ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಚಾಪಲ್ಲ ಇದರ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

0

ಸವಣೂರು: ಇಲ್ಲಿನ ಪ್ರತಿಷ್ಠಿತ ಬದ್ರಿಯಾ ಜುಮ್ಮಾ ಮಸ್ಜಿದ್ ಚಾಪಲ್ಲ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಸಂಸ್ಥೆಯ ಬೆಳ್ಳಿಹಬ್ಬದ ಪ್ರಯುಕ್ತ ವನಮಹೋತ್ಸವ ಕಾರ್ಯಕ್ರಮವು ಜು.14ನೇ ಶುಕ್ರವಾರದಂದು ಚಾಪಲ್ಲ ಮಸೀದಿಯ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಇದರ ಅಧ್ಯಕ್ಷ ಝಕರಿಯಾ ಮಾಂತೂರು ವಹಿಸಿದ್ದರು. ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನರಿಮೊಗರು ಶಾಖೆಯ ಉಪವಲಯ ಅರಣ್ಯಾಧಿಕಾರಿ ಕುಮಾರಸ್ವಾಮಿಯವರು ನಮ್ಮ ಮನೆಯ ಸುತ್ತ ಮುತ್ತ ಗಿಡಗಳನ್ನು ನೆಡುವ ಮೂಲಕ ಪರಿಸರಕ್ಕೆ ನಾವು ಯಾವ ರೀತಿ ಕೊಡುಗೆಯನ್ನು ನೀಡಬಹುದು ಎಂದು ಸವಿಸ್ತಾರವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸವಣೂರು ಗ್ರಾಮ ಪಂಚಾಯತ್ ಸದಸ್ಯ ರಫೀಕ್ ಎಂ ಎ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಾಪಲ್ಲ ಮುದರ್ರಿಸ್ ಮುಹಮ್ಮದ್ ಅಶ್ರಫ್ ಫಾಝಿಲ್ ಬಾಖವಿ ಸಾಂಕೇತಿಕವಾಗಿ ಸಸಿ ವಿತರಣೆ ನಡೆಸಿದರು. ಕಾರ್ಯಕ್ರಮದಲ್ಲಿ ಚಾಪಲ್ಲ ಮಸೀದಿಯ ಉಪಾಧ್ಯಕ್ಷ ಮಹಮ್ಮದ್ ಹಾಜಿ ಸೋಂಪಾಡಿ, ಮಾಜಿ ಕಾರ್ಯದರ್ಶಿ ಅಬೂಬಕ್ಕರ್ ಹಾಜಿ, ಯುವ ಉದ್ಯಮಿ ಮಹಮ್ಮದ್ ಬಿ.ಎಂ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಮಾಅತಿನ ಹಿರಿಯ ಸದಸ್ಯರು, ಜಮಾಅತಿನ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಸದಸ್ಯರು ಭಾಗವಹಿಸಿದ್ದರು. ಅಲ್ ನೂರ್ ಜೊತೆ ಕಾರ್ಯದರ್ಶಿ ಸಫ್ವಾನ್ ಸವಣೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here