ಪುತ್ತೂರು: ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿ ಗ್ರಾ.ಪಂ ವ್ಯಾಪ್ತಿಯ ಸೇಡಿಯಾಪಿನಲ್ಲಿ ಮಣ್ಣು ತುಂಬಿ ಮೋರಿ ಬ್ಲಾಕ್ ಆಗಿ ಗ್ರಾಮದ ಕುಡಿಯುವ ನೀರು ಸರಬರಾಜಿನ ಪೈಪ್ ಒಡೆದು ಹೋಗಿ ಸಮಸ್ಯೆಯಾಗಿತ್ತು. ಈ ವಿಚಾರದಲ್ಲಿ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆಯವರು ಮೋರಿಯ ಮಣ್ಣನ್ನು ತೆರವು ಮಾಡಿ ದುರಸ್ತಿ ಪಡಿಸಿದ್ದಾರೆ.
ಮಣ್ಣು ತುಂಬಿ ಮೋರಿ ಬ್ಲಾಕ್ ಆಗಿ ನೀರು ರಸ್ತೆಯ ಮೇಲೆ ಹರಿಯುತ್ತಿತ್ತು. ಅದನ್ನು ದುರಸ್ಥಿ ಮಡುವ ವೇಳೆ ಕುಡಿಯುವ ನೀರು ಸರಬರಾಜಿನ ಪೈಪ್ ಒಡೆದಿತ್ತು. ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆ ಮುಖ್ಯ ಕಾರ್ಯವಾಹಕ ಅಭಿಯಂತರರಾದ ರಾಜಾರಾಂ , ಕೋಡಿಂಬಾಡಿ ಗ್ರಾಪಂ ಪಿಡಿಒ ರೋಹಿತ್ ರವರು ಸ್ಥಳಕ್ಕೆ ಹಿಟಾಚಿ ತರಿಸಿ ತೆರವು ಮಾಡಿ ಪೈಪ್ ದುರಸ್ತಿ ಮಾಡಿಸಿದ್ದಾರೆ. ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರ್, ನೀರು ನಿರ್ವಾಹಕರಾದ ಗೋಪಾಲ ಮತ್ತು ಚಂದ್ರಶೇಖರ್ ನೆರವಾದರು.