ವಿಟ್ಲ: ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಶಾಲಾ ಸಂಘಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ವಿವಿಧ ಸಂಘಗಳಾದ ಸಾಹಿತ್ಯ ಸಂಘ, ಆರೋಗ್ಯ ಮತ್ತು ವಿಜ್ಞಾನ ಸಂಘ, ಚುನಾವಣಾ ಸಾಕ್ಷಾರತಾ ಸಂಘ,ಪರಿಸರ ಸಂಘ, ಗ್ರಾಹಕ ಸಂಘಗಳನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು.
ಬಳಿಕ ಶಾಲಾ ಆಡಳಿತ ಅಧಿಕಾರಿ ರಾಧಾಕೃಷ್ಣ ಎ.ರವರು ಮಾತನಾಡಿ ಸಾಹಿತ್ಯ ಸಂಘವು ಮನುಷ್ಯನ ಅಂತರಾಳದ ಭಾವನೆಗಳ ಅಭಿವ್ಯಕ್ತಗೊಳಿಸುತ್ತದೆ. ಸಂತಸ ದುಃಖಗಳ ಗ್ರಹಿಕೆ ಗಳ ಸುಂದರ ಪ್ರಸ್ತುತಿಯೇ ಸಾಹಿತ್ಯ ರಚನೆ. ಇದು ಎಲ್ಲಾ ಭಾಷೆ, ಬರಹ ಚಿತ್ರಕಲೆ, ಹಾಡುಗಾರಿಕೆಯಿಂದ ಸಾಧ್ಯ ಎಂದರು.
ಪ್ರಾಂಶುಪಾಲ ಜಯರಾಮ್ ರೈ ರವರು ಆರೋಗ್ಯ ಮತ್ತು ವಿಜ್ಞಾನ ಸಂಘದ ಉದ್ಘಾಟನೆ ನೆರವೇರಿಸಿ ವಿಜ್ಞಾನ ವಿದ್ಯಾರ್ಥಿಗಳ ಶ್ರಮವನ್ನು ಪ್ರಶಂಸಿಸಿ ಪ್ರಸ್ತುತ ಸಮಾಜಕ್ಕೆ ವೈಜ್ಞಾನಿಕ ಬೆಳವಣಿಗೆಯ ಪಾತ್ರದ ಅವಶ್ಯಕತೆಗಳ ಬಗೆಗೆ ತಿಳಿಸಿ ವಿದ್ಯಾರ್ಥಿಗಳು ಸದುಪಯೋಗಗೊಳಿಸುವಂತೆ ತಿಳಿಸಿದರು. ವಿದ್ಯಾರ್ಥಿಗಳು ವಿವಿಧ ವಿಜ್ಞಾನದ ಮಾದರಿಗಳನ್ನು ಪ್ರದರ್ಶಿಸಿದರು ಮತ್ತು ಪ್ರಾತ್ಯಕ್ಷಿಕೆಯನ್ನು ತೋರಿಸಿದರು.
ಉಪ ಪ್ರಾಂಶುಪಾಲೆಯಾದ ಜ್ಯೋತಿ ಶೆಣೈ, ಸಂಘದ ನೋಡೆಲ್ ಅಧಿಕಾರಿಗಳಾದ ಸವಿತಾ, ಕವಿತಾ, ಸರಸ್ವತಿ, ಎಮಿಲ್ದಾ ಸೀಮಾ,ಗುರುವಪ್ಪ ನಾಯ್ಕ್, ರೇಖಾ, ಐಡಾ ಲಸ್ರದೊ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಫ್ರೀಡಾ ಡಿ ಸೋಜಾ ತನ್ನ ಅನಿಸಿಕೆ ವ್ಯಕ್ತಪಡಿಸಿದರು. ಚಾರಿತ್ರ್ಯ ಕವನ ವಾಚಸಿದರು, ಅಭಿನವ್ ಕೃಷ್ಣ, ಹಸ್ತ, ಸಂಘದ ಕಾರ್ಯದರ್ಶಿ ವೈಷ್ಣವಿ, ಫಾತಿಮತ್ ಶಮಾ ಸಂಘದ ವಿವಿಧ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಸಂಘದ ಅಧ್ಯಕ್ಷರಾದ ವಿದ್ಯಾರ್ಥಿ ಪ್ರಥಮ್ ಕಾಮತ್ ಉಪಾಧ್ಯಕ್ಷರಾದ ವಿಜೇತ್, ವಿಜ್ಞಾನ ಸಂಘದ ವಿದ್ಯಾರ್ಥಿಗಳಾದ ಖದೀಜತ್ಜ ಝೀಲಾ,ಈಶ ಶರ್ಮ, ರಾಘವ ಶೌರಿ ,ಗ್ರಾಹಕ ಸಂಘದಲ್ಲಿ ವಿದ್ಯಾರ್ಥಿ ಸುಹಾನ, ವಿದ್ಯಾರ್ಥಿಗಳಾದ ಯಶ್ ರಾಜ್ , ಶ್ರವಣ್ ಕುಮಾರ್, ರಿದಾ ಬೇಗಂ ಮೊದಲಾದವರು ಉಪಸ್ಥಿತರಿದ್ದರು.
ಚುನಾವಣಾ ಸಂಘದ ಸದಸ್ಯೆ ವಿದ್ಯಾರ್ಥಿನಿ ನವ್ಯಾ ಭಟ್ ಕ್ಲಬ್ ನ ಮಹತ್ವವನ್ನು ತಿಳಿಸಿದರು, ಆದ್ಯಾ ಡಿ ಶಾಸ್ತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು.