ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಪೋಕ್ಸೋ ಕಾಯ್ದೆ ಮತ್ತು ಸೈಬರ್ ಕ್ರೈಮ್ ಕುರಿತು ಜಾಗೃತಿ ಕಾರ್ಯಾಗಾರ

0

ಉಪ್ಪಿನಂಗಡಿ: ಸೈಬರ್ ಅಪರಾಧದ ದುಷ್ಪರಿಣಾಮಗಳು ಮತ್ತು ಪೋಕ್ಸೋ ಕಾಯ್ದೆಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜು.11ರಂದು ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಕಾನೂನು ಮಾಹಿತಿ ಕಾರ್ಯಾಗಾರವು ಶ್ರೀ ಗುರು ಸುಧೀಂದ್ರ ಕಲಾಮಂದಿರದಲ್ಲಿ ನಡೆಯಿತು. ಪುತ್ತೂರಿನ ಚಾಣಕ್ಯ ಕಾನೂನು ಘಟಕದ ವಕೀಲ ಶ್ಯಾಮ್ ಪ್ರಸಾದ್ ಕೈಲಾರ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರತಿಯೊಬ್ಬ ವ್ಯಕ್ತಿಯು ಕಾನೂನಿನ ಜ್ಞಾನವನ್ನು ಹೊಂದಿರಬೇಕು.

ಮೊಬೈಲ್ ಬಳಸುವ ಸಂದರ್ಭದಲ್ಲಿ ಜಾಗೃತರಾಗಿರಬೇಕು. ಪ್ರತಿ ಗ್ರಾಹಕರನ್ನು ವಂಚಿಸಲು ಸೈಬರ್ ದುಷ್ಕರ್ಮಿಗಳು ಪ್ರತೀ ಬಾರಿ ವಿಭಿನ್ನ ಮಾದರಿಗಳನ್ನು ಅಳವಡಿಸಿಕೊಳ್ಳುತ್ತಾರೆ. ಆದ್ದರಿಂದ ಮೊಬೈಲನ್ನು ಅಗತ್ಯಕ್ಕಾಗಿ ಮಾತ್ರ ಬಳಸುವ ಮೂಲಕ ಯಾವುದೇ ರೀತಿಯ ಅಪರಾಧಗಳಿಗೆ ಅವಕಾಶ ನೀಡಕೂಡದು. ಅಪ್ರಾಪ್ತ ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಯುವ ಸಲುವಾಗಿ ಪೋಕ್ಸೋ ಕಾಯಿದೆಯನ್ನು ಜಾರಿಗೆ ತರಲಾಗಿದ್ದು, ಅಪ್ರಾಪ್ತರು ಅಪರಿಚಿತರೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳದೆ ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು. ನಂತರ ಮಾತನಾಡಿದ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಜಯಪ್ರಸಾದ್ ಕಡಮ್ಮಾಜೆ, ಉತ್ತಮ ಸಮಾಜ ನಿರ್ಮಿಸುವಲ್ಲಿ ಅವಿಭಕ್ತ ಕುಟುಂಬದ ಪಾತ್ರ ಮಹತ್ತರವಾದದ್ದು. ಅವಿಭಕ್ತ ಕುಟುಂಬದಲ್ಲಿ ಬೆಳೆಯುವ ಮಕ್ಕಳು ತಮ್ಮ ಹಿರಿಯರಿಂದ ಉತ್ತಮ ಸಂಸ್ಕಾರವನ್ನು ಪಡೆಯುತ್ತಾರೆ. ತಂದೆ-ತಾಯಿ, ಗುರು-ಹಿರಿಯರೊಂದಿಗೆ ಗೌರವಯುತವಾಗಿ ಬದುಕುವ ಸಮಾಜ ನಮ್ಮದಾದಾಗ ಅಪರಾಧಗಳು ಕಡಿಮೆಯಾಗುತ್ತದೆ ಎಂದರು.
ಸಂಸ್ಥೆಯ ಮುಖ್ಯ ಶಿಕ್ಷಕಿ ವೀಣಾ ಆರ್.ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಕೌನ್ಸಿಲರ್ ಪದ್ಮಶ್ರೀ ಕಾರ್ಯಕ್ರಮನ್ನು ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here