ವಿಟ್ಲ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಜತ್ತಪ್ಪ ಗೌಡ ನಾಯೊಟ್ಟು ನಿಧನ

0

ವಿಟ್ಲ : ವಿಟ್ಲ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಜತ್ತಪ್ಪ ಗೌಡ ನಾಯೊಟ್ಟು (83 ವ.)ರವರು ಅಸೌಖ್ಯದಿಂದ ನಿಧನರಾದರು.


ವಿಟ್ಲ ಗ್ರಾಮ ಪಂಚಾಯತ್ ಗೆ 2 ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಸದಸ್ಯರಾಗಿ ಆಯ್ಕೆಯಾಗಿದ್ದ ಇವರು ಒಂದು ಅವಧಿಯಲ್ಲಿ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ಬೊಳಂತಿಮೊಗರು ಸರಕಾರಿ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು ಮಾತ್ರವಲ್ಲದೆ ಬೊಳಂತಿಮೊಗರುವಿಗೆ ಸರ್ಕಾರಿ ಹೈಸ್ಕೂಲ್ ಬರಲು ಶ್ರಮವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿದ್ದ ಜತ್ತಪ್ಪ ಗೌಡರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.


ಮೃತರು ಪತ್ನಿ ಹಾಗೂ ಪುತ್ರರಾದ ನಿವೃತ್ತ ಸೈನಿಕ ಧನಂಜಯ ನಾಯೊಟ್ಟು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಕರುಣಾಕರ ನಾಯೊಟ್ಟು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here