ಆಲಂಕಾರು ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

0

ಆಲಂಕಾರು: ಆಲಂಕಾರು ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ದುರ್ಗಾಂಬಾ ಪದವಿ ಪೂರ್ವ ಕಾಲೇಜ್ ನಲ್ಲಿ ನಡೆಯಿತು. ಅಲಂಕಾರು ಕೃಷಿ ಪತ್ತಿನ ಸಹಕಾರಿ ಸಂಘ ದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಯನ್ ಪ್ರಶಾಂತ್ ರೈ ಮನವಳಿಕೆ ಯವರು ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿ ಗಳು ಉತ್ತಮ ನಾಯಕತ್ವದ ಗುಣವನ್ನು ರೂಡಿಸಿಕೊಳ್ಳಬೇಕೆಂದು ತಿಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಅತ್ಯಂತ ಮಹತ್ವ ಇದೆ ಎಂದು ತಿಳಿಸಿ ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಶುಭಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ ಆಡಳಿತ ಮಂಡಳಿಯ ಅಧ್ಯಕ್ಷ ದಯಾನಂದ ರೈ ಮನವಳಿಕೆ ಯವರು ಮಾತನಾಡಿ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ವಿಶ್ವಕ್ಕೆ ಮಾದರಿಯಾಗಿದೆ.

ಆದ್ದರಿಂದ ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಅರಿವನ್ನು ಹೊಂದಿರಬೇಕು ಎಂದು ತಿಳಿಸಿ ಶುಭ ಹಾರೈಸಿದರು. ಆಡಳಿತ ಮಂಡಳಿಯ ಸದಸ್ಯರಾದ ಹೇಮಂತ್ ರೈ ಮನವಳಿಕೆ, ದಯಾನಂದ ಗೌಡ ಆಲಡ್ಕ, ಮುತ್ತಪ್ಪ ಪೂಜಾರಿ ನೆಯ್ಯಲ್ಗ, ತಾರನಾಥ ರೈ ನಗ್ರಿ, ಪ್ರಾಂಶುಪಾಲ ನವೀನ್ ರೈ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಪ್ರೌಢಶಾಲಾ ವಿಭಾಗದ ಮುಖ್ಯ ಗುರುಗಳಾದ ಶ್ರೀಪತಿ ರಾವ್ ರವರು ಕಾಲೇಜ್ ವಿಭಾಗ ದಲ್ಲಿ ವಿದ್ಯಾರ್ಥಿ ನಾಯಕಿ ಮೈತ್ರಿ,ಶಿಕ್ಷಣ ಮಂತ್ರಿ ಪ್ರಜ್ವಲ್, ಆರೋಗ್ಯ ಮಂತ್ರಿ ಪ್ರಜ್ಞಾ, ಸಾಂಸ್ಕೃತಿಕ ಮಂತ್ರಿ ತೀರ್ಥ, ಕ್ರೀಡಾ ಮಂತ್ರಿ ಕೃತಿ ಕೆ.ಎಸ್, ತೋಟಗಾರಿಕಾ ಮಂತ್ರಿ ಗಗನ್, ಕಾರ್ಯದರ್ಶಿಯಾಗಿ ಭ್ರಾಮರಿ ಪ್ರೌಡ ಶಾಲಾ ವಿಭಾಗದಲ್ಲಿ ಶಾಲಾ ನಾಯಕನಾಗಿ ಅಶ್ವಿತ್,ಶಿಕ್ಷಣ ಮಂತ್ರಿಯಾಗಿ ರಾಶಿಕ, ಆರೋಗ್ಯ ಮಂತ್ರಿಯಾಗಿ ಅನನ್ಯ, ಸಾಂಸ್ಕೃತಿಕ ಮಂತ್ರಿಯಾಗಿ ಹಂಸಿನಿ, ಕ್ರೀಡಾ ಮಂತ್ರಿಯಾಗಿ ರಾಕೇಶ್, ತೋಟಗಾರಿಕ ಮಂತ್ರಿಯಾಗಿ ಶರತ್ ರವರಿಗೆ
ಪ್ರತಿಜ್ಞಾವಿಧಿ ಬೋಧಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅರ್ಚನಾ ಕಾರ್ಯಕ್ರಮ ನಿರೂಪಿಸಿ 10ನೇ ತರಗತಿಯ ವಿದ್ಯಾರ್ಥಿನಿ ಬಿ ಲಕ್ಷ್ಯ ಅವರು ಚುನಾವಣಾ ವರದಿ ವಾಚನ ಮಾಡಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪಲ್ಲವಿ ಅತಿಥಿಗಳನ್ನು ಸ್ವಾಗತಿಸಿ , ಚಿತ್ರೇಶ್ ಧನ್ಯವಾದ ಸಮರ್ಪಿಸಿದರು ಬೋಧಕ ಬೋಧಕೇತರ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here