ಪುತ್ತೂರು: ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ನಿರ್ದೇಶನ ಪ್ರಕಾರ 10,650 ಮದ್ರಸಗಳಲ್ಲೊಂದಾದ ಮುಹಮ್ಮದೀಯ ಮದ್ರಸ 4803 ದರ್ಬೆ ಮದ್ರಸದಲ್ಲಿ ಮುಅಲ್ಲಿಂ ಡೇ ಆಚರಿಸಲಾಯಿತು.
ಮುಖ್ಯೋಪಾದ್ಯಯ ಅಬ್ದುಲ್ ಕರೀಂ ದಾರಿಮಿ ಕುಂಬ್ರ ಪ್ರಾರ್ಥನೆ ಹಾಗೂ ಉದ್ಭೋದನೆ ನೀಡಿದರು.ದರ್ಬೆ ಜುಮಾ ಮಸೀದಿ ಅಧ್ಯಕ್ಷ ಆಝಾದ್ ಅಬ್ದುರ್ರಹ್ಮಾನ್ ಹಾಜಿ ದರ್ಬೆ, ಕಾರ್ಯದರ್ಶಿ ಅಬ್ದುಲ್ ಅಝೀಝ್ ದರ್ಬೆ, ಕೋಶಾಧಿಕಾರಿ ಹಸೈನಾರ್ ಹಾಜಿ ಪಡೀಲ್, ಬಶೀರ್ ಹಾಜಿ ದರ್ಬೆ, ಶರೀಫ್ ನೇರಳಕಟ್ಟೆ,ಶರೀಫ್ ಕಿಡ್ಸ್, ಸಲೀಂ ಕೆಮ್ಮಾಯಿ, ಅಲಿ ಹಾಜಿ ಸಾಮೆತ್ತಡ್ಕ, ಅರ್ಷದ್ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಮುಹಮ್ಮದೀಯ ಮಸೀದಿ ಹಾಗೂ ಮದ್ರಸ ಆಡಳಿತ ಸಮಿತಿ ಖತೀಬ್ ಉಸ್ತಾದ್ ಅಬ್ದುಲ್ ಕರೀಂ ದಾರಿಮಿ ಮತ್ತು ಸಹ ಅಧ್ಯಾಪಕ ಅಬ್ದುರ್ರಝಾಕ್ ಮುಸ್ಲಿಯಾರ್ ರನ್ನು ಶಾಲು ಹೊದಿಸಿ ಗೌರವಿಸಿದರು ಸಹ ಅಧ್ಯಾಪಕ ಅಬ್ದುರ್ರಝಾಕ್ ಮುಸ್ಲಿಯಾರ್ ಸ್ವಾಗತಿಸಿ, ವಂದಿಸಿದರು.