ಉಪ್ಪಿನಂಗಡಿ ಅರಫಾ ವಿದ್ಯಾಕೇಂದ್ರದಲ್ಲಿ ಶಾಲಾ ಮಂತ್ರಿಮಂಡಲ ರಚನೆ

0

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಅರಫಾ ವಿದ್ಯಾಕೇಂದ್ರದಲ್ಲಿ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು.
ಶಾಲಾ ವಿದ್ಯಾರ್ಥಿ ನಾಯಕಿಯಾಗಿ ಹತ್ತನೇ ತರಗತಿಯ ವಿದ್ಯಾರ್ಥಿನಿ ಹಿಬಾ ಫಾತಿಮಾ ಹಾಗೂ ಉಪನಾಯಕಿಯಾಗಿ 9ನೇ ತರಗತಿಯ ವಿದ್ಯಾರ್ಥಿನಿ ನಿಶಾನಾ ಆಯ್ಕೆಗೊಂಡಿದ್ದಾರೆ.
ಕ್ರೀಡಾಮಂತ್ರಿಯಾಗಿ ರಾಹಿಲ್, ಸಾಂಸ್ಕೃತಿಕ ಮಂತ್ರಿಯಾಗಿ ರಾಬಿಯ, ಶಿಸ್ತಿನ ಮಂತ್ರಿಯಾಗಿ ಅಂಬ್ರ, ಭಾಷಾ ಮಂತ್ರಿಯಾಗಿ ಸಾರಾ ಹಾಗೂ ಸ್ವಚ್ಚತಾ ಮಂತ್ರಿಯಾಗಿ ನಸೀಬ ಆಯ್ಕೆಯಾದರು.


ವಿದ್ಯಾರ್ಥಿಗಳು ಮತದಾನದ ಮೂಲಕ ಶಾಲೆಯ ಆಗುಹೋಗುಗಳಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸಲಿರುವ ವಿದ್ಯಾರ್ಥಿ ಪ್ರಮುಖರನ್ನು ಆಯ್ಕೆ ಮಾಡಿದರು. ಈ ಮತದಾನದ ಪ್ರಕ್ರಿಯೆಯನ್ನು ಶಾಲೆಯ ಮುಖ್ಯಶಿಕ್ಷಕಿ ಹಾಗು ಅಧ್ಯಾಪಕ ವೃಂದದವರು ನೆರವೇರಿಸಿದರು.

LEAVE A REPLY

Please enter your comment!
Please enter your name here