ರಾಜ್ಯಮಟ್ಟದ ಎಸ್‌ ಐ ಪಿ ಗ್ರ್ಯಾಂಡ್ ಫಿನಾಲೆಗೆ ಕಾವು ಸರಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆ-ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಶಾಲೆ

0

ಪುತ್ತೂರು: ರಾಜ್ಯಮಟ್ಟದ SIP ಗ್ರ್ಯಾಂಡ್ ಫಿನಾಲೆಗೆ ಕಾವು ಸರಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ. ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಶಾಲೆ ಇದಾಗಿದೆ. 2022-23ನೇ ಸಾಲಿನ ಕರ್ನಾಟಕ ಸ್ಕೂಲ್ ಇನ್ನೋವೇಷನ್ ಪ್ರೋಗ್ರಾಂನಲ್ಲಿ ರಾಜ್ಯದ ಒಟ್ಟು 12,000 ಇನ್ನೋವೇಷನ್ ಐಡಿಯಾಗಳಲ್ಲಿ ನಾಲ್ಕು ಸುತ್ತುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಂತಿಮ ಸುತ್ತಿಗೆ 32 ಐಡಿಯಾಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಕಾವು ಸರಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 4 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಫಾತಿಮಾ ಫಿದಾ. ಸಿ.ಹೆಚ್ (8ನೇ) (ಕಾವು ಚಾಕೋಟೆತ್ತಡ್ಕ ಉಸ್ಮಾನ್ ಸಿ.ಹೆಚ್ ಹಾಗೂ ಸಾಹಿರಾ ಎ ದಂಪತಿಯ ಪುತ್ರಿ), ಚಿರಾಯು ರೈ (7ನೇ) (ಕಾವು ಡೆಂಬಾಳೆ ರವೀಂದ್ರನಾಥ ರೈ ಹಾಗೂ ಸುಚೇತಾ ರೈ ದಂಪತಿಯ ಪುತ್ರ), ಪಿ.ಎ ಫಾತಿಮ್ಮತ್ ಝಲ್ಫಾ (8ನೇ) ( ಕಾವು ನೆಕ್ಕರೆ ಅಬ್ದುಲ್ ರೌಫ್ ಹಾಗೂ ದೈನಾಭಾ ಪಿ ದಂಪತಿಯ ಪುತ್ರಿ) ಹಾಗೂ ಫಾತಿಮ್ಮತ್ ಮಿದ್ ಹಾ (7ನೇ) (ಮಾಡ್ನೂರು ಕಾವು ಎ.ಕೆ ಮುಹಮ್ಮದ್ ರಫೀಕ್ ಹಾಗೂ ಸಾಬಿರಾ ದಂಪತಿ ಪುತ್ರಿ) ರವರ “ಫೇಸ್ ಡಿಟೆಕ್ಷನ್ ಆಂಡ್ ಅಲರ್ಟ್ ಸಿಸ್ಟಮ್ ಫಾರ್ ವೇಸ್ಟ್ ಡಿಸ್ಪೋಸಲ್” ಐಡಿಯಾವು SIP ರಾಜ್ಯಮಟ್ಟದ ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿದೆ. ಇವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ರವರ ಮಾರ್ಗದರ್ಶನದಲ್ಲಿ ಶಾಲಾ ಟಿಜಿಟಿ ಶಿಕ್ಷಕಿ ಪ್ರತಿಮಾ ಎಸ್‌ರವರು ಸಹಕಾರವನ್ನು ನೀಡಿರುತ್ತಾರೆ ಎಂದು ಮುಖ್ಯಗುರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳು ಜು.22, 23 ಹಾಗೂ 24 ರಂದು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ನಡೆಯುವ ರಾಜ್ಯಮಟ್ಟದ ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here