವಿರಾರು ಕೋಟಿ ಅನುದಾನ ಹರಿದುಬರಲಿದೆ , ಅನೇಕ ಜನರಿಗೆ ಉದ್ಯೋಗವೂ ದೊರೆಯಲಿದೆ, ನಿಮ್ಮ ಭೂಮಿಗೆ ಬೆಲೆಯೂ ಹೆಚ್ಚಾಗುತ್ತದೆ ಎಂದು ಹೇಳಿದರು.
ಕೊಯಿಲದಲ್ಲಿರುವ ನೂರಾರು ಎಕ್ರೆ ಖಾಲಿ ಜಾಗದಲ್ಲಿ ಖಾಸಗಿಯವರಿಂದ ಪೌಲ್ಟ್ರಿ ಫಾರಂ ಉದ್ಯಮವನ್ನು ಆರಂಭಿಸುವಂತೆ ಈಗಾಗಲೇ ಸಚಿವರಿಗೆ ಮನವಿ ಮಾಡಿದ್ದೇನೆ. ಸರಕಾರದ ಅನುದಾನವಿಲ್ಲದೆ ಖಾಸಗಿಯವರೇ ಸ್ವಂತ ಖರ್ಚಿನಲ್ಲಿ ಆ ಜಾಗದಲ್ಲಿ ಉದ್ಯಮ ಆರಂಭ ಮಾಡಿದರೆ ನಮ್ಮೂರಿನ ಜನರಿಗೆ ಉದ್ಯೋಗವೂ ದೊರೆಯುತ್ತದೆ ಎಂದು ಹೇಳಿದರು. ತಾನು ಶಾಸಕನಾಗಿ ಇರುವ ತನಕ ಪುತ್ತೂರು ಕ್ಷೇತ್ರದ ಅಭಿವೃದ್ದಿಗೆ ನಿರಂತರ ಶ್ರಮ ಹಾಗೂ ಅನುದಾನವನ್ನು ತರುವುದಾಗಿ ಶಾಸಕರು ಭರವಸೆ ನೀಡಿದರು.
ದೇವಸ್ಥಾನದಲ್ಲಿ ರಾಜಕೀಯ ಇಲ್ಲ
ದೇವಸ್ಥನದಲ್ಲಿ ಯಾವುದೇ ರಾಜಕೀಯ ಇಲ್ಲ. ದೇವಳಕ್ಕೆ ಬರುವಾಗ ರಾಜಕೀಯವನ್ನು ಹೊರಗಿಟ್ಟು ಬರಬೇಕು. ದೇವಳಕ್ಕೆ ಬಂದ ಮೇಲೆ ದೇವರ ಸೇವೆ ಮಾತ್ರ ನಡೆಯಬೇಕು. ದೇವಲದೊಳಗೆ ಪಕ್ಷ ಬೇದವಿಲ್ಲದೆ ಎಲ್ಲರೂ ಒಂದೇ ಆಗಿರುತ್ತಾರೆ, ಆ ರೀತಿಯ ವಾತಾವರಣವನ್ನು ಎಲ್ಲಾ ಕಡೆ ನಿಮಾಣ ಮಾಡಬೇಕು ಎಂದು ಶಾಸಕರು ಸಭೆಯಲ್ಲಿ ತಿಳಿಸಿದದರು.
ಸನ್ಮಾನ ಕಾರ್ಯಕ್ರಮ
ಇದೇ ಸಂದರ್ಭದಲ್ಲಿ ಬನ್ನೂರು ಮತ್ತು ಸೇಡಿಯಾಪುನ ಗ್ರಾಮದ ಸಾರ್ವಜನಿಕರ ಪರವಾಗಿ ಶಾಸಕರನ್ನು ಶಾಲು ಹೊದಿಸಿ, ಸ್ಮರನಿಕೆ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕಿರಿಸಿ ಮಾತನಾಡಿದ ಶಾಸಕರು ಇಂದು ನಡೆದ ಸನ್ಮಾನ ರಾಜಕೀಯ ಪಕ್ಷದಿಂದ ನಡೆದ ಸನ್ಮಾನವಲ್ಲ ಸಾರ್ವಜನಿಕರು ನಡೆಸಿದ ಸನ್ಮಾನ ಈ ಸನ್ಮಾನ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಹೇಳಿದರು.
ಶಾಸಕರು ಅಭಿವೃದ್ದಿ ಪರ : ಭಾಸ್ಕರ ಕೋಡಿಂಬಾಳ
ಅಭಿನಂದನಾ ಬಾಷಣ ಮಾಡಿದ ನ್ಯಾಯವಾದಿ ಭಾಸ್ಕರ ಕೋಡಿಂಬಾಳ ಮಾತನಾಡಿ ಪುತ್ತೂರು ಶಾಸಕ ಅಶೋಕ್ ರೈ ಅಭಿವೃದ್ದಿ ಪರ ಇರುವ ರಾಜಕಾರಣಿ. ಶಾಸಕರಾದ ಒಂದೇ ವಾರದಲ್ಲಿ ಮೆಡಿಕಲ್ ಕಾಲೇಜು ಕಡತವನ್ನು ಮುಖ್ಯಮಂತ್ರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ. ಬನ್ನೂರಿನಲ್ಲಿ ಕಾಲೇಜು ಆರಂಭವಾಗುತ್ತಿರುವುದು ನಮಗೆಲ್ಲರಿಗೂ ಸಂತೋಷದ ಸಂಗತಿಯಾಗಿದೆ. ಕಾಲೇಜು ಆರಂಭವಾದ ಬಳಿಕ ಬನ್ನೂರಿನ ಚಿತ್ರಣವೇ ಬದಲಾಗಲಿದೆ. ಬಡವರ ಪರ ಕಾಳಜಿ ಇರುವ ಶಾಸಕರು ಬಡವರಿಗಾಗಿಯೇ ತನ್ನ ಜೀವನವನ್ನು ಮುಡಿಪಾಗಿಟ್ಟವರು, ಶಾಸಕನಾಗುವ ಮೊದಲೇ ಬಡವರಿಗೆ ಸೂರು ಕಲ್ಪಿಸಿದ ಇವರು ಎಂದೆಂದೂ ಬಡವರನ್ನು ಕೈ ಬಿಡಲಾರರು ಎಂಬ ನಂಬಿಕೆ ಎಲ್ಲರಿಗೂ ಇದೆ. ಪುತ್ತೂರು ಕ್ಷೇತ್ರದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯಲಿದೆ ಎಂದು ಹೇಳಿದರು.
ಬನ್ನೂರು ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಾಜಶೇಖರ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ, ಬನ್ನೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರಭಟ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷ ಮುರಳೀದರ ರೈ ಮಠಂತಬೆಟ್ಟು, ನಿರಂಜನ್ ರೈ ಮಠಂತಬೆಟ್ಟು, ಬೂತ್ ಅಧ್ಯಕ್ಷ ಡೆನ್ನಿಸ್ ಮಸ್ಕರೇನಸ್ ಸೇಡಿಯಾಪು, ಉಲ್ಲಾಸ್ ಕೋಟ್ಯಾನ್ ಕೋಡಿಂಬಾಡಿ, ವಿಕ್ರಂ ಅನಂತರ, ಕುಂಟ್ಯಾನ ಸದಾಶಿವ ದೇವಸ್ಥಾನದ ಮುಖ್ಯಸ್ಥ ರಾಮಣ್ಣ ಗೌಡ ಅಲಂಗ, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ, ಕೃಷಿಕ ವಿಶ್ವಪ್ರಸಾದ್, ಉದ್ಯಮಿ ರಾಘವ ಮಯ್ಯ, ದರ್ಣಪ್ಪ ಮೂಲ್ಯ ಮೊದಲಾದವರು ಉಪಸ್ಥಿತರಿದ್ದರು.
ಚಂದ್ರಾಕ್ಷ ಗೌಡ ಬನ್ನೂರು ಸ್ವಾಗತಿಸಿದರು.ಸಂತೋಷ್ ಮೆಲ್ವಿನ್ ಮಸ್ಕರೇನಸ್ ,ಸಂತೋಷ್ ಕುಲಾಲ್, ಮೆಲ್ವಿ, ಸತೀಶ್ ಪೂಜಾರಿ, ಉಮೇಶ್ ಗೌಡ, ಸುಬ್ರಹ್ಮಣ್ಯ ಅಡೆಂಜಿಲಡ್ಕ, ಸಂದೇಶ್, ಶೈಲೇಶ್, ಪದ್ಮಾವತಿ, ಲತಾ, ಸೂರಪ್ಪ ಪೂಜರಿ, ಶುಭ, ವಿನೋಲಿಯಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.