ಬಡಗನ್ನೂರು ಶಾಲೆಯಲ್ಲಿ ಕೋಟಿ ವೃಕ್ಷ ಅಭಿಯಾನ- ವನಮಹೋತ್ಸವ ಆಚರಣೆ

0

ಬಡಗನ್ನೂರು: ಸಾಮಾಜಿಕ ಅರಣ್ಯ ವಲಯ ಪುತ್ನೂರು ಇವರ ಸಹಯೋಗದಲ್ಲಿ ಬಡಗನ್ನೂರು  ದ.ಕ. ಜಿ.ಪಂ. ಉ.ಹಿ.ಪ್ರಾ. ಶಾಲೆಯಲ್ಲಿ ಕೋಟಿ ವೃಕ್ಷ ಅಭಿಯಾನ, ವನಮಹೋತ್ಸವ 2023’  ಅಚರಿಸಲಾಯಿತು..ಸಾಮಾಜಿಕ ವಲಯ ಅರಣ್ಯ ವಿದ್ಯಾರಾಣಿ, ಹಾಗೂ ಶಾಲಾ ಪಾಭಾರ ಮುಖ್ಯ ಶಿಕ್ಷಕಿ   ಹರಿಣಾಕ್ಷಿ ಎ ಹಲಸಿನ ಗಿಡ ನೆಡುವ ಮೂಲಕ ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಸಾಮಾಜಿಕ ವಲಯ ಅರಣ್ಯ ವಿದ್ಯಾರಾಣಿ, ಮಾತನಾಡಿ  ಇಲಾಖಾ ವತಿಯಿಂದ ಇನ್ನೂ ಹಲವು ವಿವಿಧ ಹಣ್ಣುಗಳ ಗಿಡಗಳನ್ನು ನೆಟ್ಟು ಕೋಡಲಾಗುವುದು. ಪ್ರತಿ  ಗಿಡದ ಜವಾಬ್ದಾರಿಯನ್ನು ಮಕ್ಕಳಿಗೆ ವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಪರಿಸರದ ಮೇಲಿನ ಕಾಳಜಿ ಹೆಚ್ಚಾಗುತ್ತದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ  ಸಾಮಾಜಿಕ ಉಪ ವಲಯ ಅರಣ್ಯಾಧಿಕಾರಿ ಕೃಷ್ಣ,  ತಾಂತ್ರಿಕ ಸಹಾಯಕಿ ವರ್ಷಾ,ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಾಬು ಮೂಲ್ಯ, ಹಾಗೂ ಎಸ್ ಡಿ.ಯಂ.ಸಿ ಸದಸ್ಯರು, ಅಕ್ಷರದಾಸೋಹ ಸಿಬ್ಬಂದಿಗಳು ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಶಾಲಾ ಶಿಕ್ಷಕಿಯರಾದ ರಮ್ಯಾ ಸ್ವಾಗತಿಸಿದರು, ವಿಜಯಲಕ್ಷಿ ವಂದಿಸಿರು., ಕುಮಾರಿ ಸೌಮ್ಯ ಸಹಕಾರಿಸಿದರು. 

LEAVE A REPLY

Please enter your comment!
Please enter your name here