ಬೆಂಗಳೂರು ಉತ್ತರ ಇನ್ನರ್ ವ್ಹೀಲ್ ಕ್ಲಬ್‌ನ ಅಧ್ಯಕ್ಷರಾಗಿ ಕೆದಂಬಾಡಿ ಮೂಲದ ಮೌರೆಲ್ಲಾ ದೀಕ್ಷಿತ್ ಪದಸ್ವೀಕಾರ

0

ಪುತ್ತೂರು: ಬೆಂಗಳೂರು ಉತ್ತರ ಇನ್ನರ್ ವ್ಹೀಲ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಕೆದಂಬಾಡಿ ಮೂಲದ ಮೌರೆಲ್ಲಾ ದೀಕ್ಷಿತ್ ಪದಸ್ವೀಕಾರ ಮಾಡಿದರು. ಅವರು ಪ್ರತಿಷ್ಠಿತ ಬೆಂಗಳೂರು ಉತ್ತರ ಇನ್ನರ್ ವ್ಹೀಲ್ ಕ್ಲಬ್‌ನ 56ನೆಯ ಅಧ್ಯಕ್ಷರಾಗಿ 2023-24 ನೇ ಸಾಲಿಗೆ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ. ಎಸ್.ಎ.ಐ.ಸಿ. ಮತ್ತು ವಿಪ್ರೋ ಕಂಪೆನಿಗಳಲ್ಲಿ ಆಫೀಸ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದ ಮೌರೆಲ್ಲಾ ಅವರ ಪತಿ ಇಂಜಿನಿಯರ್ ರಾಜೇಶ್ ದೀಕ್ಷಿತ್‌ರವರು ಲೆನೊವೊ ಕಂಪ್ಯೂಟರ್ಸ್ ನ ಗ್ಲೋಬಲ್ ಡೈರೆಕ್ಟರ್ ಆಗಿದ್ದವರು. ಪುತ್ರ ಸಂಕೇತ್ ಅವರು ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದು ಜತೆಗೆ ಚಾರ್ಟರ್ಡ್ ಫೈನಾನ್ಷಿಯಲ್ ಅನಲಿಸ್ಟ್ ಅಂತಿಮ ಹಂತದಲ್ಲಿದ್ದಾರೆ. ಕೆದಂಬಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪುತ್ತೂರು ಮಾಯ್ ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆ, ಸಂತ ವಿಕ್ಟರನ ಪ್ರೌಢಶಾಲೆ ಮತ್ತು ಸಂತ ಫಿಲೊಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಮೌರೆಲ್ಲಾ ದೀಕ್ಷಿತ್/ಮಸ್ಕರೇನಸ್ ಅವರು ಹಿಂದೆ ಕೆದಂಬಾಡಿ ಸರಕಾರಿ ಶಾಲೆಯಲ್ಲಿ ಮುಖ್ಯಗುರುವಾಗಿದ್ದ ಹಿಲರಿ ಜೋಸೆಫ್ ಮಸ್ಕರೇನಸ್ ಮತ್ತು ಎವ್ಲಿನ್ ಮಸ್ಕರೇನಸ್ ಅವರ ಕೊನೆಯ ಪುತ್ರಿ.

LEAVE A REPLY

Please enter your comment!
Please enter your name here