ಜು.25: ದೋಳ್ಪಾಡಿ ಪ್ರೌಢ ಶಾಲೆಯಲ್ಲಿ ಅಭಿನಂದನೆ, ಬೀಳ್ಕೊಡುಗೆ ಕಾರ್ಯಕ್ರಮ

0

ಕಾಣಿಯೂರು: ದೋಳ್ಪಾಡಿ ಸರಕಾರಿ ಪ್ರೌಢ ಶಾಲೆಯ 2022-23ನೇ ಸಾಲಿನಲ್ಲಿ ಶೇ 100 ಫಲಿತಾಂಶ ಸಾಧಿಸಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ ನಿವೃತ್ತಿಗೊಂಡ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಜಯರಾಮ ಗೌಡ ಅವರಿಗೆ ಬೀಳ್ಕೋಡುಗೆ ಕಾರ್ಯಕ್ರಮವು ಜು.25ರಂದು ನಡೆಯಲಿದೆ.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಲಲಿತಾ ದರ್ಖಾಸು ಅಧ್ಯಕ್ಷತೆ ವಹಿಸಲಿದ್ದಾರೆ. ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ, ಗ್ರಾ.ಪಂ.ಸದಸ್ಯರಾದ ಲೋಕಯ್ಯ ಪರವ ದೋಳ್ಪಾಡಿ, ದೇವಿಪ್ರಸಾದ್ ದೋಳ್ಪಾಡಿ, ಅಂಬಾಕ್ಷಿ ಕೂರೇಲು, ತಾರಾನಾಥ ಇಡ್ಯಡ್ಕ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಪಿಡ್ಬ್ಬ್ಲ್ಯೂಡಿ ಗುತ್ತಿಗೆದಾರ ಮೋಹನ್‌ದಾಸ್ ರೈ ಬಲ್ಕಾಡಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದಿವಾಕರ, ಕಡಬ ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಾಂತಾರಾಮ ಓಡ್ಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಶಾಲಾ ಮುಖ್ಯಶಿಕ್ಷಕ ಶಶಿಧರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here