ರೋಟರಿ ಪುತ್ತೂರು ಈಸ್ಟ್ ಪದಪ್ರದಾನ

0

ರೋಟರಿಯಿಂದ ಸಮಾಜದ ಮಾನಸಿಕ ಆರೋಗ್ಯ ವೃದ್ಧಿ-ರಂಗನಾಥ್ ಭಟ್

ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯು ವಿಶ್ವದಲ್ಲಿನ ಅತೀ ದೊಡ್ಡ ಮಾರಕ ರೋಗವೆನಿಸಿದ ಪೋಲಿಯೋವನ್ನು ನಿರ್ಮೂಲನೆ ಮಾಡಿ ಮನುಕುಲ ಗುರುತಿಸುವಂತಹ ಕೈಂಕರ್ಯ ಮಾಡಿದ್ದಲ್ಲದೆ ಇನ್ನೂ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ಒಂದರ್ಥದಲ್ಲಿ ರೋಟರಿ ಸಂಸ್ಥೆಯು ಸಮಾಜದ ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಕೆಲಸ ಮಾಡುತ್ತಿದೆ ಎಂದು ರೋಟರಿ ವಲಯ ಏಳರ ಅಸಿಸ್ಟೆಂಟ್ ರೋಟರಿ ಕೋ-ಆರ್ಡಿನೇಟರ್, ಪಿಡಿಜಿ ರಂಗನಾಥ್ ಭಟ್‌ರವರು ಹೇಳಿದರು.

ಜು.9 ರಂದು ಮನೀಷಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಈಸ್ಟ್‌ ನ 2023-24ನೇ ಸಾಲಿನ ಪದಪ್ರದಾನ ಸಮಾರಂಭದಲ್ಲಿ ಅವರು ಪದಪ್ರದಾನ ಅಧಿಕಾರಿಯಾಗಿ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿ ಮಾತನಾಡಿದರು. ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ, ವೈವಿಧ್ಯತೆ ರೋಟರಿಯ ವೈಶಿಷ್ಟ್ಯತೆಗಳಲ್ಲೊಂದು. ಪ್ರಸ್ತುತ ವಿವಿಧ ಕಾರಣಗಳಿಗಾಗಿ ಯುವಸಮೂಹ ಆತ್ಮಹತ್ಯೆಯ ದಾರಿಯನ್ನು ಹುಡುಕುತ್ತಿದ್ದು, ಈ ನಿಟ್ಟಿನಲ್ಲಿ ರೋಟರಿಯು ಯುವಸಮೂಹಕ್ಕೆ ಜಾಗೃತಿ ಮೂಡಿಸುವ ಕಾರ್ಯ ಮುಂದಿನ ದಿನಗಳಲ್ಲಿ ಆಗಬೇಕಿದೆ ಎಂದರು.

ರೋಟರಿ ಅಸಿಸ್ಟೆಂಟ್ ಗವರ್ನರ್ ಪುರಂದರ ರೈಯವರು ಕ್ಲಬ್ ಬುಲೆಟಿನ್ ́́ ʼರೋಟ ವಾಹಿನಿ’ಯನ್ನು ಅನಾವರಣಗೊಳಿಸಿ ಮಾತನಾಡಿ, ಕಳೆದ ವರ್ಷ ರೋಟರಿ ಧ್ಯೇಯವಾಕ್ಯವಾದ ರೋಟರಿಯನ್ನು ಕಲ್ಪಿಸಿಕೊಳ್ಳಿ ಎಂಬಂತೆ ಸೇವಾ ಆಕಾಂಕ್ಷಿಗಳಾದ ನಾವೆಲ್ಲಾ ಸಮಾಜವನ್ನು ಒಳ್ಳೆಯ ಪಥದತ್ತ ಸಾಗಿಸಿದ್ದೇವೆ. ಪ್ರಸ್ತುತ ವರ್ಷದ ಧ್ಯೇಯವಾಕ್ಯವಾದ ಜಗತ್ತಿನಲ್ಲಿ ಭರವಸೆ ಮೂಡಿಸಿ ಎಂಬಂತೆ ಸಣ್ಣ ಮಗುವನ್ನು ನಾವು ಹೇಗೆ ಬೆಳೆಸುತ್ತಾ ಸಮಾಜದ ಆಸ್ತಿಯನ್ನಾಗಿಸುತ್ತೇವೆಯೋ ಹಾಗೆಯೇ ಈ ಕಾರ್ಯ ಅಂಗನವಾಡಿಯ ಮಕ್ಕಳ ಅಭಿವೃದ್ಧಿಯಿಂದ ಪ್ರಪಂಚದಾದ್ಯಂತ ಮುಟ್ಟಬೇಕು ಎಂದರು.

ರೋಟರಿ ವಲಯ ಸೇನಾನಿ ಭಾಸ್ಕರ ಕೋಡಿಂಬಾಳರವರು ಮಾತನಾಡಿ, ರೋಟರಿ ಈಸ್ಟ್ ಹಾಗೂ ರೋಟರಿ ಸ್ವರ್ಣದ ಸದಸ್ಯರಿಗೆ ಅವಿನಾಭಾವ ಸಂಬಂಧವಿದೆ. ರೋಟರಿ ಈಸ್ಟ್ ಅಧ್ಯಕ್ಷ ಹಾಗೂ ಅಸಿಸ್ಟೆಂಟ್ ಗವರ್ನರ್ ಈರ್ವರೂ ರೋಟರಿ ಈಸ್ಟ್ ಸದಸ್ಯರಾಗಿದ್ದು ನಾನು ವಲಯ ಸೇನಾನಿಯಾಗಿ ಸ್ನೇಹದೊಂದಿಗೆ ಬೆಸೆಯುವ ಕೊಂಡಿಯಾಗಿ ಕಾರ್ಯನಿರ್ವಹಿಸುವ ಮೂಲಕ ನಮ್ಮೊಳಗೆ ಬಾಂಧವ್ಯದ ಬೆಸುಗೆ ವೃದ್ಧಿಸಲಿ ಎಂದರು.

ನಿರ್ಗಮನ ಅಧ್ಯಕ್ಷ ಶರತ್ ಕುಮಾರ್ ರೈ ಮಾತನಾಡಿ, ನಮ್ಮ ವ್ಯಕ್ತಿತ್ವ ವಿಕಸನದೊಂದಿಗೆ ಸಮಾಜ ಸೇವೆಯ ಅವಕಾಶ ಸಿಗುವುದಿದ್ದರೆ ಅದು ರೋಟರಿ ಸಂಸ್ಥೆಯಲ್ಲಿ ಮಾತ್ರ. ವರ್ಷದ ರೋಟರಿಯ ಧ್ಯೇಯ ರೋಟರಿಯ ಪರಿಕಲ್ಪನೆ ಎಂಬಂತೆ ಕಲ್ಪನಾತೀತವಾಗಿ ವರ್ಷವೊಂದು ಮುಗಿದು ಹೋಗಿದೆ. ಸೇವೆಯ ಸಾರ್ಥಕತೆಯನ್ನು ಈ ವರ್ಷದಲ್ಲಿ ಕಂಡಿದ್ದೇನೆ. ಅದು ಸಾಧ್ಯವಾಗಿದ್ದರೆ ನಮ್ಮೆಲ್ಲರ ರೋಟರಿಯ ಸದಸ್ಯರ ನೆರವಿನಿಂದ ಮೊದಲಾಗಿ ಸದಸ್ಯರಿಗೆ ನಮನಗಳನ್ನು ಸಲ್ಲಿಸುತ್ತೇನೆ ಎಂದರು.

ನೂತನ ಸದಸ್ಯರ ಸೇರ್ಪಡೆ:
ಕ್ಲಬ್ ಸರ್ವಿಸ್‌ನಡಿಯಲ್ಲಿ ನೂತನ ಸದಸ್ಯರಾದ ಉದ್ಯಮಿ ರಜನೀಕಾಂತ್, ಪ್ರಗತಿಪರ ಕೃಷಿಕ ಸದಾಶಿವ ಶೆಟ್ಟಿ ಪಟ್ಟೆ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಉದ್ಯಮಿ ಶಿವರಾಂ ಆಳ್ವ, ಬಜಾಜ್ ಫೈನಾನ್ಸ್ ಸರ್ವಿಸಸ್‌ನ ರಕ್ಷಿತ್ ಕುಮಾರ್, ಸಂಪ್ಯ ಅಕ್ಷಯ ಕಾಲೇಜು ಪ್ರಾಂಶುಪಾಲ ಸಂಪತ್ ಕೆ.ಪಕ್ಕಳ, ಅಕ್ಷಯ ಕಾಲೇಜು ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಸರಕಾರಿ ಆಸ್ಪತ್ರೆಯ ಎಲುಬು ತಜ್ಞ ಡಾ.ಅಜಯ್, ನೇಸರ ಗ್ರೂಪ್ ಆಫ್ ಕಂಪೆನಿಯ ಸುರೇಂದ್ರ ರೈ ಬಿ, ಕೃಷಿ ಇಲಾಖೆಯ ಕೃಷ್ಣಪ್ರಸಾದ್ ಭಂಡಾರಿ, ಶ್ರೀನಿವಾಸ್ ನುಳಿಯಾಲು, ಗಣೇಶ್ ರೈ ಮುಂಡಾಸ್, ಸೃಜನ್ ರೈ, ಸುರಕ್ಷಾ ರೈ, ರಕ್ಷಿತ್ ಪುತ್ತೂರು, ಕೇಶವ ನಾಯಕ್, ನಿರ್ಗಮನ ಅಧ್ಯಕ್ಷ ಶರತ್ ಕುಮಾರ್ ರೈ ಪತ್ನಿ ವಂದನಾ ಎಸ್.ರೈ, ಸವಿತಾ ಪಿ.ರೈ, ನೂತನ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಪತ್ನಿ ಜಯಲಕ್ಷ್ಮೀ ಆರ್.ರೈರವರುಗಳಿಗೆ ಪದಪ್ರದಾನ ಅಧಿಕಾರಿ ರಂಗನಾಥ್ ಭಟ್‌ರವರು ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಅಧಿಕೃತವಾಗಿ ಬರಮಾಡಿಕೊಂಡರು.



ಸನ್ಮಾನ:
ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಅಧ್ಯಕ್ಷರಾಗಿದ್ದು, ಕಳೆದ 17 ವರ್ಷಗಳಿಂದ ಸರಕಾರಿ ಸೇವೆಯನ್ನು ಮಾಡುತ್ತಿರುವ ಅಲ್ಲದೆ ಕೋವಿಡ್ ಸಂದರ್ಭದಲ್ಲಿ ತಾಲೂಕಿಗೆ ನೀಡಿದ ಸೇವೆ, ಕಡಬ ತಾಲೂಕಿನಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಹಾವಳಿಯನ್ನು ತಡೆಯುವ ಸಾಮರ್ಥ್ಯವಹಿಸಿ ಜನಮನ್ನಣೆಗೆ ಪಾತ್ರರಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ 35 ವರ್ಷಗಳ ಅನುಭವ ಹೊಂದಿರುವ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಹಾಗೂ ಪುತ್ತೂರು ಸರಕಾರಿ ಆಸ್ಪತ್ರೆಯ ಮೂಳೆ ಹಾಗೂ ಕೀಲು ಶಸ್ತ್ರಚಿಕಿತ್ಸಕ ತಜ್ಞ, ಜನಮೆಚ್ಚಿದ ಡಾಕ್ಟರ್ ಹಾಗೆಯೇ 24*7 ಸೇವೆ ನೀಡುತ್ತಿದ್ದು ಇತ್ತೀಚೆಗೆ ರಾಜ್ಯ ಸರಕಾರದಿಂದ ಬೆಸ್ಟ್ ಅರ್ಥೊಪೆಡಿಕ್ ಸರ್ಜನ್ ಎಂಬ ಪ್ರಶಸ್ತಿಗೆ ಭಾಜನರಾದ ಡಾ.ಅಜಯ್ ರವರನ್ನು ವೊಕೇಶನಲ್ ಸರ್ವಿಸ್ ವತಿಯಿಂದ ಸನ್ಮಾನಿಸಲಾಯಿತು.



ಪ್ರತಿಭಾವಂತ ಕ್ಲಬ್ ಸದಸ್ಯರ ಮಕ್ಕಳಿಗೆ ಗೌರವ:
ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈಯ್ದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಕ್ಲಬ್ ಸದಸ್ಯರ ಮಕ್ಕಳಾದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಶಾ ಸುಲೋಚನಾ, ಸಾಕ್ಷ್ಯ ವೈ ರೈ, ಪ್ರಥಮ ಪಿಯುಸಿಯಲ್ಲಿ ಅಂಚಿತ್ ನಡುಬೈಲು, ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಮೃದ್ಧ್ ಎಸ್.ರೈ, ತನ್ವಿ ಶೆಣೈ, ಪ್ರಣೀಲ್ ರೈ ಮನವಳಿಕೆ, ಹನಿಶ್ರೀ, ಎಂಟನೇ ತರಗತಿಯಲ್ಲಿ ಲವಣ್ ಎಸ್.ಬಂಗೇರರವರನ್ನು ಗೌರವಿಸಲಾಯಿತು.



ಟಿ.ಆರ್.ಎಫ್ ದೇಣಿಗೆ:
ಇಂಟರ್‌ನ್ಯಾಷನಲ್ ಸರ್ವಿಸ್‌ನಡಿಯಲ್ಲಿ ರೋಟರಿ ಫೌಂಡೇಶನ್‌ಗೆ ದೇಣಿಗೆ ನೀಡಿದ ಕೆ.ಆರ್ ಶೆಣೈ, ಡಾ.ಸೂರ್ಯನಾರಾಯಣ, ಪುರಂದರ ರೈ, ಬೂಡಿಯಾರು ರಾಧಾಕೃಷ್ಣ ರೈ, ಕೆ.ವಿಶ್ವಾಸ್ ಶೆಣೈ, ಡಾ.ರವಿಪ್ರಕಾಶ್ ಕಜೆ, ಮುರಳೀಶ್ಯಾಂ, ಕೃಷ್ಣನಾರಾಯಣ ಮುಳಿಯ, ಜಯಂತ್ ನಡುಬೈಲುರವರುಗಳನ್ನು ಗೌರವಿಸಲಾಯಿತು.

ಹೊಲಿಗೆ ಯಂತ್ರ ಕೊಡುಗೆ:
ವರ್ಷಂಪ್ರತಿ ಏಳ್ಮುಡಿ ದೇವಾ ಟ್ರೇಡರ್ಸ್ ಮಾಲಕರಾದ ಟಿ.ವಿ ರವೀಂದ್ರನ್‌ರವರಿಂದ ಕೊಡಲ್ಪಡುವ ಎರಡು ಹೊಲಿಗೆ ಯಂತ್ರವನ್ನು ಬೆಟ್ಟಂಪಾಡಿ ಗ್ರಾಮದ ದಯಾಮಣಿ ಹಾಗೂ ಮುಂಡೂರು ಗ್ರಾಮದ ಶಾಲಿನಿ ಬಿ.ರವರಿಗೆ ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು. ಕಮ್ಯೂನಿಟಿ ಸರ್ವಿಸ್‌ನಿಂದ ಕಾರ್ಯ ನೆರವೇರಲ್ಪಟ್ಟಿದ್ದು, ದೇವಾ ಟ್ರೇಡರ್ಸ್‌ನ ರವೀಂದ್ರನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಜಿಲ್ಲಾ ಸಮಿತಿ ಸದಸ್ಯರಿಗೆ ಅಭಿನಂದನೆ:
ಕ್ಲಬ್ ವತಿಯಿಂದ ಜಿಲ್ಲಾ ಸಮಿತಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಲು ಆಯ್ಕೆಯಾದ ಡಾ.ಸೂರ್‍ಯನಾರಾಯಣ(ಡಿಆರ್‌ಎಫ್‌ಸಿ), ವಿಶ್ವಾಸ್ ಶೆಣೈ(ಪಬ್ಲಿಕ್ ಇಮೇಜ್ ಚೇರ್‌ಮ್ಯಾನ್), ಅಬ್ಬಾಸ್ ಕೆ.ಮುರ(ಡಿಸ್ಟ್ರಿಕ್ಟ್ ರೋಟರಿ ಇನ್ಫಾರ್ಮೇಶನ್ ವೈಸ್ ಚೇರ್‌ಮ್ಯಾನ್), ಪುರಂದರ ರೈ ಮಿತ್ರಂಪಾಡಿ(ಅಸಿಸ್ಟೆಂಟ್ ಗವರ್ನರ್ ಮತ್ತು ಡಿಸ್ಟ್ರಿಕ್ಟ್ ಕಾನ್ಫರೆನ್ಸ್ ಪ್ರಮೋಶನಲ್ ಚೇರ್‌ಮ್ಯಾನ್), ಪ್ರಮೀಳಾ ರಾವ್(ವುಮನ್ ಇನ್ ರೋಟರಿ ಆಂಡ್ ವುಮನ್ ಮೆಂಬರ್ ಡೆವಲಪ್‌ಮೆಂಟ್ ಚೇರ್‌ಮ್ಯಾನ್), ಮುರಳೀಶ್ಯಾಂ(ವೊಕೇಶನಲ್ ಟ್ರೈನಿಂಗ್ ಟೀಮ್ ಸಬ್ ಕಮಿಟೀಸ್ ಮತ್ತು ಮೆಂಬರ್ ಆಫ್ ರೈಡ್ ಫಾರ್ ರೋಟರಿ ಟೀಮ್ ವೈಸ್ ಚೇರ್‌ಮ್ಯಾನ್), ಡಾ.ಶ್ಯಾಮ್‌ಪ್ರಸಾದ್(ಚೇರ್‌ಮ್ಯಾನ್-ಹೆಣ್ಣು ಮಗುವನ್ನು ಉಳಿಸಿ), ಡಾ.ಪ್ಸನ್ನ ಹೆಬ್ಬಾರ್(ವೈಸ್ ಚೇರ್‌ಮ್ಯಾನ್-ಹೃದಯವನ್ನು ಉಳಿಸಿ), ದಿವಾಕರ್ ನಿಡ್ವಣ್ಣಾಯ(ಯೋಗ, ಪ್ರಾಣಿಕ್, ಹೀಲಿಂಗ್ ವೈಸ್ ಚೇರ್‌ಮ್ಯಾನ್), ಸಚ್ಚಿದಾನಂದ ಡಿ(ಹಿರಿಯ ವಿದ್ಯಾರ್ಥಿಗಳ ಉಪಸಮಿತಿಯ ವೈಸ್ ಚೇರ್‌ಮ್ಯಾನ್), ಜಯಂತ್ ನಡುಬೈಲು(ಮೂಲಭೂತ ಶಿಕ್ಷಣ ಮತ್ತು ಸಾಕ್ಷರತೆ ವೈಸ್ ಚೇರ್‌ಮ್ಯಾನ್), ಕೃಷ್ಣನಾರಾಯಣ ಮುಳಿಯ(ರೈಡ್ ಫಾರ್ ರೋಟರಿ ಸಲಹೆಗಾರ)ರವರುಗಳನ್ನು ಅಭಿನಂದಿಸಲಾಯಿತು.



ಸ್ಕಾಲರ್‌ಶಿಪ್ ವಿತರಣೆ:
ದಿ.ಕುಡ್ಗಿ ಸುಧಾಕರ್ ಶೆಣೈ ಸ್ಕಾಲರ್‌ಶಿಪ್‌ನಿಂದ ಆರ್ಥಿಕವಾಗಿ ಹಿಂದುಳಿದ ಫಲಾನುಭವಿ ವಿದ್ಯಾರ್ಥಿಗಳಾದ ಕೊಂಬೆಟ್ಟು ಜ್ಯೂನಿಯರ್ ಕಾಲೇಜ್‌ನ ನಿಧಿ ಬಿ(ಪ್ರ.ಪಿಯುಸಿ), ಸಹನ್(10ನೇ), ಧನುಷ್, ಯಕ್ಷಿತಾ(8ನೇ), ಸ್ವಾತಿ ಡಿ(9ನೇ)ರವರಿಗೆ ತಲಾ ರೂ.4 ಸಾವಿರ, ದಿ.ಪಿ.ಮಾರಪ್ಪ ಶೆಟ್ಟಿ ಧತ್ತಿನಿಧಿಯಿಂದ ಪಿ.ಚಿತ್ತರಂಜನ್ ಶೆಟ್ಟಿ ಮೈಸೂರು ಇವರಿಂದ ಹಾಗೂ ದಿ.ಕುಡ್ಗಿ ಸುಧಾಕರ್ ಶೆಣೈ ಸ್ಮರಣಾರ್ಥವಾಗಿ ಆರ್ಥಿಕವಾಗಿ ಹಿಂದುಳಿದ ಸಂತ ಫಿಲೋಮಿನಾ ಪಿಯು ಕಾಲೇಜಿನ ವಿದ್ಯಾರ್ಥಿನಿ ವಿಷ್ಣುಪ್ರಿಯರವರಿಗೆ ರೂ.10 ಸಾವಿರ, ದಿ.ಪಿ.ಮಾರಪ್ಪ ಶೆಟ್ಟಿ ಧತ್ತಿನಿಧಿಯಿಂದ ಪಿ.ಚಿತ್ತರಂಜನ್ ಶೆಟ್ಟಿ ಮೈಸೂರು ಪ್ರಾಯೋಜಿತವಾಗಿ ಆರ್ಥಿಕವಾಗಿ ಹಿಂದುಳಿದ ಕೊಂಬೆಟ್ಟು ಜ್ಯೂನಿಯರ್ ಕಾಲೇಜ್‌ನ ವಿದ್ಯಾರ್ಥಿಗಳಾದ ಚರಣ್ ಕುಮಾರ್, ವರುಣ್(9ನೇ), ಶಿವರಾಜ್, ಆಶಾ(10ನೇ), ಮಂಜುಳಾ ಕೆ.ಎಸ್(ದ್ವಿ.ಪಿಯುಸಿ)ಯವರಿಗೆ ತಲಾ ರೂ.4 ಸಾವಿರ, ಕುಡ್ಗಿ ರತ್ನಾಕರ್ ಶೆಣೈ ಪ್ರಾಯೋಜಕತ್ವದಲ್ಲಿ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳಾದ ಹವ್ಯಾಸ್(ದ್ವಿ.ಬಿಸಿಎ), ರವಿಕಿರಣ್(ದ್ವಿ.ಎಂ.ಎಸ್.ಡ.ಬ್ಲ್ಯೂ), ಬಿಂದು(ದ್ವಿ.ಬಿಬಿಎ), ಅಬ್ದುಲ್ ರಾಹಿದ್(ಪ್ರ.ಬಿಕಾಂ), ಪ್ರಣಾಮ್(ದ್ವಿ.ಬಿಕಾಂ)ರವರುಗಳಿಗೆ ತಲಾ ರೂ.5 ಸಾವಿರ ಸ್ಕಾಲರ್‌ಶಿಪ್‌ನ್ನು ವಿತರಿಸಲಾಯಿತು.

ನಿರ್ಗಮನ ಅಧ್ಯಕ್ಷ/ಕಾರ್ಯದರ್ಶಿಗೆ ಸನ್ಮಾನ:
ಕಳೆದ ವರ್ಷ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡಿ ಕ್ಲಬ್‌ನ ಬೆಳವಣಿಗೆಯಲ್ಲಿ ಸಹಕರಿಸಿದ ನಿರ್ಗಮಿತ ಅಧ್ಯಕ್ಷ ಶರತ್ ಕುಮಾರ್ ರೈ ಹಾಗೂ ಕಾರ್ಯದರ್ಶಿ ಶಶಿಕಿರಣ್ ರೈರವರಿಗೆ ನೂತನ ಅಧ್ಯಕ್ಷರಾದ ಬೂಡಿಯಾರು ರಾಧಾಕೃಷ್ಣ ರೈ ಹಾಗೂ ಅವರ ತಂಡ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ನಿರ್ಗಮನ ಅಧ್ಯಕ್ಷ ಶರತ್ ಕುಮಾರ್ ರೈಯವರ ಪತ್ನಿ ವಂದನಾ ಶರತ್, ನೂತನ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣರವರ ಪತ್ನಿ ಜಯಲಕ್ಷ್ಮೀ ಆರ್.ರೈ ಉಪಸ್ಥಿತರಿದ್ದರು. ನಿಯೋಜಿತ ಅಧ್ಯಕ್ಷ ಡಾ.ರವಿಪ್ರಕಾಶ್ ಕಜೆ ಪ್ರಾರ್ಥಿಸಿದರು. ನಿರ್ಗಮನ ಅಧ್ಯಕ್ಷ ಶರತ್ ಕುಮಾರ್ ರೈ ಸ್ವಾಗತಿಸಿ, ನೂತನ ಕಾರ್ಯದರ್ಶಿ ರವಿಕುಮಾರ್ ರೈ ವಂದಿಸಿದರು. ನಿರ್ಗಮನ ಕಾರ್ಯದರ್ಶಿ ಶಶಿಕಿರಣ್ ರೈ ವರದಿ ಮಂಡಿಸಿದರು. ಡಾ.ಶ್ಯಾಮ್ ಪ್ರಸಾದ್, ಚಂದ್ರಶೇಖರ್ ರೈ, ವಸಂತ ಜಾಲಾಡಿ, ನಿಶಾಂತ್ ರೈ, ಸವಿತ ಪುರಂದರ್‌ರವರು ಅತಿಥಿಗಳಿಗೆ ಶಾಲು ಹಾಕಿ, ಹೂ ನೀಡಿ ಸ್ವಾಗತಿಸಿದರು. ಕ್ಲಬ್ ಸರ್ವಿಸ್ ನಿರ್ದೇಶಕ ಡಾ.ರವಿಪ್ರಕಾಶ್ ಕಜೆ, ವೊಕೇಶನಲ್ ಸರ್ವಿಸ್ ನಿರ್ದೇಶಕ ಮುರಳೀಶ್ಯಾಂ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ವಿಶ್ವಾಸ್ ಶೆಣೈ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ಜಯಂತ್ ನಡುಬೈಲು, ಯೂತ್ ಸರ್ವಿಸ್ ನಿರ್ದೇಶಕ ಅಬ್ಬಾಸ್ ಕೆ.ಮುರ, ಸಾರ್ಜಂಟ್ ಎಟ್ ಆರ್ಮ್ಸ್ ಶಶಿಕಿರಣ್ ರೈ, ಬುಲೆಟಿನ್ ಎಡಿಟರ್ ಡಾ.ಶ್ಯಾಮ್‌ಪ್ರಸಾದ್, ಉಪಾಧ್ಯಕ್ಷ ಚಂದ್ರಶೇಖರ್ ಎಸ್, ಜೊತೆ ಕಾರ್ಯದರ್ಶಿ ವಸಂತ್ ಜಾಲಾಡಿರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮಾಜಿ ಅಧ್ಯಕ್ಷ ಮುರಳೀಶ್ಯಾಂರವರು ಪದಪ್ರದಾನ ಅಧಿಕಾರಿ ಹಾಗೂ ಅಸಿಸ್ಟೆಂಟ್ ಗವರ್ನರ್, ವಲಯ ಸೇನಾನಿಯವರ ಪರಿಚಯ ಮಾಡಿದರು. ಎ.ಕೆ.ಎಸ್ ಕೆ.ವಿಶ್ವಾಸ್ ಶೆಣೈ ಹಾಗೂ ಮಾಜಿ ಕಾರ್ಯದರ್ಶಿ ಶಶಿಧರ್ ಕಿನ್ನಿಮಜಲು ಕಾರ್ಯಕ್ರಮ ನಿರೂಪಿಸಿದರು.

ಪದಪ್ರದಾನ:
ನೂತನ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಕಾರ್ಯದರ್ಶಿ ರವಿಕುಮಾರ್ ರೈ, ಕೋಶಾಧಿಕಾರಿ ಶಶಿಧರ್ ಕಿನ್ನಿಮಜಲು, ನಿಯೋಜಿತ ಅಧ್ಯಕ್ಷ ಹಾಗೂ ಕ್ಲಬ್ ಸರ್ವಿಸ್ ನಿರ್ದೇಶಕ ಡಾ.ರವಿಪ್ರಕಾಶ್ ಕಜೆ, ನಿಕಟಪೂರ್ವ ಅಧ್ಯಕ್ಷ ಶರತ್ ಕುಮಾರ್ ರೈ, ಉಪಾಧ್ಯಕ್ಷ ಚಂದ್ರಶೇಖರ್ ಎಸ್, ಬುಲೆಟಿನ್ ಎಡಿಟರ್ ಡಾ.ಶ್ಯಾಮ್ ಪ್ರಸಾದ್, ಸಾರ್ಜಂಟ್ ಎಟ್ ಆಮ್ಸ್೯ ಶಶಿಕಿರಣ್ ರೈ ನೂಜಿಬೈಲು, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಕೆ.ವಿಶ್ವಾಸ್ ಶೆಣೈ ವೊಕೇಶನಲ್ ಸರ್ವಿಸ್ ನಿರ್ದೇಶಕ ಮುರಳೀಶ್ಯಾಂ, ಇಂಟರ್ ನ್ಯಾಷನಲ್ ಸರ್ವಿಸ್ ನಿರ್ದೇಶಕ ಜಯಂತ್ ನಡುಬೈಲು, ಯೂತ್ ಸರ್ವಿಸ್ ನಿರ್ದೇಶಕ ಅಬ್ಬಾಸ್ ಕೆ.ಮುರ, ಚೇರ್ ಮ್ಯಾನ್ ಗಳಾದ ಕೃಷ್ಣ ಭಟ್(ಮೆಂಬರ್ ಶಿಪ್), ಶರತ್ ಕುಮಾರ್ ರೈ(ಟಿ.ಆರ್.ಎಫ್), ಡಾ.ಈಶ್ವರ್ ಪ್ರಕಾಶ್(ಪಲ್ಸ್ ಪೋಲಿಯೋ), ಡ್ಯಾ.ಶ್ಯಾಮ್ ಪ್ರಸಾದ್(ಐಟಿ/ವೆಬ್ ಸೈಟ್), ವಸಂತ ಜಾಲಾಡಿ(ಜಿಲ್ಲಾ ಪ್ರಾಜೆಕ್ಟ್)ರವರುಗಳಿಗೆ ಪದಪ್ರದಾನ ಅಧಿಕಾರಿ ಪಿಡಿಜಿ ರಂಗನಾಥ್ ಭಟ್ ರವರು ಪದಪ್ರದಾನವನ್ನು ನೆರವೇರಿಸಿದರು.

ಸಮಗ್ರ ಅಭಿವೃದ್ಧಿಗೆ ಚಿಂತನೆ..
ಪುತ್ತೂರಿನ ಅಭಿವೃದ್ಧಿಗೆ ಸರಕಾರದ ಕಾಮಗಾರಿ ಬೇಕಿಲ್ಲ. ಪುತ್ತೂರಿನಲ್ಲಿ ಏಳು ರೋಟರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಪುತ್ತೂರಿನ ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸಬೇಕಾಗಿದೆ. ಮಾಜಿ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯರವರಿಂದ ಆರಂಭಗೊಂಡ ಸ್ವಚ್ಛ ಪುತ್ತೂರು, ಜಿಲ್ಲಾ ಪ್ರಾಜೆಕ್ಟ್ ಅಂಗನವಾಡಿಗಳ ಉನ್ನತೀಕರಣ, ಮಳೆ ನೀರು ಕೊಯ್ಲು ಯೋಜನೆ ಇವುಗಳನ್ನು ಪುತ್ತೂರಿನ ಏಳು ರೋಟರಿ ಸಂಸ್ಥೆಗಳ ಜೊತೆಗೂಡಿ ಯಶಸ್ವಿಗೊಳಿಸಬೇಕಾಗಿದೆ. ನಿರ್ಗಮನ ಅಧ್ಯಕ್ಷ ಶರತ್ ಕುಮಾರ್‌ರವರು ಮನೀಷಾ ಸಭಾಂಗಣದ ನವೀಕರಣದ ಕನಸನ್ನು ಹೊತ್ತು ಅದನ್ನು ಉತ್ತಮಪಡಿಸಿರುತ್ತಾರೆ. ಮುಂದಿನ ದಿನಗಳಲ್ಲಿ ಸದಸ್ಯರ ಸಂಪೂರ್ಣ ಸಹಕಾರದೊಂದಿಗೆ ಮನೀಷಾ ಸಭಾಂಗಣವನ್ನು ಮತ್ತಷ್ಟು ಸುಸಜ್ಜಿತಗೊಳಿಸೋಣ.
-ಬೂಡಿಯಾರು ರಾಧಾಕೃಷ್ಣ ರೈ, ನೂತನ ಅಧ್ಯಕ್ಷರು, ರೋಟರಿ ಪುತ್ತೂರು ಈಸ್ಟ್

ರಸ್ತೆಯನ್ನು ಹೊಸ ಬೆಳಕಿನೊಂದಿಗೆ ನೋಡಿ-ಚಾಲನೆ..
ಕ್ಲಬ್‌ನ ರೋಟರಿ ಪಬ್ಲಿಕ್ ಇಮೇಜ್ ವತಿಯಿಂದ ರಸ್ತೆ ಸುರಕ್ಷತಾ ಜಾಗೃತಿ `ರಸ್ತೆಯನ್ನು ಹೊಸ ಬೆಳಕಿನೊಂದಿಗೆ ನೋಡಿ, ರೋಟರಿ ನಿಮಗೆ ಉತ್ತಮವಾಗಿ ಸಹಾಯ ಮಾಡುತ್ತದೆ’ ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಾಂತ ಚಾಲಕರಿಗೆ(ಟ್ರಕ್ಸ್, ಬಸ್, ಟೂರಿಸ್ಟ್ ವೆಹಿಕಲ್ಸ್, ಆಟೋ ಚಾಲಕರು) ಉಚಿತ ಕನ್ನಡಕ ವಿತರಣೆಯೊಂದಿಗೆ ನೇತ್ರ ತಪಾಸಣಾ ಶಿಬಿರದ ಚಾಲನೆಯು ಈ ಸಂದರ್ಭದಲ್ಲಿ ನಡೆಯಿತು. ಪಿಡಿಜಿ ಕೃಷ್ಣ ಶೆಟ್ಟಿ, ಪಬ್ಲಿಕ್ ಇಮೇಜ್ ಚೇರ್ ಮ್ಯಾನ್ ಕೆ.ವಿಶ್ವಾಸ್ ಶೆಣೈ, ರಸ್ತೆ ಸುರಕ್ಷತಾ ಜಾಗೃತಿ ಚೇರ್ ಮ್ಯಾನ್ ಡಾ|ಹರ್ಷಕುಮಾರ್ ರೈಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here