ಪುತ್ತೂರು:ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಮಹಾಸಭೆ ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿಎಸ್ ಅಧ್ಯಕ್ಷತೆಯಲ್ಲಿ ಜು.22ರಂದು ಜರುಗಿತು, ಮುಖ್ಯ ಶಿಕ್ಷಕಿ ಭಗಿನಿ ಶಾಂತಿಯವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಸಂಪನ್ಮೂಲ ವ್ಯಕ್ತಿ ಡಾಕ್ಟರ್ ವಿದ್ಯಾ ವಿನುತ ಡಿಸೋಜ ಅಸಿಸ್ಟೆಂಟ್ ಪ್ರೊಫೆಸರ್ ಸೇಂಟ್ ಅಲೋಷಿಯಸ್ ಕಾಲೇಜು ಮಂಗಳೂರು ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.
2022-23ರ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಗೌರವ್ ಪಿ ಡಿ ಹಾಗೂ ವರ್ಷಿಣಿ ಆಳ್ವ ಇವರನ್ನು ಸನ್ಮಾನಿಸಲಾಯಿತು. ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದಂತಹ 40 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಆ 1ರಿಂದ 12ರವರೆಗೆ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಇಂಟರ್ನ್ಯಾಷನಲ್ ಜಂಬೂರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಶಿಕ್ಷಕಿ ಮೈತ್ರೀಯಿ ಹಾಗೂ ನಾಲ್ವರು ವಿದ್ಯಾರ್ಥಿ ಏರೊಲ್ ಶಮನ್ ಡಿಸೋಜಾ ಸ್ಟೆಲಸ್ ಆಶ್ಲಿ ದಲ್ಮೇದ, ವೈಷ್ಣವಿ, ಸಮೃದ್ಧಿ ಚೌಟ ಗೌರವಿಸಲಾಯಿತು.
ಶಿಕ್ಷಕ ರಕ್ಷಕ ಸಂಘ -2023-24 ರ ಸಾಲಿನ ಉಪಾಧ್ಯಕ್ಷರಾಗಿ ಡಾ. ಏಡೀನ್ ಸಂತಾನ್ ಡಿಸೋಜ ಹಾಗೂ ಮಕ್ಕಳ ರಕ್ಷಣಾ ಸಂಘದ ಅಧ್ಯಕ್ಷರಾಗಿ ಆಶಾ ನಾಯಕ್ ಹಾಗೂ ರಕ್ಷಕ ಶಿಕ್ಷಕ ಸಂಘದ ಸದಸ್ಯರನ್ನು ಸರ್ವಾನುಮತದಿಂದ ಆರಿಸಲಾಯಿತು . ವೇದಿಕೆಯಲ್ಲಿ ಆಶಾ ನಾಯಕ್ ಹಾಗೂ ಡಾ. ಎಡ್ವಿನ್ ಸಂತಾನ್ ಡಿಸೋಜಾ ವೇದಿಕೆಯಲ್ಲಿದ್ದರು.
ಶಿಕ್ಷಕಿ ಚಂದ್ರಾವತಿ ಸ್ವಾಗತಿಸಿ , ಶಿಕ್ಷಕಿ ಫ್ಲೋರಿನ ವರದಿ ವಾಚನ ಮಾಡಿದರು. ಶಿಕ್ಷಕಿ ಭಗಿನಿ ಗ್ರೇಸಿ ವಂದಿಸಿ , ಶಿಕ್ಷಕಿ ಬೃಂದಾ ಕಾರ್ಯಕ್ರಮ ನಿರೂಪಣೆ ಮಾಡಿದರು.