ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ – ಆರೋಪ
ಪುತ್ತೂರು: ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿ ಸಮೀಪ ಮಳೆ ನೀರು ಹೋಗುವ ರಸ್ತೆಯ ಮೋರಿಯೊಂದು ಬ್ಲಾಕ್ ಆಗಿ ಖಾಸಗಿ ವ್ಯಕ್ತಿಯೊಬ್ಬರ ಜಮೀನಿನ ಆವರಣಗೋಡೆ ಕುಸಿತಗೊಂಡಿದೆ.
ಕೋಡಿಂಬಾಡಿ ನಿವಾಸಿ ಚಂದ್ರಿಕಾ ರಮೇಶ್ ಎಂಬವರ ಜಮೀನಿನ ಆವರಣಗೋಡೆ ಕುಸಿದಿದೆ. ರಸ್ತೆಯ ಮೋರಿ ಬ್ಲಾಕ್ ಆಗಿರುವ ಕುರಿತು ಲೋಕೋಪಯೋಗಿ ಇಲಾಖೆಗೆ ದೂರು ನೀಡಿ ವಾರ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಮಳೆ ನೀರು ನಿಂತು ಜಮೀನು ಆವರಣಗೋಡೆ ಕುಸಿದಿದೆ ಎಂದು ರಮೇಶ್ ಅವರು ತಿಳಿಸಿದ್ದಾರೆ. ಮೋರಿ ಬ್ಲಾಕ್ ಆಗಿದ್ದರಿಂದ ಚರಂಡಿಯಲ್ಲಿ ನೀರು ತುಂಬಿ ದೊಡ್ಡ ಕೊಳವಾಗಿದೆ. ರಸ್ತೆಯಲ್ಲಿ ಸಾವಿರಾರು ವಾಹನಗಳು ಚಲಿಸುತ್ತಿದ್ದು ಇಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಿಸಬೇಕಾಗಿದೆ.