ಪುತ್ತೂರು: ಜೈ ತುಳುನಾಡ್ (ರಿ.) ಸಂಘಟನೆ ತುಳು ಭಾಷೆ, ಸಂಸ್ಕೃತಿ, ಲಿಪಿ, ನೆಲದ ಉಳಿವು ಅಭಿವೃಧ್ದಿಗಾಗಿ ನೆಲೆನಿಂತ ತುಳು ಕೂಟ. ಈ ಸಂಘದಲ್ಲಿ ಎಲ್ಲಾ ಕ್ಷೇತ್ರದ ವ್ಯಕ್ತಿಗಳು ಸದಸ್ಯರಾಗಿ ಒಟ್ಟಾಗಿ ಸೇರಿ ಭಾಷೆಗಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
2023-24ನೇ ಸಾಲಿನ ಕೇಂದ್ರಸಮಿತಿಯ ಅಧ್ಯಕ್ಷರಾಗಿ ವಿಶು ಶ್ರೀಕೇರಾ, ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ತುಲುವೆ ಹಾಗೂ ಕೋಶಧಿಕಾರಿಯಾಗಿ ಸಂತೋಷ್ ಕಟಪಾಡಿ ಆಯ್ಕೆಯಾಗಿದ್ದಾರೆ. ಅದೇ ರೀತಿ ಉಪಾಧ್ಯಕ್ಷರಾಗಿ ರವೀಶ್ ಪಡುಮಲೆ, ಉದಯ್ ಪೂಂಜಾ ಮತ್ತು ಉಮೇಶ್ ಸಾಲ್ಯಾನ್, ಉಪ ಕಾರ್ಯದರ್ಶಿಯಾಗಿ ಪೂರ್ಣಿಮಾ ಬಂಟ್ವಾಳ ಮತ್ತು ರಾಜಶ್ರೀ ತಲಪಾಡಿ, ಉಪ ಕೋಶಾಧಿಕಾರಿಯಾಗಿ ಪೂರ್ಣಿಮಾ ಕಿರಣ್, ಸಂಘಟನಾ ಕಾರ್ಯದರ್ಶಿಯಾಗಿ ಸುಮಂತ್ ಹೆಬ್ರಿ, ಉಪಸಂಘಟನಾ ಕಾರ್ಯದರ್ಶಿಯಾಗಿ ಶೇಖರ್ ಗಂಗೆನೀರ್ ಮತ್ತು ರಾಜೇಶ್ ನೀರುಡೆ, ತುಲು ಲಿಪಿ ಸಮಿತಿಯ ಸಮಿತಿಯ ಸಂಚಾಲಕರಾಗಿ ಪ್ರಶಾಂತ್ ನಂದಲಿಕೆ, ಉಪ ಸಂಚಾಲಕರಾಗಿ ಅಕ್ಷತಾ ಇನ್ನಂಜೆ, ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಸಂಚಾಲಕರಾಗಿ ಸದಾಶಿವ ಮುದ್ರಾಡಿ, ಮಾಹಿತಿ ಮತ್ತು ತಂತ್ರಜ್ಞಾನ ಸಮಿತಿಯ ಸಂಚಾಲಕರಾಗಿ ಯತೀಶ್ ಮುಂಡೋಡಿ, ತುಳು ಭಾಷಾ ಸಮಿತಿಯ ಸಂಚಾಲಕರಾಗಿ ಜಯಪ್ರಸಾದ್ ಕೆದಿಲ, ಉಪ ಸಂಚಾಲಕರಾಗಿ ಅನುಷಾ ಸಾಲ್ಯಾನ್ ಆಯ್ಕೆಯಾಗಿದ್ದಾರೆ.
ಜೈ ತುಳುನಾಡ್ ಪುತ್ತೂರು ವಲಯದ, ಸುಕೇಶ್ ಕೆಮ್ಮಾಯಿ ಇವರು ಮಾಹಿತಿ ಒದಗಿಸಿದರು. ಆಸಕ್ತಿ ಇರುವವರು https://jaitulunad.in/membership ಲಿಂಕಿನ ಮೂಲಕ ಸಂಘದ ಸದಸ್ಯತ್ವ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
9738083278
9481678579