ಪುತ್ತೂರು: ಕ್ಯಾಂಪ್ಕೋದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥಾಪಕರ ದಿನ ಆಚರಣೆಯೊಂದಿಗೆ ಕ್ಯಾಂಪ್ಕೋ ಇನ್ ಸೇವಾ, ಸೇವಾ ಭಾರತಿ ಮಂಗಳೂರು ವಿಭಾಗ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಬ್ಲಡ್ ಬ್ಯಾಂಕ್ ಸರಕಾರಿ ಲೆಡಿಗೋಷನ್ ಆಸ್ಪತ್ರೆ ಮಂಗಳೂರು ಇವರುಗಳ ಸಹಭಾಗಿತ್ವದಲ್ಲಿ ಕ್ಯಾಂಪ್ಕೋ ನಿಯಮಿತ ಮಂಗಳೂರು ಇದರ ಅಧ್ಯಕ್ಷರು, ಆಡಳಿತ ನಿರ್ದೇಶಕರು ಮತ್ತು ನಿರ್ದೇಶಕರುಗಳ ಪೂರ್ಣ ಸಹಕಾರದೊಂದಿಗೆ ರಕ್ತದಾನ ಶಿಬಿರ ಕಾರ್ಯಕ್ರಮ ಕ್ಯಾಂಪ್ಕೋದ ಕೇಂದ್ರ ಕಛೇರಿ ಮಂಗಳೂರಿನಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಯಾಂಪ್ಕೋ ಜನರಲ್ ಮೆನೇಜರ್ ರೇಷ್ಮ ಮಲ್ಯ ನೆರವೇರಿಸಿದರು. ವೇದಿಕೆಯಲ್ಲಿ ಸೇವಾ ಭಾರತೀಯ ನಾಗರಾಜ್ ಭಟ್, ವಿನೋದ್ ಶೆಣೈ, ರೆಡ್ಕ್ರಾಸ್ ಸೊಸೈಟಿಯ ಜಿಲ್ಲಾ ಸಂಯೋಜಕರಾದ ಪ್ರವೀಣ್ ಕುಮಾರ್, ರೆಡ್ಕ್ರಾಸ್ ಸೊಸೈಟಿಯ ಸಂಜಯ್ ಶೆಟ್ಟಿ, ಮೋಹನ್ ಶೆಟ್ಟಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳನ್ನು ಅನಂತೇಶ್ವರ್ ಸ್ವಾಗತಿಸಿದರು. ಕ್ಯಾಂಪ್ಕೋ ಇನ್ ಸೇವಾದ ಸಂಯೋಜಕರಾದ ರಮೇಶ್ ನೆಗಳಗುಳಿ ವಂದಿಸಿದರು. ಕ್ಯಾಂಪ್ಕೋ ಇನ್ ಸೇವಾದ ಕಿಶೋರ್ ರಾಜೇಶ್, ಅನಿರುದ್ದ್ ಸಹಕರಿಸಿದರು.