ರೋಟರಿ ಪುತ್ತೂರು ಸೆಂಟ್ರಲ್ ಪದಪ್ರದಾನ – ರೋಟರಿ ಎಂಬುದು ಸೇವೆಗೆ ಮುಡುಪಾಗಿರುವ ಸಂಸ್ಥೆ-ಡಾ.ನಾಗಾರ್ಜುನ

0

ಪುತ್ತೂರು: ವಿಶ್ವದ 195 ದೇಶಗಳಲ್ಲಿ ರೋಟರಿ ಸಂಸ್ಥೆಯು ವ್ಯಾಪಿಸಿದ್ದು, ಈ ರೋಟರಿ ಸಂಸ್ಥೆಯ ಮೂಲಕ ಹನ್ನೆರಡು ಲಕ್ಷ ಸದಸ್ಯರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಒಂದರ್ಥದಲ್ಲಿ ರೋಟರಿ ಸಂಸ್ಥೆ ಎಂಬುದು ಸೇವೆಗೆ ಮುಡುಪಾಗಿರುವ ಸಂಸ್ಥೆಯಾಗಿದೆ ಎಂದು ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ಪಿಡಿಜಿ ಡಾ.ಆರ್.ಎಸ್ ನಾಗಾರ್ಜುನ ರವರು ಹೇಳಿದರು.

ಬಪ್ಪಳಿಗೆ-ಪುತ್ತೂರು ಇಲ್ಲಿನ ಆಶ್ಮಿ ಕಂಫರ್ಟ್ ಸಭಾಂಗಣದಲ್ಲಿ ಜು.11ರಂದು ಜರಗಿದ ಅಂತರ್ ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪದಪ್ರದಾನವನ್ನು ನೆರವೇರಿಸಿ ಅವರು ಮಾತನಾಡಿದರು. ಪುತ್ತೂರಿನಲ್ಲಿ ಬ್ಲಡ್ ಬ್ಯಾಂಕ್, ಡಯಾಲಿಸಿಸ್ ಕೇಂದ್ರ, ಕಣ್ಣಿನ ಆಸ್ಪತ್ರೆ ಇವುಗಳು ರೋಟರಿಯ ಮಹಾನ್ ಕೊಡುಗೆಗಳಾಗಿದೆ. ಪ್ರಪಂಚದಲ್ಲಿ 35 ಲಕ್ಷ ಪೋಲಿಯೊ ಪೀಡಿತರಿದ್ದರು. ಇಂದು ಅಫ್ಘಾನಿಸ್ಥಾನ ಹಾಗೂ ಪಾಕಿಸ್ತಾನದಲ್ಲಿ ಬೆರಳೆಣಿಕೆ ಸಂಖ್ಯೆಯಲ್ಲಿ ಪೋಲಿಯೋ ಪೀಡಿತರಿದ್ದು, ಪೋಲಿಯೋ ನಿರ್ಮೂಲನೆ ಸಾಧ್ಯ ಎಂಬ ಕನಸನ್ನು ಕಂಡದ್ದು ರೋಟರಿ ಸಂಸ್ಥೆಯಾಗಿದೆ ಎಂದರು.

ಪ್ರತಿಯೋರ್ವರು ಸಮಾಜದಲ್ಲಿ ಒಳಿತನ್ನು ಮಾಡಬೇಕೆನ್ನುವ ಭರವಸೆ ಹೊಂದಬೇಕಾಗಿದೆ-ಪುರಂದರ ರೈ:
ರೋಟರಿ ಅಸಿಸ್ಟೆಂಟ್ ಗವರ್ನರ್ ಪುರಂದರ ರೈಯವರು ಮಾತನಾಡಿ, ಸಮಾಜದಲ್ಲಿ ತಪ್ಪುಗಳನ್ನು ಹುಡುಕುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ ತಪ್ಪುಗಳನ್ನು ಸರಿ ಮಾಡುವ ಬಗ್ಗೆ ಮಾರ್ಗದರ್ಶನ ಮಾಡುವವರು ಮಾತ್ರ ಇಲ್ಲ. ಪ್ರತಿಯೋರ್ವರು ಸಮಾಜದಲ್ಲಿ ಒಳಿತನ್ನು ಮಾಡಬೇಕೆನ್ನುವ ಭರವಸೆ ಹೊಂದಬೇಕಾಗಿದೆ. ಅಂಗನವಾಡಿಗಳ ಮಕ್ಕಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದಾಗ ಭವಿಷ್ಯದಲ್ಲಿ ಆ ಮಕ್ಕಳು ಉತ್ತಮ ಪ್ರಜೆಯಾಗಿ ಮೂಡಿ ಬರಲು ಸಾಧ್ಯ ಎಂದರು.

ಕ್ಲಬ್ ಪ್ಲಾಟಿನಂ ಫ್ಲಸ್ ಪ್ರಶಸ್ತಿ ಬಾಚಿಕೊಳ್ಳಲಿ-ನವೀನ್ ಚಂದ್ರ ನಾಯ್ಕ್:
ರೋಟರಿ ವಲಯ ಸೇನಾನಿ, ಕ್ಲಬ್ ಮಾಜಿ ಅಧ್ಯಕ್ಷರಾದ ನವೀನ್ ಚಂದ್ರ ನಾಯ್ಕ್ ರವರು ಕ್ಲಬ್ ಬುಲೆಟಿನ್ ಅನಾವರಣಗೊಳಿಸಿ ಮಾತನಾಡಿ, ಕ್ಲಬ್ ನಿರ್ಗಮನ ಅಧ್ಯಕ್ಷ ರಫೀಕ್ ರವರ ತಂಡ ಉತ್ತಮ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡಿದ್ದಕ್ಕೆ ಅಭಿನಂದನೆ ಸಲ್ಲಿಸಬೇಕಾಗಿದೆ ಹಾಗೆಯೇ ಕ್ಲಬ್ ಚುಕ್ಕಾಣಿ ಹಿಡಿದ ನೂತನ ಅಧ್ಯಕ್ಷ ರಾಜೇಶ್ ಬೆಜ್ಜಂಗಳರವರಿಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಮುಂದುವರೆಸಿ ಕ್ಲಬ್ ಪ್ಲಾಟಿನಂ ಫ್ಲಸ್ ಪ್ರಶಸ್ತಿ ಬಾಚಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದರು.

ರೋಗಿಗಳ ಪಾಲಿಗೆ ರೋಟರಿ ಆಶಾಕಿರಣವಾಗಿದೆ-ಮೊಹಮದ್ ರಫೀಕ್:
ಕ್ಲಬ್ ನಿರ್ಗಮನ ಅಧ್ಯಕ್ಷ ಮೊಹಮದ್ ರಫೀಕ್ ದರ್ಬೆ ಮಾತನಾಡಿ, ಅಂತರ್ ರಾಷ್ಟ್ರೀಯ ರೋಟರಿ ಸಂಸ್ಥೆಯಲ್ಲಿ ಅಧ್ಯಕ್ಷನಾಗುವುದು ಹೆಮ್ಮೆಯ ವಿಷಯ. ಅಧ್ಯಕ್ಷಾವಧಿಯಲ್ಲಿ ಸದಸ್ಯರ ಸಹಕಾರದಿಂದ ರೋಗಿಗಳಿಗೆ, ಅಂಗವಿಕಲರಿಗೆ ಸ್ಪಂದಿಸುವ ಮೂಲಕ ಆದ್ಯತೆ ನೀಡಿರುತ್ತೇವೆ. ಪ್ರಶಸ್ತಿ ಎಂಬುದು ಇಹಲೋಕ ಹಾಗೂ ಪರಲೋಕದಲ್ಲಿ ಸಿಗಬೇಕು. ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೆ ಸಹಾಯಹಸ್ತ ನೀಡಿದಾಗ ಸಹಾಯಹಸ್ತ ಪಡೆದವರ ಪ್ರಾರ್ಥನೆ ನಮ್ಮ ರೋಟರಿ ಕುಟುಂಬಕ್ಕೆ ಸಿಗುತ್ತದೆ. ಪುತ್ತೂರಿನಲ್ಲಿ ಡಯಾಲಿಸಿಸ್ ರೋಗಿಗಳಿಗೆ ಬೇಕಾದ ಡಯಾಲಿಸಿಸ್ ಮೆಷಿನ್, ಕಣ್ಣಿನ ಆಸ್ಪತ್ರೆ ರೋಟರಿಯಿಂದ ಆಗಿರುವುದು ಆಸ್ತಿಯೆನಿಸಿದೆ, ಮಾತ್ರವಲ್ಲ ರೋಗಿಗಳ ಪಾಲಿಗೆ ರೋಟರಿ ಆಶಾಕಿರಣವಾಗಿದೆ ಎಂದರು.

ಅಧ್ಯಕ್ಷ ಪದವಿ ಮುನ್ನೆಡೆಸಲು ಮನಸ್ಸು ಮುಖ್ಯ-ಸುಂದರ ರೈ:
ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಸುಂದರ ರೈ ಬಲ್ಕಾಡಿ ಮಾತನಾಡಿ, ನನಗೆ ಸಮಾಜಸೇವಾ ಸಂಸ್ಥೆಯಾಗಿರುವ ರೋಟರಿ ಕ್ಲಬ್ ಗೆ ಸೇರ್ಪಡೆಯಾಗಬೇಕು ಹಾಗೂ ರೋಟರಿಯ ಅಧ್ಯಕ್ಷನಾಗಬೇಕು ಎನ್ನುವ ಆದಮ್ಯ ಆಸೆ ಇತ್ತು. ಅದು ಈಗ ಕೈಗೂಡಿದೆ. ಅಧ್ಯಕ್ಷ ಪದವಿಗೆ ಹಣ ಮುಖ್ಯವಲ್ಲ ಬದಲಾಗಿ ಮನಸ್ಸು ಮುಖ್ಯ. ಹಣವಿಲ್ಲದಿದ್ದರೂ ಅಧ್ಯಕ್ಷ ಹುದ್ದೆಯನ್ನು ಹೇಗೆ ನಿಭಾಯಿಸುವುದು ಎಂಬುದು ಇತರ ಸಂಘಟನೆಗಳಲ್ಲಿ ಅಧ್ಯಕ್ಷ ಹುದ್ದೆಯನ್ನು ನಿಭಾಯಿಸಿದ ಅನುಭವವಿದೆ ಎಂದರು.

ನೂತನ ಸದಸ್ಯರ ಸೇರ್ಪಡೆ:
ಕ್ಲಬ್ ಸರ್ವಿಸ್ ನಡಿಯಲ್ಲಿ ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ನಮಿತಾ ನಾಯ್ಕ್, ವಿವಿಧ ಕಂಪೆನಿಗಳಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ನೀಡುತ್ತಿರುವ ವಸಂತ್ ಶಂಕರ್ ರವರುಗಳನ್ನು ಪಿಡಿಜಿ ಡಾ.ಆರ್.ಎಸ್ ನಾಗಾರ್ಜುನರವರು ರೋಟರಿ ಪಿನ್ ತೊಡಿಸಿ ಕ್ಲಬ್ ಗೆ ಅಧಿಕೃತವಾಗಿ ಬರಮಾಡಿಕೊಂಡರು.

ಸನ್ಮಾನ:
ಪ್ರಸೂತಿ ತಜ್ಞರಾಗಿ ಇಲ್ಲಿಯವರೆಗೆ ಸುಮಾರು ಮೂರು ಸಾವಿರಕ್ಕೂ ಮಿಕ್ಕಿ ಹೆರಿಗೆಯನ್ನು ಮಾಡಿಸಿದ ಇಲ್ಲಿನ ಆದರ್ಶ ಆಸ್ಪತ್ರೆಯ ವೈದ್ಯರಾದ ಡಾ.ಸುಬ್ರಾಯ ಭಟ್ ರವರನ್ನು, ರೋಟರಿ ಜಿಲ್ಲಾ ಪ್ರಾಜೆಕ್ಟ್ ಎನಿಸಿದ ಅಂಗನವಾಡಿಗಳ ಅಭಿವೃದ್ಧಿ ಇದರ ಚೇರ್ ಮ್ಯಾನ್ ಆಗಿ ಆಯ್ಕೆಯಾದ ಕ್ಲಬ್ ಸ್ಥಾಪಕ ಅಧ್ಯಕ್ಷ ಸಂತೋಷ್ ಶೆಟ್ಟಿಯವರನ್ನು ಹಾಗೂ ಕಳೆದ ವರ್ಷ ಉತ್ತಮ ಕಾರ್ಯಗಳನ್ನು ಮಾಡಿರುವ ನಿರ್ಗಮನ ಅಧ್ಯಕ್ಷ ಮೊಹಮದ್ ರಫೀಕ್, ಕಾರ್ಯದರ್ಶಿ ಚಂದ್ರಹಾಸ ರೈ ಬಿ, ಕೋಶಾಧಿಕಾರಿ ಡಾ.ರಾಮಚಂದ್ರ ಕೆ.ರವರುಗಳನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ವಿದ್ಯಾರ್ಥಿವೇತನ/ಅಭಿನಂದನೆ:
ಪುತ್ತೂರಿನವರಾಗಿದ್ದು ಪ್ರಸ್ತುತ ಆಮೇರಿಕಾದಲ್ಲಿರುವ ವಿನಾಯಕ ಕುಡ್ವರವರ ಪ್ರಾಯೋಜಕತ್ವದಲ್ಲಿ‌ ವಿವೇಕಾನಂದ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಚೈತ್ರಾ ಎಂಬ ಪ್ರತಿಭಾವಂತ ವಿದ್ಯಾರ್ಥಿನಿಗೆ ರೂ.50 ಸಾವಿರ ಮೊತ್ತದ ವಿದ್ಯಾರ್ಥಿವೇತನವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಎಕೆಎಸ್ ಕೆ.ವಿಶ್ವಾಸ್ ಶೆಣೈ ಉಪಸ್ಥಿತರಿದ್ದರು. ಅಲ್ಲದೆ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಕ್ಲಬ್ ಸದಸ್ಯರಾದ ಹೇಮಚಂದ್ರರವರ ಪುತ್ರಿ ತನ್ವಿ ಹಾಗೂ ನೂತನ ಅಧ್ಯಕ್ಷ ರಾಜೇಶ್ ಬೆಜ್ಜಂಗಳರವರ ಪುತ್ರಿ ವಿಖ್ಯಾತಿ ಬೆಜ್ಜಂಗಳರವರನ್ನು, 90 ವರ್ಷ ಹಳೆಯದಾದ ಬನ್ನೂರು ಶಾಲೆಯಲ್ಲಿ ಪ್ರಸ್ತುತ 30 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಶಾಲೆಯನ್ನು ಅಭಿವೃದ್ಧಿಗೊಳಿಸುತ್ತೇನೆ ಎಂದು ಹೇಳಿರುವ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಗುರುಪ್ರಸಾದ್ ಬನ್ನೂರುರವರನ್ನು, ಜಿಲ್ಲಾ ಪ್ರಾಜೆಕ್ಟ್ ನಡಿಯಲ್ಲಿ ಕ್ಲಬ್ 15 ಅಂಗನವಾಡಿಗಳನ್ನು ದತ್ತು ತೆಗೆದುಕೊಂಡಿದ್ದು, ಈ ಪೈಕಿ ಮೂರು ಅಂಗನವಾಡಿಗಳ ಅಭಿವೃದ್ಧಿಯ ನೇತೃತ್ವ ವಹಿಸಿದ ಸದಸ್ಯ ರಾಕೇಶ್ ಶೆಟ್ಟಿಯವರನ್ನು ಅಭಿನಂದಿಸಲಾಯಿತು.

ಕೊಡುಗೆ:
ಜಿಲ್ಲಾ ಪ್ರಾಜೆಕ್ಟ್ ನಡಿಯಲ್ಲಿ ಮಳೆ ನೀರು ಕೊಯ್ಲು ಯೋಜನೆಯ ಪ್ರಯುಕ್ತ ವೀರಮಂಗಲ ಸರಕಾರಿ ಶಾಲೆಗೆ ಮಳೆ ನೀರನ್ನು ಬಾವಿಗೆ ಮರುಪೂರಣ ಮಾಡುವ ಶುದ್ಧೀಕರಣ ಪರಿಕರವನ್ನು ಶಾಲಾ ಮುಖ್ಯ ಶಿಕ್ಷಕ ತಾರಾನಾಥ ಸುವರ್ಣರವರಿಗೆ ಕ್ಲಬ್ ವತಿಯಿಂದ ಹಸ್ತಾಂತರಿಸಲಾಯಿತು.

ಬೇಬಿ ನಿನಾದ ಪ್ರಾರ್ಥಿಸಿದರು. ನಿರ್ಗಮನ ಅಧ್ಯಕ್ಷ ಮೊಹಮದ್ ರಫೀಕ್ ದರ್ಬೆ ಸ್ವಾಗತಿಸಿ, ನೂತನ ಕಾರ್ಯದರ್ಶಿ ಡಾ.ರಾಮಚಂದ್ರ ಕೆ. ವಂದಿಸಿದರು. ಸದಸ್ಯರಾದ ಪುರುಷೋತ್ತಮ ಶೆಟ್ಟಿ, ಪದ್ಮನಾಭ ಶೆಟ್ಟಿ, ಕಿರಣ್, ಅಮಿತಾ ಶೆಟ್ಟಿರವರು ಹೂಗುಚ್ಚ ನೀಡಿ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ಚಂದ್ರಹಾಸ ರೈ ಬಿ. ವರದಿ ಮಂಡಿಸಿದರು. ಪದಪ್ರದಾನ ಅಧಿಕಾರಿ, ಅಸಿಸ್ಟೆಂಟ್ ಗವರ್ನರ್, ವಲಯ ಸೇನಾನಿ, ನೂತನ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿಯವರ ಪರಿಚಯವನ್ನು ರಾಕೇಶ್ ಶೆಟ್ಟಿ, ಸಾಹಿರಾ ಝುಬೈರ್, ಜಗನ್ನಾಥ ಅರಿಯಡ್ಕ, ಲಾವಣ್ಯ ನಾಯ್ಕ್, ನವ್ಯಶ್ರೀ ನಾಯ್ಕ್, ಅಶೋಕ್ ನಾಯ್ಕ್ ರವರು ಪರಿಚಯ ನೀಡಿದರು. ಸಾರ್ಜಂಟ್ ಎಟ್ ಆಮ್ಸ್೯ ಸಂತೋಷ್ ಶೆಟ್ಟಿ, ಜೊತೆ ಕಾರ್ಯದರ್ಶಿ ಅಭಿಜಿತ್ ಕೆ, ಬುಲೆಟಿನ್ ಎಡಿಟರ್ ಸನತ್ ಕುಮಾರ್ ರೈ, ಕ್ಲಬ್ ಸರ್ವಿಸ್ ನಿರ್ದೇಶಕ ಜಯಪ್ರಕಾಶ್ ಅಮೈ, ವೊಕೇಶನಲ್ ಸರ್ವಿಸ್ ನಿರ್ದೇಶಕ ಚಿದಾನಂದ ರೈ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕಿ ನವ್ಯಶ್ರೀ ನಾಯ್ಕ್,ಯೂತ್ ಸರ್ವಿಸ್ ನಿರ್ದೇಶಕ ಪ್ರದೀಪ್ ಪೂಜಾರಿ, ಅಂತರ್ ರಾಷ್ಟ್ರೀಯ ಸರ್ವಿಸ್ ನಿರ್ದೇಶಕ ರಾಕೇಶ್ ಶೆಟ್ಟಿಯವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯೆ ಭಾರತಿ ಎಸ್.ರೈ ಕಾರ್ಯಕ್ರಮ ನಿರೂಪಿಸಿದರು.

ಪದಾಧಿಕಾರಿಗಳಿಗೆ ಪದಪ್ರದಾನ:
ನೂತನ ಅಧ್ಯಕ್ಷ ಡಾ.ರಾಜೇಶ್ ಬೆಜ್ಜಂಗಳ, ಕಾರ್ಯದರ್ಶಿ ಡಾ.ರಾಮಚಂದ್ರ ಕೆ. ಕೋಶಾಧಿಕಾರಿ ಸಾಹಿರಾ ಝುಬೈರ್, ನಿಕಟಪೂರ್ವ ಅಧ್ಯಕ್ಷ ಮಹಮ್ಮದ್ ರಫೀಕ್, ಉಪಾಧ್ಯಕ್ಷ ಚಂದ್ರಹಾಸ ರೈ ಬಿ, ನಿಯೋಜಿತ ಅಧ್ಯಕ್ಷ ಅಶೋಕ್ ನಾಯ್ಕ, ಸಾರ್ಜಂಟ್ ಎಟ್ ಆಮ್ಸ್೯ ಸಂತೋಷ್ ಕುಮಾರ್ ಶೆಟ್ಟಿ, ಜತೆ ಕಾರ್ಯದರ್ಶಿ ಅಭಿಜಿತ್ ಕೆ, ಬುಲೆಟಿನ್ ಸಂಪಾದಕ ಸನತ್ ಕುಮಾರ್ ರೈ, ಸಹ ಸಂಪಾದಕ ಜಗನ್ನಾಥ್ ಅರಿಯಡ್ಕ, ಕ್ಲಬ್ ಸರ್ವೀಸ್ ನಿರ್ದೇಶಕ ಜಯಪ್ರಕಾಶ್ ಅಮೈ, ವೃತ್ತಿ ಸೇವಾ ನಿರ್ದೇಶಕ ಚಿದಾನಂದ ರೈ, ಯುವಜನ ಸೇವಾ ನಿರ್ದೇಶಕ ಪ್ರದೀಪ್ ಪೂಜಾರಿ, ಸಮುದಾಯ ಸೇವಾ ನಿರ್ದೇಶಕಿ ನವ್ಯಶ್ರಿ ನಾಯ್ಕ್, ಅಂತರ್ರಾಷ್ಟ್ರೀಯ ಸೇವಾ ನಿರ್ದೇಶಕ ರಾಕೇಶ್ ಶೆಟ್ಟಿ,
ಸಭಾಪತಿಗಳಾಗಿ ಪದ್ಮನಾಭ ಶೆಟ್ಟಿ (ಸಿ.ಎಲ್.ಸಿ.ಸಿ) ರಮೇಶ್ ರೈ ಬೊಳೋಡಿ(ಸಾರ್ವಜನಿಕ ಸಂಪರ್ಕ),ಶಾಂತಕುಮಾರ್(ಹಾಜರಾತಿ), ಅಶ್ರಪ್ ಪಿ.ಎಂ(ಸದಸ್ಯತನ), ಯತೀಶ್ ಸುವರ್ಣ(ಆತಿಥ್ಯ), ಕುಮಾರಸ್ವಾಮಿ(ಕ್ರೀಡೆ), ಶಿವರಾಮ ಎಂ.ಎಸ್(ಸಾಂಸ್ಕ್ರತಿಕ), ಬಿ.ಟಿ ಮಹೇಶ್ಚಂದ್ರ ಸಾಲಿಯಾನ್(ಪ್ರಚಾರ), ಜಯಪ್ರಕಾಶ್ ಎ.ಎಲ್(ಪ್ರವಾಸ),
ಪ್ರಮೋದ್ ಕೆ(ಮಾಹಿತಿ ಹಕ್ಕು), ಕಿರಣ್ ಬಿ.ವಿ(ದತ್ತಿನಿಧಿ), ಪುರುಷೋತ್ತಮ ಶೆಟ್ಟಿ( ಪಲ್ಸ್ ಪೋಲಿಯೊ), ಭಾರತಿ ಎಸ್ ರೈ(ಟೀಚ್), ಲಾವಣ್ಯ ನಾಯ್ಕ್, (ಶಿಷ್ಟಾಚಾರ) ಅಮಿತಾ ಎಸ್ ಶೆಟ್ಟಿ ( ಮಹಿಳಾ ಸಬಲೀಕರಣ), ಪುರುಷೋತ್ತಮ‌ ನಾಯ್ಕ್(ನೀರು ಮತ್ತು ನೈರ್ಮಲ್ಯ) ತ್ವೇಜ್ ಎಸ್.ಪಿ(ವೆಬ್ ಸೈಟ್) ವಿಷ್ಣು ಭಟ್ (ಗ್ರಾಹಕ ಹಕ್ಕು) ಸುಧೀರ್ ಶೆಟ್ಟಿ ( ವ್ಯವಹಾರ) ನೋಯಲ್ ಡಿ’ ಸೋಜ( ಆರೋಗ್ಯ)ಜಯಪ್ರಕಾಶ್ ನಾಯ್ಕ್(ಪರಿಸರ) ಹೇಮಚಂದ್ರ(ಆರ್ಥಿಕ ಅಭಿವೃದ್ದಿ) ಸತ್ಯ ಶಂಕರ್(ವೃತ್ತಿ ಮಾಹಿತಿ) ಪ್ರದೀಪ್ ಬೊಳುವಾರು(ಜಿಲ್ಲಾ ಯೋಜನೆಗಳು), ರಮೇಶ್ ರೈ ಡಿಂಬ್ರಿ, (ಮಾನವ ಸಂಪನ್ಮೂಲ ಅಭಿವೃದ್ದಿ), ಅಂಗನವಾಡಿ ಅಭಿವೃದ್ದಿ ಕಾರ್ಯಕ್ರಮಗಳ ಜಿಲ್ಲಾ ಚೇರ್ ಮ್ಯಾನ್ ಸಂತೋಷ್ ಕುಮಾರ್ ಶೆಟ್ಟಿರವರಿಗೆ ಪದಪ್ರದಾನ ಅಧಿಕಾರಿ ಡಾ.ಆರ್.ಎಸ್ ನಾಗಾರ್ಜುನರವರು ಪ್ರಮಾಣವಚನ ಬೋಧಿಸಿ, ಪದಪ್ರದಾನ ಮಾಡಿದರು.

ಅಧ್ಯಕ್ಷ ಪದವಿಯನ್ನು ಪ್ರೀತಿಪೂರ್ವಕವಾಗಿ ಸ್ವೀಕರಿಸುತ್ತೇನೆ
ಸಾಮಾನ್ಯ ಸದಸ್ಯನಾಗಿರಬೇಕು ಎಂಬ ದೃಢ ನಿರ್ಧಾರದಲ್ಲಿ ಇದ್ದವನು ಇಂದು ಅಧ್ಯಕ್ಷನಾದೆ. ಮಂಜೇಶ್ವರನಾದವ ನನಗೆ ಪುತ್ತೂರಿನಲ್ಲಿ ಜೇಸಿಐ, ರೋಟರಿ ಸದಸ್ಯರೇ ನನ್ನ ಕುಟುಂಬವಾಗಿದೆ. ಬೈಕ್ ಸ್ಕಿಡ್ ಆಗಿದ್ದ ಸಂದರ್ಭದಲ್ಲಿ ನಮ್ಮ ಕ್ಲಬ್ ಸದಸ್ಯರು ಅಪತ್ಬಾಂದವರಂತೆ ನನ್ನ ನೆರವಿಗೆ ಬಂದಿರುವುದು ಎಂದಿಗೂ ಮರೆಯಲಾಗದು. ಈ ಋಣವನ್ನು ತೀರಿಸಲು ಎಂದಿಗೂ ಸಾಧ್ಯವಾಗದಿದ್ದರೂ ಕ್ಲಬ್ ಅಧ್ಯಕ್ಷನಾಗಿ ಸಮಾಜಮುಖಿ ಕಾರ್ಯಗಳ ಮೂಲಕ ಋಣ ತೀರಿಸುತ್ತೇನೆ ಎಂದು ನಂಬಿದ್ದೇನೆ. ನಮ್ಮ ಕ್ಲಬ್ ನಲ್ಲಿ ಅಧ್ಯಕ್ಷನಾದವರಿಗೆ ಯಾವುದೇ ಆರ್ಥಿಕ ಹೊರೆ ಆಗಬಾರದೆನ್ನುವ ದೃಷ್ಟಿಕೋನದಿಂದ ಎಲ್ಲರೂ ಸೇರಿಕೊಂಡು ಕ್ಲಬ್ ಮುನ್ನೆಡೆಸುವ ಎಂಬ ನಿರ್ಧಾರವು ನಮ್ಮಲ್ಲಿನ ಆತಂಕ ದೂರ ಮಾಡಿದೆ. ಇದರಿಂದ ರೋಟರಿಯಲ್ಲಿ ಮತ್ತಷ್ಟು ಕಾರ್ಯ ಮಾಡಲು ಸಾಧ್ಯವಾಗಿದ್ದು ಅಧ್ಯಕ್ಷ ಪದವಿಯನ್ನು ಪ್ರೀತಿಪೂರ್ವಕವಾಗಿ ಸ್ವೀಕರಿಸುತ್ತೇನೆ.
-ಡಾ|ರಾಜೇಶ್ ಬೆಜ್ಜಂಗಳ,
ನೂತನ ಅಧ್ಯಕ್ಷರು,
ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್

ಆರ್.ಬಿ.ಇ/ಆರ್.ಬಿ.ಸಿಗೆ ಚಾಲನೆ:
ಕ್ಲಬ್ ಗಳು ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಯಾವಾಗಲೂ ಚಿಂತನೆ ನಡೆಸುತ್ತಿದ್ದರೂ, ರೋಟರಿ ಬಂಧುಗಳ ವ್ಯವಹಾರ ವೃದ್ಧಿ ಬಗ್ಗೆ ಯಾರೂ ಚಿಂತನೆ ಮಾಡಿರುವುದಿಲ್ಲ. ಈ ಸಂದರ್ಭದಲ್ಲಿ ರೋಟರಿ ಬಂಧುಗಳ ವ್ಯವಹಾರ ವೃದ್ಧಿಸಿಕೊಳ್ಳಲು ನವೆಂಬರ್ 25-27ರ ತನಕ ಹಮ್ಮಿಕೊಳ್ಳುವ ‘ರೋಟರಿ ಬಿಸಿನೆಸ್ ಎಕ್ಸ್ಪೋ’ ಅಲ್ಲದೆ ರೋಟರಿ ಬಂಧುಗಳ ವ್ಯವಹಾರ ಬಗ್ಗೆ ಪ್ರತಿ ವಾರ ಒಂದು ಗಂಟೆ ಚರ್ಚೆ ಹಂಚಿಕೊಳ್ಳುವ ಸಲುವಾಗಿ ‘ರೋಟರಿ ಬಿಸಿನೆಸ್ ಎನ್ಕ್ಲೇವ್’ ಇವನ್ನು ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.

LEAVE A REPLY

Please enter your comment!
Please enter your name here