ಜು.8: ಬಿದಿರು ತಳಿಗಳ ಬೆಳೆಸುವ ವಿಧಾನ, ಮಾರುಕಟ್ಟೆ ಸೌಲಭ್ಯದ ರೈತರ ಸಭೆ

0

ಪುತ್ತೂರು: ಮಾನವನ ಜನನದಿಂದ ಮರಣದ ತನಕ ಅಗತ್ಯವಾಗಿರುವ ಬಿದಿರು ದಿನನಿತ್ಯದ ಹಲವು ವಸ್ತು ತಯಾರಿಕೆಯ ಮೂಲ ವಸ್ತುವಾಗಿದ್ದು, ಈ ಕುರಿತು ಬಿದಿರು ತಳಿಗಳು, ಅದನ್ನು ಬೆಳೆಸುವ ವಿದಾನ ಮತ್ತು ಮಾರಕಟ್ಟೆ ಸೌಲಭ್ಯಗಳ ವಿಚಾರದಲ್ಲಿ ರೈತರ ಸಭೆಯು ಪುತ್ತೂರು ಪೊಲೀಸ್ ವಸತಿಗೃಹ ಅಡ್ಡ ರಸ್ತೆಯ ಪಂಚವಟಿ ಸಭಾ ಭವನದಲ್ಲಿ ಜು.8ರಂದು ನಡೆಯಲಿದೆ ಎಂದು ಬಿದಿರು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಸಂಚಾಲಕ ಯಂ.ಜಿ.ಸತ್ಯನಾರಾಯಣ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಬಿದಿರು ಭವಿಷ್ಯದ ಆರ್ಥಿಕ ಬೆಳೆಯಾಗಿದೆ. ಮಳೆ ನೀರು ಇಂಗಿಸಿಕೊಳ್ಳುವ, ಮಣ್ಣಿನ ಸವಕಳಿ ತಡೆಯುವ ಮುಳ್ಳು ಇಲ್ಲದ ಸಸ್ಯ ವರ್ಗವಾಗಿದೆ. ಹಳದಿ ರೋಗ ಪೀಡಿತ ಅಡಿಕೆ, ರಬ್ಬರ್, ಗೇರು ತೋಟಗಳಲ್ಲಿ ಪರ್ಯಾಯ ಬೆಳೆಯಾಗಿ ಅಷ್ಟೇ ಆರ್ಥಿಕ ಮೌಲ್ಯ ಉತ್ಪಾದನಾ ಕೃಷಿಯಾಗಿಯೂ ಇದನ್ನು ಬೆಳೆಸಬಹುದು. ಈಗಾಗಲೇ ನಮ್ಮ ಸಂಘದ ಮೂಲಕ 2020ರಲ್ಲಿ 10ಸಾವಿರಕ್ಕಿಂತಲೂ ಜಾಸ್ತಿ ವಿವಿಧ ತಳಿಯ ಅಂಗಾಂಶ ಕೃಷಿಯ ಮೂಲಕ ಅಭಿವೃದ್ಧಿ ಪಡಿಸುವ ಉತ್ತಮ ಗುಣಮಟ್ಟದ ಬಿದಿರು ಗಿಡಗಳನ್ನು ಸುಮಾರು 600 ಮಂದಿ ಕೃಷಿಕರಿಗೆ ವಿತರಣೆ ಮಡಲಾಗಿದೆ ಎಂದ ಅವರು ಬಿದಿರಿನಿಂದ ತಯಾರಿಸಿದ ಆರೋಗ್ಯದಾಯಕ ಮತ್ತು ಗುಣಮಟ್ಟದ ಬಟ್ಟೆಗಳನ್ನು ಪ್ರದರ್ಶಿಸಿದರು. ಇದೀಗ ಅದರ ಅಭಿವೃಧ್ಧಿ, ಮಾರುಕಟ್ಟೆ ಸೌಲಭ್ಯಗಳ ಕುರಿತು ಮಾಹಿತಿ ಸಭೆಯನ್ನು ನಡೆಸಲಾಗುವುದು. ಬೆಳಿಗ್ಗೆ ಗಂಟೆ 10ಕ್ಕೆ ಸಭೆ ಆರಂಭಗೊಳ್ಳಲಿದೆ. ಕರಾವಳಿ ಪ್ರದೇಶಕ್ಕೆ ಸೂಕ್ತವಾದ ಹಲವು ಬಿದಿರು ತಳಿಗಳು ಮತ್ತು ಅವುಗಳ ಕೃಷಿ ಕುರಿತು ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಮುಖ್ಯಸ್ಥ ಪ್ರೊ.ರಾಮಕೃಷ್ಣ ಹೆಗ್ಗಡೆಯವರು ಮಾಹಿತಿ ನೀಡಲಿದ್ದಾರೆ. ಅಗರಬತ್ತಿ ಉದ್ಯಮದಲ್ಲಿ ಬಿದಿರಿನ ಉಪಯೋಗ ಮತ್ತು ಬಿದಿರು ಮತ್ತು ಅಗರಬತ್ತಿ ತಯಾರಿಕೆಗೆ ಬೇಕಾಗುವ ಅಂಟಿಗೆ ಲೂಸಿಯಾ ಸಸ್ಯವನ್ನು ಬೆಳೆಸಲು ರೈತರನ್ನು ಪ್ರೋತ್ಸಾಹಿಸಲು ಮೈಸೂರು ಸೈಕಲ್ ಬ್ರಾಂಡ್ ಅಗರಬತ್ತಿಯ ಕಿರಣ್ ಕುಮಾರ್ ಅವರು ಮಾಹಿತಿ ನೀಡಲಿದ್ದಾರೆ. ಬಿದಿರು ಖರೀದಿ ಮತ್ತು ಮಾರುಕಟ್ಟೆ ಮಾಹಿತಿಗಳ ಕುರಿತು ಬೆಂಗಳೂರು ವೇಳು ಇಂಡಸ್ಟ್ರೀ ಪೌಂಡೇಶನ್ ಇದರ ವೇಳು ಅವರು ಮಾಹಿತಿ ನೀಡಲಿದ್ದಾರೆ ಎಂದವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬಿದಿರು ಯೋಜನೆಯ ಸಂಚಾಲಕ ಮೂಲಚಂದ್ರ, ಭಾರತೀಯ ಕಿಸಾನ್ ಸಂಘದ ಕರ್ನಾಟಕ ಪ್ರಾಂತ ಕಾರ್ಯಕಾರಿ ಸಮಿತಿ ಸದಸ್ಯ ಸುಬ್ರಾಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here