ಪುತ್ತೂರು: ಶಿಕ್ಷಕ ಬಸ್ಕಿ ತೆಗೆಸಿದ ಪರಿಣಾಮ ವಿದ್ಯಾರ್ಥಿನಿಯೋರ್ವಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಾಡ್ನೂರಿನಿಂದ ವರದಿಯಾಗಿದೆ. ವಿದ್ಯಾರ್ಥಿನಿ ತರಗತಿಯಲ್ಲಿ ಪೀಕಲಾಟ ಮಾಡಿದ್ದಾಳೆಂದು ಆರೋಪಿಸಿ ಆರನೇ ತರಗತಿಯ ವಿದ್ಯಾರ್ಥಿನಿಯನ್ನು ಸುಮಾರು ಹೊತ್ತಿನ ತನಕ ಬಸ್ಕಿ ತೆಗೆಸಿದ್ದು ಅಸ್ವಸ್ಥ ವಿದ್ಯಾರ್ಥಿನಿಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಕಾವು ಮಾಡ್ನೂರು ಸರಕಾರಿ ಹಿ.ಪ್ರಾ. ಶಾಲೆಯ ಪ್ರಭಾರ ಮುಖ್ಯಗುರು ವಿದ್ಯಾರ್ಥಿನಿಯನ್ನು ಬಸ್ಕಿ ತೆಗೆಯುವಂತೆ ಹೇಳಿದ್ದರು. ಸುಮಾರು ಹೊತ್ತಿನ ಬಳಿಕ ಬಸ್ಕಿ ತೆಗೆದ ವಿದ್ಯಾರ್ಥಿನಿ ಅಸ್ವಸ್ಥಗೊಂಡಿದ್ದಳು. ತಕ್ಷಣ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಬಸ್ಕಿ ತೆಗೆಸಿದ ಪ್ರಭಾರ ಮುಖ್ಯಗುರುಗಳ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಶಾಸಕರಿಗೆ ಪೋಷಕರು ದೂರು ನೀಡಲಾಗಿದೆ.
Home ಇತ್ತೀಚಿನ ಸುದ್ದಿಗಳು ಮಾಡ್ನೂರು: ಶಾಲೆಯಲ್ಲಿ ಬಸ್ಕಿ ತೆಗೆದು ವಿದ್ಯಾರ್ಥಿನಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು-ಮುಖ್ಯ ಶಿಕ್ಷಕನ ವಿರುದ್ಧ ದೂರು