ವಿವೇಕಾನಂದ ಕಾಲೇಜಿನಲ್ಲಿ ಗೇರು ಬೆಳೆಯಲ್ಲಿ ಉದ್ಯಮ ಶೀಲತೆ ಅಭಿವೃದ್ದಿ ಕಾರ್ಯಗಾರ

0

ಪುತ್ತೂರು: ;ಪುತ್ತೂರು ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ ವ್ಯವಹಾರ ಆಡಳಿತ ವಿಭಾಗ ಹಾಗೂ ಐಕ್ಯೂಎಸಿ ಇದರ ಸಹಯೋಗದಲ್ಲಿ ಪುತ್ತೂರಿನ ಭಾ.ಕೃ.ಸಂ.ಪ- ಗೇರು ಸಂಶೋಧನಾಲಯ ಇಲ್ಲಿನ ಕೃಷಿ ಉದ್ಯಮಶೀಲ ತರಬೇತಿ ಕೇಂದ್ರದಲ್ಲಿ, ಗೇರು ಬೆಳೆಯಲ್ಲಿ ಉದ್ಯಮಶೀಲತೆ ಅಭಿವೃದ್ದಿ ಎನ್ನುವ ವಿಷಯದಲ್ಲಿ ಒಂದು ದಿನದ ಮಾಹಿತಿ ಕಾರ್ಯಗಾರ ಜೂ.30ರಂದು ನಡೆಯಿತು.

ಸಂಶೋಧನಾಲಯದ ನಿರ್ದೇಶಕ ಡಾ. ಜೆ. ದಿನಕರ ಅಡಿಗ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ “ಇಡೀ ಭಾರತದಲ್ಲಿ ಗೇರು ಬೆಳೆಗೆ ಒಳ್ಳೆಯ ಮಾರುಕಟ್ಟೆಯ ಅವಕಾಶವಿದ್ದು, ಈ ಕ್ಷೇತ್ರವನ್ನು ಕೈಗೆತ್ತಿಕೊಂಡಲ್ಲಿ ಉತ್ತಮವಾದ ಆದಾಯವನ್ನು ಜೀವನದಲ್ಲಿ ಪಡೆಯಲು ವಿಫುಲ ಅವಕಾಶಗಳು ಇದೆ. ಇಡೀ ಕರ್ನಾಟಕ ಮತ್ತು ಭಾರತದಲ್ಲಿ, ಗೇರು ಬೆಳೆಗಳ ಅತ್ಯುನ್ನತವಾದ ಸಂಶೋಧನೆ ಮತ್ತು ಉದ್ಯಮಶೀಲತೆಯ ತರಬೇತಿಯು ನಮ್ಮ ಸಂಸ್ಥೆಯಲ್ಲಿ ಉನ್ನತ ಗುಣಮಟ್ಟದಲ್ಲಿ ಸಿಗುತ್ತಿದ್ದು ವ್ಯವಹಾರ ಆಡಳಿತ ನಿರ್ವಹಣಾ ವಿದ್ಯಾರ್ಥಿಗಳೂ ಕೂಡ ಇದರ ಸದುಪಯೋಗಪಡಿಸಿಕೊಂಡು, ಸ್ವಂತ ಉದ್ಯಮವನ್ನು ನಡೆಸಲು ಹೇರಳವಾದ ಅವಕಾಶವಿದೆ” ಎಂದರು.

ಈ ಸಂದರ್ಭದಲ್ಲಿ ಕೊಯ್ಲೋತ್ತರ ತಂತ್ರಜ್ಞಾನ ವಿಭಾಗ ಹಾಗೂ ಕೃಷಿ ಉದ್ಯಮ ತರಬೇತಿ ಕೇಂದ್ರದ ಪ್ರಧಾನ ವಿಜ್ಞಾನಿ ಡಾ. ಡಿ. ಬಾಲಸುಬ್ರಮಣಿಯನ್, ಹಾಗೂ ಬೆಳೆ ನಿರ್ವಹಣಾ ವಿಭಾಗದ ವಿಜ್ಞಾನಿ ಡಾ. ವಿ. ತೊಂಡೈಮಾನ್ ಇವರು ಗೇರುಬೆಳೆಯ ಬಗ್ಗೆ ಮಾಹಿತಿ ಹಾಗೂ ಈ ಕ್ಷೇತ್ರದಲ್ಲಿನ ಅನೇಕ ಉದ್ಯಮ ಅವಕಾಶಗಳ ಬಗ್ಗೆ ಬಹಳ ಅರ್ಥಪೂರ್ಣವಾಗಿ ತರಬೇತಿಯನ್ನು ನೀಡಿದರು.

ಪುತ್ತೂರಿನ ವಿವೇಕಾನಂದ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ, ರೇಖಾ ಪಿ., ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here