ಪುತ್ತೂರು ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐಯ ಪರೀಕ್ಷಾ ಕೇಂದ್ರದಲ್ಲಿ ಜು.3 ರಿಂದ ಅಖಿಲ ಭಾರತ ವೃತ್ತಿ ಪರೀಕ್ಷೆ ಆರಂಭಗೊಂಡಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ಐಟಿಐ, ವಿಟ್ಲದ ಸರಕಾರಿ ಐಟಿಐ, ವಿಟ್ಲದ ಸುಪ್ರಜಿತ್ ಐಟಿಐ ಮತ್ತು ಒಡಿಯೂರಿನ ಗುರುದೇವಾನಂದ ಐಟಿಐ ಗಳ ವಿವಿಧ ವೃತ್ತಿಗಳ ಒಟ್ಟು 596 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.