ಪುತ್ತೂರು: ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಶನ್ ನಗರ ವಲಯದ ನೂತನ ಸಮಿತಿ ಸಭೆಯು ನಗರ ವಲಯ ಅಧ್ಯಕ್ಷ ದಿನೇಶ್ ಸಂಪ್ಯ ಅಧ್ಯಕ್ಷತೆಯಲ್ಲಿ ಜೈನ ಬಸದಿ ಹಾಲ್ ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ದಿನೇಶ್ ಸಂಪ್ಯ ಜುಲೈ.30ರಂದು ನಡೆಯುವ ಕ್ಷೇತ್ರ ಸಮಿತಿಯ ಮಹಾಸಭೆಯ ಪೂರ್ವ ತಯಾರಿ ಬಗ್ಗೆ ವಿವರಣೆ ನೀಡಿದರು. ವೃತ್ತಿ ಬಾಂಧವರು ಸದಸ್ಯತ್ವ ನವೀಕರಣ ಮಾಡಬೇಕು, ಇದೇ ವೇಳೆ ಹೊಸ ಸದಸ್ಯತ್ವ ಮಾಡಲು ಅವಕಾಶವಿದ್ದು, ಇನ್ನೂ ಸದಸ್ಯತ್ವ ಪಡೆಯದವರು ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳುವಂತೆ ಅವರು ಮನವಿ ಮಾಡಿದರು.
2022-23ನೇ ಸಾಲಿನಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ SSLC ಮತ್ತು PUC ವಿದ್ಯಾರ್ಥಿಗಳನ್ನು ಗುರುತಿಸುವ ಕಾರ್ಯ ಮಹಾಸಭೆಯಲ್ಲಿ ನಡೆಯಲಿದ್ದು, ನಗರ ವಲಯಾಧ್ಯಕ್ಷರಲ್ಲಿ ತಮ್ಮ ಹೆಸರು ನೋಂದಾಯಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರ ವಲಯ ಕಾರ್ಯದರ್ಶಿ ಆಶಾ ಕಲ್ಲಾರೆ, ಕೋಶಾಧಿಕಾರಿ ಜಯದೇವ್ ನಾಯಕ್ , ನಿಕಟಪೂರ್ವ ಅಧ್ಯಕ್ಷ ದಯಾನಂದ ಹೆಗ್ಡೆ ತಾರಿಗುಡ್ಡೆ, ನಿಕಟಪೂರ್ವ ವಲಯಾಧ್ಯಕ್ಷ ಯಶೋಧರ್ ಜೈನ್ ದರ್ಬೆ, ಲೆಕ್ಕಪರಿಶೋಧಕ ರಘುನಾಥ ಬಿ, ನಿಕಟಪೂರ್ವ ಕಾರ್ಯದರ್ಶಿ ಭಾರತಿ, ವಿಜಯಲಕ್ಷ್ಮಿ, ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಮಾ ಯು ನಾಯ್ಕ್, ಹರಿಣಾಕ್ಷಿ, ಆಶಾ ಎನ್, ಸಾವಿತ್ರಿ, ವಿಮಲಾ ಕೆ, ಚಂದ್ರಿಕಾ ಎನ್, ಹರಿಣಿ ಡಿ, ವಿಜಯಶಾಂತಿ, ಪ್ರೇಮಲತಾ ಎಸ್, ಶ್ವೇತಾ, ರಮೇಶ್ ಕೆಮ್ಮಾಯಿ, ದಯಾಕರ್ ಎಚ್ ವಿ, ಗಾಯತ್ರಿ ಎಸ್, ದೀಕ್ಷಿತಾ, ರಮ್ಯಾ ಎಸ್, ಸವಿತಾ ಬಿ, ಮಾಲಿನಿ ದಿನೇಶ್, ಸುಚಿತ್ರಾ ನಾಯಕ್ ಕೆ, ಪವಿತ್ರ ಎನ್ ರೈ, ಮತ್ತಿತರರು ಉಪಸ್ಥಿತರಿದ್ದರು.