ಆನಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಉದ್ಘಾಟನೆ

0

ಪುತ್ತೂರು: ಆನಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಉದ್ಘಾಟನೆ ನಡೆಯಿತು. ದ,ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷೆ ಕೆ.ಪಿ ಸುಚರಿತ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಮಹಿಳಾ ಸಹಕಾರ ಸಂಘವು ತುಂಬಾ ಎತ್ತರವಾಗಿ ಬೆಳೆಯುತ್ತಿದೆ. ಮಹಿಳೆಯರು ಎಲ್ಲಾ ಸಂಘ ಸಂಸ್ಥೆಯಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಪ್ರಶಸ್ತಿಯ ಸ್ಥಾನವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು.

ದ.ಕ.ಹಾಲು ಉತ್ಪಾದಕ ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ಮಾತನಾಡಿ ಬೆಳ್ತಂಗಡಿಯಲ್ಲಿರುವ ಒಂದು ಮಹಿಳಾ ಸಹಕಾರ ಸಂಘವು ಉತ್ತಮ ಪ್ರಶಸ್ತಿ ಪಡೆದಿದೆ. ಅದು ಅಷ್ಟು ಪ್ರಗತಿ ಹೊಂದಿದೆ ಎಂದು ಹೇಳಿದರು. ಸುಚರಿತ ಶೆಟ್ಟಿಯವರು ಸಣ್ಣ ಪ್ರಾಯದಿಂದಲೇ ಹೈನುಗಾರಿಕೆ ಮಾಡುತ್ತಿದ್ದು ಈಗ ಪುತ್ತೂರು ವಲಯದಲ್ಲಿ ೬೦ ಕೋಟಿ ವೆಚ್ಚದಲ್ಲಿ ಹಾಲಿನ ಶೀಥಲೀ ಕೇಂದ್ರವನ್ನು ಸ್ಥಾಪನೆಗೆ ಒತ್ತು ಕೊಟ್ಟು ಇನ್ನು ಒಂದು ವರ್ಷದಲ್ಲಿ ಪ್ರಾರಂಭ ಮಾಡಲಿದ್ದಾರೆ ಎಂದು ಹೇಳಿದರು.
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕಿ ಸವಿತಾ ಎನ್. ಶೆಟ್ಟಿ ಮಾತನಾಡಿ ಮಾಹಿತಿ ನೀಡಿದರು. ಅವರ ಮನೆಯಲ್ಲಿ ಒಂದು ಕರುವನ್ನು ಸಾಕಿ ಈಗ ಅವರ ದನದ ಹಟ್ಟಿಯಲ್ಲಿ ತುಂಬಾ ದನಗಳು ಆಗಿದೆ ಎಂದು ಅವರದ್ದೇ ಉದಾಹರಣೆ ನೀಡಿ ಮಹಿಳೆಯರಿಗೆ ಉತ್ತೇಜನ ಕೊಟ್ಟರು. ಮಹಿಳೆಯರು ಕೂಡಾ ಹೈನುಗಾರಿಕೆಯಲ್ಲಿ ಆಸಕ್ತಿ ತೋರಿಸಿ ಹೈನುಗಾರಿಕೆಯನ್ನು ಅಭಿವೃದ್ಧಿ ಮಾಡಿ ಎಂದು ಹೇಳಿದರು. ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಅಶೋಕ್ ಎಮ್. ಡಿ. ಮಾತನಾಡಿ ಈ ಸಂಘ ನಿಮ್ಮದು ಕೃಷಿಭೂಮಿಯಲ್ಲಿ ಕೆಲಸ ಮಾಡಿ ಅಭಿವೃದ್ಧಿ ಮಾಡಿ ಎಂದು ಹೇಳಿದರು. ಮಹಿಳೆಯರಿಗೆ STEP (ಸ್ಟೆಪ್) ಯೋಜನೆ ಜಾರಿಗೆ ಬಂದಿದೆ ಎಂದು ಹೇಳಿದರು. ಹೆಣ್ಣು ಕರುಗಳಿಗೆ 6 ತಿಂಗಳು ಪಶು ಆಹಾರ ಒಕ್ಕೂಟದಿಂದ ಕೊಡುತ್ತಾರೆ ಎಂದು ಹೇಳಿದರು. ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಪದ್ಮನಾಭ ಶೆಟ್ಟಿ ಮಾತನಾಡಿ ಒಕ್ಕೂಟದಿಂದ ಶೇ.3 ಲೋನ್ ದ.ಕ. ಒಕ್ಕೂಟದಿಂದ ನೀಡುತ್ತಾರೆ, ಹೈನುಗಾರಿಕಾ ಇನ್ಸುರೆನ್ಸ್ ವ್ಯವಸ್ಥೆಯು ಒಕ್ಕೂಟದಿಂದ ನೀಡುತ್ತಾರೆ. ಹೊಸತಾಗಿ ದನವನ್ನು ತೆಗೆಯುವವರಿಗೂ ಒಕ್ಕೂಟದಿಂದ ಪಶು ಆಹಾರ ವ್ಯವಸ್ಥೆ ಮಾಡುತ್ತಾರೆ ಎಂದು ಹೇಳಿದರು.

ಆನಡ್ಕ ಹಾಳು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಎಂ ವನಜಾಕ್ಷಿ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ್ ರೈ ಬಳಜ್ಜ, ನಿರ್ದೇಶಕರಾದ ಬಿ.ನಿರಂಜನ್, ಪ್ರಧಾನ ವ್ಯವಸ್ಥಾಪಕ ಡಾ.ನಿತ್ಯಾನಂದ ಭಕ್ತ, ವ್ಯವಸ್ಥಾಪಕ ಡಾ.ರಾಮಕೃಷ್ಣ ಭಟ್, ಉಪವ್ಯವಸ್ಥಾಪಕ ಡಾ.ಸತೀಶ್ ರಾವ್, ಸಹಾಯಕ ವ್ಯವಸ್ಥಾಪಕ ಡಾ.ಅನುದೀಪ್, ನರಿಮೊಗರು ಗ್ರಾಮ ಪಂಚಾಯತ್, ಅಧ್ಯಕ್ಷೆ ವಿದ್ಯಾ ಎ., ನರಿಮೊಗರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಪ್ರಭು, ಶಾಂತಿಗೋಡು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ, ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಗೌಡ, ಮಜಲು, ತಾರನಾಥ್ ಎಮ್., ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಿವ್ಯ ಅವರು ಸ್ವಾಗತಿಸಿ , ಜ್ಯೋತಿ ನಾಯಕ್‌ ಮಜಲು ಧನ್ಯವಾದ ಅರ್ಪಿಸಿದರು.

LEAVE A REPLY

Please enter your comment!
Please enter your name here