ಕಾವು: ಗ್ಯಾರಂಟಿ ಯೋಜನೆಗಳ ನೋಂದಣಿ ಕೇಂದ್ರ ಸೇವಾಸಿಂಧು ಉದ್ಘಾಟನೆ

0

ಸರಕಾರದ ಯೋಜನೆಗಳು ಮನೆ ಬಾಗಿಲಿಗೆ ತಲುಪುವ ಕಾರ್ಯ ಮಾಡುತ್ತಿದ್ದೇವೆ: ಹೇಮನಾಥ ಶೆಟ್ಟಿ
ಪುತ್ತೂರು: ಸರಕರದ ಐದು ಗ್ಯಾರಂಟಿ ಯೋಜನೆಗಳು ಇಲ್ಲಿನ ಪ್ರತೀಯೊಂದು ಕುಟುಂಬಕ್ಕೂ ದೊರೆಯುವಂತಾಗಬೇಕು, ಜಾತಿ, ಮತ, ಧರ್ಮಗಳ ಬೇದವಿಲ್ಲದೆ ಎಲ್ಲರೂ ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಹೇಳಿದರು.


ಅವರು ಜು.14 ರಂದು ಕಾವು ಅಕ್ಷಯ ಕಾಂಪ್ಲೆಕ್ಸ್‌ನಲ್ಲಿ ಗ್ಯಾರಂಟಿ ಯೋಜನೆಗಳ ನೋಂದಣಿ ಕೇಂದ್ರ ಸೇವಾಸಿಂಧು ಉದ್ಘಾಟಿಸಿ ಮಾತನಾಡಿದರು.ಪುತ್ತೂರು-ಕಾವು ಲಯನ್ಸ್ ಕ್ಲಬ್ ಮತ್ತು ವಲಯ ಕಾಂಗ್ರೆಸ್ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಮಾಜ ಸೇವೆಯನ್ನು ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿರುವ ಲಯನ್ಸ್ ಸಂಸ್ಥೆ ಸರಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿಯೂ ನೆರವು ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.


ಲಯನ್ಸ್ ವಲಯಾಧ್ಯಕ್ಷ ಪಾವನರಾಮ ಮಾತನಾಡಿ ಲಯನ್ಸ್ ಸಂಸ್ಥೆಯು ಸೇವಾ ಸಂಸ್ಥೆಯಾಗಿದ್ದು ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಜನರಿಗೆ ಪ್ರಯೋಜನವಾಗುವ ಯೋಜನೆಗಳನ್ನು ಅವರಿಗೆ ತಲುಪಿಸುವ ಕೆಲಸವನ್ನು ನಾವು ಮಾಡಲಿದ್ದೇವೆ ಎಂದು ಹೇಳಿದರು.

ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಮಾತನಾಡಿ ಲಯನ್ಸ್ ಸಂಸ್ಥೆಯು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಎಂಬುದಕ್ಕೆ ನಾವು ಮಾಡುತ್ತಿರುವ ಸೇವೆಯೇ ಸಾಕ್ಷಿಯಾಗಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಚಂಧ್ರಶೇಖರ್ ಬಲ್ಯಾಯ, ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಅರಿಯಡ್ಕ ಗ್ರಾಪಂ ಸದಸ್ಯರುಗಳಾದ ಜಯಂತಿ, ಸಲ್ಮಾ, ಅಬ್ದುಲ್‌ರಹಿಮಾನ್, ಲಯನ್ಸ್ ಸಂಸ್ಥೆಯ ಪ್ರಮುಖರಾದ ಅಮ್ಮು ರೈ, ಜಗನ್ನಾಥ ರೈ ಗುತ್ತು, ಬಿ ಕೆ ಇಬ್ರಾಹಿಂ , ದಿನೇಶ್ ಗೌಡ ಅಮ್ಚಿನಡ್ಕ, ಜಯಪ್ರಕಾಶ್ ರಐ ನೂಜಿಬೈಲು, ಮೋಹನದಾಸ ಆಳ್ವ, ಸುರೇಖಾ ಡಿ ಶೆಟ್ಟಿ ಮೊದಲಾದವರುಯ ಉಪಸ್ತಿತರಿದ್ದರು.


ಪುತ್ತೂರು ಕಾವು ಲಯನ್ಸ್ ಕ್ಲಬ್ ಅಧ್ಯಕ್ಷರಾದ ದಿವ್ಯನಾಥ ಶೆಟ್ಟಿ ಕಾವು ಸ್ವಾಗತಿಸಿದರು. ಕ್ಲಬ್‌ನ ಕೋಶಾಧಿಕಾರಿ ಕೆ ಕೆ ಇಬ್ರಾಹಿಂ ವಂದಿಸಿದರು.ಕಾರ್ಯದರ್ಶಿ ದೇರಣ್ಣ ರೈ ಮುದರಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here