ಆರ್ಯಾಪು ಗ್ರಾ.ಪಂ ಉಪ ಚುನಾವಣೆ- ಪುತ್ತಿಲ ಪರಿವಾರದಿಂದ ಸುಬ್ರಹ್ಮಣ್ಯ ಬಲ್ಯಾಯ ನಾಮಪತ್ರ

0

ಪುತ್ತೂರು: ಆರ್ಯಾಪು ಗ್ರಾ.ಪಂಗೆ ಜು.26 ರಂದು ನಡೆಯಲಿರುವ ಉಪ ಚುನಾವಣೆಗೆ ಪುತ್ತಿಲ ಪರಿವಾರದ ಅಭ್ಯರ್ಥಿಯಾಗಿ ಜ್ಯೋತಿಷ್ಯ ಸುಬ್ರಹ್ಮಣ್ಯ ಬಲ್ಯಾಯರವರು ಜು.11ರಂದು ನಾಮಪತ್ರ ಸಲ್ಲಿಸಿದರು.


ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರದ ಕಚೇರಿಯಿಂದ ವಾಹನ ರ್ಯಾಲಿ ಮೂಲಕ ಸಾಗಿ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿಯಾಗಿರುವ ಸಹಕಾರ ಸಂಘಗಳ ಸಹಾಯಕ‌ ನಿಬಂಧಕಿ ತ್ರಿವೇಣಿ ರಾವ್ ನಾಮಪತ್ರ ಸ್ವೀಕರಿಸಿದರು.

ಈ ಸಂದರ್ಭ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಮಾರ್ತಾ, ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ವೀರಮಂಗಲ, ಪ್ರಮುಖರಾದ ಶ್ರೀಮತಿ ವಾಣಿಶ್ರೀ, ಶ್ರೀಮತಿ ಶ್ರೀಕರಿ, ನವೀನ್ ರೈ ಮೇಗಿನಪಂಜ, ಜಗದೀಶ್ ಪೂಜಾರಿ, ನಾರಾಯಣ ಕುಲಾಲ್, ತಿಮ್ಮಪ್ಪ ನಾಯ್ಕ್ ಕುಂಜುರುಪಂಜ, ಗೋಪಾಲ ಭಟ್, ತಾರಾನಾಥ, ಸಂತೋಷ್ ಭಂಡಾರಿ, ಪವಿತ್ರ, ಸೀತಾರಾಮ ಶೆಟ್ಟಿ, ಕೃಷ್ಣ ಪ್ರಸಾದ್ ಶೆಟ್ಟಿ ಮೊದಲಾದರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here