ಆಲಂಕಾರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಜೇಸಿಐ ವಲಯ 15ರ ಪ್ರಾಂತ್ಯ ಬಿ.ಮಟ್ಟದ ಅತ್ಯುತ್ತಮ ಘಟಕ ಪ್ರಶಸ್ತಿ ಒಳಗೊಂಡಂತೆ ಒಟ್ಟು 12 ಪ್ರಶಸ್ತಿಗಳನ್ನು ಜೆಸಿಐ ಆಲಂಕಾರು ಘಟಕವು ಜೆಸಿಐ ಜೋಡುಮಾರ್ಗ ನೇತ್ರಾವತಿ ಇದರ ಆತಿಥ್ಯದಲ್ಲಿ ನಡೆದ ಮಧ್ಯಂತರ ಸಮ್ಮೇಳನ ನಿಲುಮೆಯಲ್ಲಿ ತಮ್ಮ ಮುಡಿಗೇರಿಸಿಕೊಂಡಿದೆ.
2023ನೇ ಸಾಲಿನಲ್ಲಿ ತಮ್ಮ ಅದ್ಬುತ ಕೆಲಸಗಳಿಂದ ಜನಮನ್ನಣೆಯನ್ನು ಗಳಿಸಿರುವ ಲಕ್ಷ್ಮೀನಾರಾಯಣ ಅಲೆಪ್ಪಾಡಿ ನೇತೃತ್ವದ ಜೇಸಿಐ ಆಲಂಕಾರು ಘಟಕವು ಅತ್ಯುತ್ತಮ ಘಟಕ ಪ್ರಶಸ್ತಿ, ವಿಶೇಷ ಕಾರ್ಯಕ್ರಮಗಳಿಗಾಗಿ ಸ್ಪೆಷಲ್ ಪ್ರೋಜೆಕ್ಟ್ ಪ್ರಶಸ್ತಿ, ತರಬೇತಿ ವಿಭಾಗದ ಟಾಪ್ 20 ಪ್ರಶಸ್ತಿ, ಕಾರ್ಯಕ್ರಮ ವಿಭಾಗದ ವಿಶೇಷ ಮನ್ನಣೆಗಳು, ರಕ್ತದಾನ ಕಾರ್ಯಕ್ರಮಕ್ಕಾಗಿ ವಿಶೇಷ ಗೌರವಾರ್ಪಣೆ, ಆಡಳಿತ ವಿಭಾಗದ ಡೈಮಂಡ್ ಪ್ರಶಸ್ತಿ, ಹೆಚ್ಜಿಎಫ್ ದೇಣಿಗೆಗಾಗಿ ಮೂರು ವಿಶೇಷ ಮನ್ನಣೆಗಳು ಸೇರಿ ಒಟ್ಟು 12 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೇಸಿಐ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ವಲಯ ಉಪಾಧ್ಯಕ್ಷ ಅಜಿತ್ಕುಮಾರ್ ರೈ, ವಲಯ ತರಬೇತಿ ವಿಭಾಗದ ನಿರ್ದೇಶಕ ಪ್ರದೀಪ್ ಬಾಕಿಲ, ರಾಷ್ಟ್ರೀಯ ಕಾರ್ಯಕ್ರಮಗಳ ನಿರ್ದೇಶಕ ವಿನೀತ್ ಶಗ್ರಿತ್ತಾಯ, ಆಲಂಕಾರು ಜೇಸಿಐ ಘಟಕಾಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ, ಆಲಂಕಾರು ಘಟಕದ ಪೂರ್ವಾಧ್ಯಕ್ಷರಾದ ಗುರುಪ್ರಸಾದ್ ರೈ, ಪ್ರವೀಣ್ ಆಳ್ವ, ತೋಶಿತ್ ರೈ, ಗುರುಕಿರಣ್ ಶೆಟ್ಟಿ, ಹೇಮಲತಾ ಪ್ರದೀಪ್, ಪ್ರಮುಖರಾದ ಕೃತಿಕಾ ಗುರುಕಿರಣ್, ದೀಕ್ಷಾ ಪ್ರವೀಣ್ ಆಳ್ವ, ಮಂಜುನಾಥ ಮಣಕವಾಡ, ಮಾಸ್ಟರ್ ಆಶ್ಲೇಷ್, ಅದ್ವಿಕಾ ಮತ್ತಿತರರು ಉಪಸ್ಥಿತರಿದ್ದರು.