ವಿಟ್ಲ: ಪುತ್ತೂರು ಮುಖ್ಯ ರಸ್ತೆಯ ಸ್ಮಾರ್ಟ್ ಸಿಟಿ ಕಮರ್ಶಿಯಲ್ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಉದ್ಘಾಟನೆಗೊಂಡ ಸಂಪೂರ್ಣ ಹವಾನಿಯಂತ್ರಿತ ವಿಶಾಲವಾದ ಆಭರಣ ಮಳಿಗೆ ಸಪ್ತ ಜ್ಯವೆಲ್ಸ್ ನಲ್ಲಿ ಉದ್ಘಾಟನಾ ಸಮಾರಂಭದ ಅಂಗವಾಗಿ ಏರ್ಪಡಿಸಲಾಗಿದ್ದ ಲಕ್ಕಿ ಗ್ರಾಹಕರ ಆಯ್ಕೆ ಜು.8ರಂದು ನಡೆಯಿತು.
ಸಪ್ತ ಜ್ಯುವೆಲ್ಸ್ ಜೂ.5ರಂದು ಉದ್ಘಾಟನೆಗೊಂಡಿದ್ದು, ಸಂಸ್ಥೆ ತನ್ನ ಗ್ತಾಹಕರಿಗಾಗಿ ಜೂ. 30ರವರೆಗೆ ರಿಯಾಯಿತಿ ಕೊಡುಗೆಗಳನ್ನು ಘೋಷಿಸಿತ್ತು. ಸಾವಿರಾರು ಅದೃಷ್ಟ ಚೀಟಿಗಳನ್ನು ಗ್ರಾಹಕರು ಪೆಟ್ಟಿಗೆಯಲ್ಲಿ ಹಾಕಿದ್ದರು. ಗ್ರಾಹಕರಾದ ಅಳಿಕೆಯ ನಿವೃತ್ತ ಮುಖ್ಯ ಶಿಕ್ಷಕ ಪುಂಡರೀಕ ರಾವ್ ಪುಣಚರವರು ಅದೃಷ್ಟ ಶಾಲಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿದರು. ಅದೃಷ್ಟ ಚೀಟಿ ಸಂಖ್ಯೆ 3355 ಆಯ್ಕೆಯಾಗಿದ್ದು 1 ಪವನ್ ನೆಕ್ಲೆಸ್ ಅನ್ನು ಗೆದ್ದುಕೊಂಡಿದೆ. ಇದರ ಹಸ್ತಾಂತರ ಕಾರ್ಯಕ್ರಮ ಜು.12ರಂದು ಸಾಯಂಕಾಲ ಸಂಸ್ಥೆಯಲ್ಲಿ ನಡೆಯಲಿದೆ.
ಗ್ರಾಹಕರಾದ ಹರ್ಷ ಪುಣಚ, ಪಾಲುದಾರರಾದ ಅಜಕ್ಕಳ ಶ್ಯಾಮ ಭಟ್, ಸುದರ್ಶನ್ ಕುಮಾರ್ ಇರ್ಕಲಾಜೆ, ಸುಕುಮಾರ ಕಲ್ಲಮಜಲು, ನಿಶಾ ಪ್ರಶಾಂತ ಸರಳಾಯ, ಕೃಷ್ಣ ಪ್ರಸಾದ್ ಕಡವ, ಗೋವಿಂದರಾಜ ಕಲ್ಲಮಜಲು, ದೇವಿಪ್ರಸಾದ್ ಚಂಗಲ್ಪಾಡಿ, ಶಿವಪ್ರಕಾಶ್ ಪಂಜಿಬಲ್ಲೆ, ಸಿಬ್ಬಂದಿಗಳಾದ ಗಣೇಶ್ ಕಿರಣ್, ಜಯ ಪ್ರಕಾಶ್, ಗುರುರಾಘವೇಂದ್ರ, ಚರಣ್, ಭವ್ಯ, ರಮ್ಯ, ತೃಪ್ತಿ ಮೊದಲಾದವರು ಉಪಸ್ಥಿತರಿದ್ದರು.