ಹಾಜಿ ಮುಸ್ತಾಫ ಕೆಂಪಿ ಅವರ ಸ್ಮರಣಾರ್ಥ ಜು.14ರಂದು ರಕ್ತದಾನ ಶಿಬಿರ – ಅನುಸ್ಮರಣೆ ಕಾರ್ಯಕ್ರಮ

0

ಉಪ್ಪಿನಂಗಡಿ: ಇಲ್ಲಿನ ಮಾಲೀಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ, ದ.ಕ. ಜಿಲ್ಲೆಯ ಧಾರ್ಮಿಕ ನೇತಾರ ಹಾಜಿ ಮುಸ್ತಾಫ ಕೆಂಪಿಯವರ ಸ್ಮರಣಾರ್ಥ ಜು.14ರಂದು ಬೆಳಗ್ಗೆ ಬೃಹತ್ ರಕ್ತದಾನ ಶಿಬಿರ ಉಪ್ಪಿನಂಗಡಿಯ ಇಂಡಿಯನ್ ಸ್ಕೂಲ್‌ನಲ್ಲಿ ನಡೆಯಲಿದ್ದು, ಬಳಿಕ ಮಾಲೀಕುದ್ದೀನಾರ್ ಮಸೀದಿಯಲ್ಲಿ ಜುಮಾ ನಮಾಝಿನ ಬಳಿಕ ತಹಲೀಲ್ ಸಮರ್ಪಣೆ, ಅನುಸ್ಮರಣಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಲೀಕುದ್ದೀನಾರ್ ಮಸೀದಿಯ ಉಪಾಧ್ಯಕ್ಷರಾದ ಹಾಜಿ ಎಚ್. ಯೂಸುಫ್ ತಿಳಿಸಿದರು.
ಮಸೀದಿಯ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಕ್ತದಾನ ಶಿಬಿರವನ್ನು ಬೆಳಗ್ಗೆ 9ಕ್ಕೆ ಮಾಲೀಕುದ್ದೀನಾರ್ ಜುಮಾ ಮಸೀದಿಯ ಖತೀಬರಾದ ಅಬ್ದುಸ್ಸಲಾಂ ಫೈಝಿ ನೆರವೇರಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಯ ತನಕ ರಕ್ತದಾನ ಶಿಬಿರ ನಡೆಯಲಿದ್ದು, ಸುಮಾರು 500 ಯುನಿಟ್‌ಗಳಷ್ಟು ರಕ್ತ ಸಂಗ್ರಹಿಸುವ ಗುರಿಯಿದೆ. ಶುಕ್ರವಾರದ ಜುಮಾ ನಮಾಝಿನ ಬಳಿಕ ತಹಲೀಲ್ ಸಮರ್ಪಣೆ, ಅನುಸ್ಮರಣಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿಯ ಉಪಾಧ್ಯಕ್ಷರಾದ ಹಾಜಿ ಎಚ್. ಯೂಸುಫ್ ವಹಿಸಲಿದ್ದಾರೆ. ಬೆಳ್ತಂಗಡಿ ದಾರುಸ್ಸಲಾಂನ ಪ್ರಾಂಶುಪಾಲರಾದ ಸೈಯ್ಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ದುವಾಶೀರ್ವಚನ ನೀಡಲಿದ್ದಾರೆ, ಮುಖ್ಯ ಅತಿಥಿಗಳಾಗಿ ಆತೂರು ಜುಮಾ ಮಸೀದಿಯ ಖತೀಬ್ ಸೈಯ್ಯದ್ ಜಿಫ್ರಿ ತಂಙಳ್, ಕರ್ವೇಲು ಜುಮಾ ಮಸೀದಿಯ ಖತೀಬ್ ಸೈಯ್ಯದ್ ಅನಾಸ್ ತಂಙಳ್, ಸಮಸ್ತ ಕೇಂದ್ರ ಮುಶಾವರದ ಸದಸ್ಯರಾದ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಉಸ್ಮಾನ್ ಫೈಝಿ ತೋಡಾರು, ಮಾಲೀಕುದ್ದೀನಾರ್ ಜುಮಾ ಮಸೀದಿಯ ಖತೀಬರಾದ ಅಬ್ದುಸ್ಸಲಾಂ ಫೈಝಿ, ದಾರಿಮೀಸ್ ಅಸೋಸಿಯೇಶನ್‌ನ ರಾಜ್ಯಾಧ್ಯಕ್ಷ ಎಸ್.ಬಿ. ದಾರಿಮಿ, ಮಾಡನ್ನೂರು ನೂರುಲ್ ಹುದಾ ಅಕಾಡಮಿಯ ಪ್ರಾಂಶುಪಾಲ ಹನೀಫ್ ಹುದವಿ ದೇಲಂಪಾಡಿ ವಹಿಸಲಿದ್ದಾರೆ. ಜುಮಾ ನಮಾಝಿನ ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದರು.
ಮಾಲೀಕುದ್ದೀನಾರ್ ಜುಮಾ ಮಸೀದಿ ಉಪ್ಪಿನಂಗಡಿ, ನುಸ್ರತುಲ್ ಇಸ್ಲಾಂ ಕಮಿಟಿ ಉಪ್ಪಿನಂಗಡಿ, ಎಸ್ಕೆಎಸ್ಸೆಸ್ಸೆಫ್ ಉಪ್ಪಿನಂಗಡಿ ಕ್ಲಸ್ಟರ್, ಜಂಇಯ್ಯತುಲ್ ಮುಅಲ್ಲಿಮೀನ್ ಉಪ್ಪಿನಂಗಡಿ ರೇಂಜ್, ರೇಂಜ್ ಮದರಸಾ ಮ್ಯಾನೇಜ್ಮೆಂಟ್ ಕಮಿಟಿ, ಉಪ್ಪಿನಂಗಡಿ, ಉಬಾರ್ ಡೋನರ್ಸ್ ಹೆಲ್ಪ್ ಲೈನ್, ಯೂತ್ ಐಕಾನ್ ಚಾರಿಟೇಬಲ್ ಟ್ರಸ್ಟ್, ನೂರಾನಿಯಾ ಯಂಗ್ ಮೆನ್ಸ್ ಅಸೋಸಿಯೇಷನ್, ಕುದ್ಲೂರು, ಅಲ್ ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ಕಡವಿನಬಾಗಿಲು, ಸುಲ್ತಾನ್ ಯೂಥ್ ಫೆಡರೇಶನ್ ಹಳೆಗೇಟು, ಸಬೀಲ್ರುಶಾದ್ ಯಂಗ್‌ಮೆನ್ಸ್ ಅಸೋಸಿಯೇಷನ್ ನಿನ್ನಿಕಲ್ಲು, ಶಂಶುಲ್ ಉಲೇಮಾ ಯಂಗ್ ಮೆನ್ಸ್ ಅಸೋಸಿಯೇಷನ್ ಪವಿತ್ರನಗರ, ಇತ್ತಿಫಾಕುಲ್ ಮುಸ್ಲಿಮೀನ್ ವೆಲ್ಫೇರ್ ಅಸೋಸಿಯೇಶನ್ ಪೆರಿಯಡ್ಕ, ವಿಖಾಯ ರಕ್ತದಾನಿ ಬಳಗ, ದ.ಕ. ಜಿಲ್ಲೆ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಸಾಲಿಡಾರಿಟಿ ಯೂತ್ ಮೂಮ್‌ಮೆಂಟ್ ಉಪ್ಪಿನಂಗಡಿ ಇವುಗಳ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾಲೀಕುದ್ದೀನಾರ್ ಜುಮಾ ಮಸೀದಿಯ ಉಪಾಧ್ಯಕ್ಷ ಹಾರೂನ್ ರಶೀದ್ ಅಗ್ನಾಡಿ, ಪ್ರಧಾನ ಕಾರ್ಯದರ್ಶಿ ಶುಕೂರ್ ಹಾಜಿ ಶುಕ್ರಿಯಾ, ಜೊತೆ ಕಾರ್ಯದರ್ಶಿ ಅಬ್ದುರ್ರವೂಫ್ ಯು.ಟಿ., ಕೋಶಾಧಿಕಾರಿ ಮುಹಮ್ಮದ್ ಮುಸ್ತಾಫ, ಸದಸ್ಯರಾದ ಹಮೀದ್ ಕರಾವಳಿ, ಸಾಮಾಜಿಕ ಕಾರ್ಯಕರ್ತರಾದ ಇಸ್ಮಾಯೀಲ್ ತಂಙಳ್, ಶಬೀರ್ ಕೆಂಪಿ, ಇರ್ಷಾದ್ ಯು.ಟಿ., ಸಿದ್ದೀಕ್ ಕೆಂಪಿ, ತೌಸೀಫ್ ಯು.ಟಿ., ಮುಹಮ್ಮದ್ ಕೂಟೇಲು, ಆಚಿ ಇಬ್ರಾಹೀಂ ಕೆಂಪಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here