ರಾಮಕುಂಜ: ಅಧಿಕಾರಿಗಳ ಗೈರು; ರಾಮಕುಂಜ ಗ್ರಾ.ಪಂ.ಕೆಡಿಪಿ ಸಭೆ ಮುಂದೂಡಿಕೆ

0

ರಾಮಕುಂಜ: ಅಧಿಕಾರಿಗಳ ಗೈರು ಹಾಜರಿ ಹಿನ್ನೆಲೆಯಲ್ಲಿ ಜು.21ರಂದು ನಡೆಯಬೇಕಿದ್ದ ರಾಮಕುಂಜ ಗ್ರಾಮ ಪಂಚಾಯಿತಿ ಕೆಡಿಪಿ ಸಭೆ ಆ.5ಕ್ಕೆ ಮುಂದೂಡಲಾಗಿದೆ.


ಸಭೆ ಗ್ರಾ.ಪಂ.ಸಭಾಂಗಣದಲ್ಲಿ ಗ್ರಾ.ಪಂ.ಅಧ್ಯಕ್ಷೆ ಮಾಲತಿ ಎನ್.ಕೆ.ಅವರ ಅಧ್ಯಕ್ಷತೆಯಲ್ಲಿ ಆರಂಭಗೊಂಡಿತ್ತು. ಆದರೆ ಸಭೆಗೆ ಬಹುತೇಕ ಪ್ರಮುಖ ಇಲಾಖೆಯ ಅಧಿಕಾರಿಗಳು ಗೈರು ಹಾಜರಿಯಾಗಿದ್ದರು. ಈ ಬಗ್ಗೆ ಮಾತನಾಡಿದ ಪಿಡಿಒ ಲಲಿತಾ ಅವರು, ಕೆಡಿಪಿ ಸಭೆಗೆ ಹಾಜರಾಗುವಂತೆ ಎಲ್ಲಾ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ. ಆದರೆ ಬಹುತೇಕ ಇಲಖೆಯ ಅಧಿಕಾರಿಗಳು ಸಭೆಗೆ ಗೈರು ಹಾಜರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆ.5ಕ್ಕೆ ಸಭೆ ಮುಂದೂಡುವುದಾಗಿ ಹೇಳಿದರು.


ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯರಾದ ಸೂರಪ್ಪ ಕುಲಾಲ್, ಸುಚೇತಾ, ಆಯಿಷಾ, ಹಳೆನೇರೆಂಕಿ ಶಾಲಾ ಮುಖ್ಯಶಿಕ್ಷಕ ಸಾಂತಪ್ಪ ವೈ, ಕುಂಡಾಜೆ ಶಾಲಾ ಮುಖ್ಯಶಿಕ್ಷಕಿ ಪುಷ್ಪಾವತಿ, ಆರೋಗ್ಯ ಸಹಾಯಕಿಯರಾದ ಜಲಜ, ಲಲಿತ, ಮೆಸ್ಕಾಂ ಪವರ್‌ಮ್ಯಾನ್ ವಿಶ್ವನಾಥ, ಅಂಗನವಾಡಿ ಕಾರ್ಯಕರ್ತೆ ಯಮುನಾ, ಗ್ರಂಥಾಲಯ ಮೇಲ್ವಿಚಾರಕಿ ಜಾನಕಿ ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಲಲಿತಾ ಸ್ವಾಗತಿಸಿ, ನಿರೂಪಿಸಿದರು.

LEAVE A REPLY

Please enter your comment!
Please enter your name here