- ರೂ.1,16 ನಿವ್ವಳ ಲಾಭ
- ಶೇ.15 ಡಿವಿಡೆಂಡ್
- 43 ಪೈಸೆ ಬೋನಸ್
ಪುತ್ತೂರು:ಬಲ್ನಾಡು ಹಾಲು ಉತ್ಪಾದಕರ ಸಹಕಾರಿ ಸಂಘವು 2022-23ನೇ ಸಾಲಿನಲ್ಲಿ 1,16,594.75 ನಿವ್ವಳ ಲಾಭಗಳಿಸಿದೆ. ಗಳಿಸಿದ ಲಾಭಾಂಶದಲ್ಲಿ ಸದಸ್ಯರಿಗೆ ಶೇ.15 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ಗೆ 43 ಪೈಸೆ ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಚಂದಪ್ಪ ಪೂಜಾರಿ ಕಾಡ್ಲ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.
ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಜು.24ರಂದು ಸಂಘದ ಆವರಣದಲ್ಲಿ ನಡೆಯಿತು. ಸಂಘವು ವರದಿ ವರ್ಷದಲ್ಲಿ 92 ಮಂದಿ ಸದಸ್ಯರಿಂದ ರೂ.18,400 ಪಾಲು ಬಂಡವಾಳ ಹೊಂದಿದೆ. ವರದಿ ವರ್ಷದಲ್ಲಿ ಹಾಲು ಉತ್ಪಾದಕರಿಂದ 1,29,738.7ಲೀಟರ್ ಹಾಲು ಖರೀದಿಸಿದೆ. 1,30,108 ಲೀಟರ್ ಹಾಲನ್ನು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. 5,987.5ಲೀಟರ್ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. 696.2 ಲೀಟರ್ ಮಾದರಿ ಹಾಲನ್ನು ಮಾರಾಟ ಮಾಡಲಾಗಿದೆ. ಹಾಲು ವ್ಯಾಪಾರದಿಂದ ರೂ.4,49,123.50 ಆದಾಯ ಗಳಿಸಿದೆ. 600 ಚೀಲ ಪಶು ಆಹಾರ ಹಾಗೂ 325 ಕೆ.ಜಿ ಲವಣ ಮಿಶ್ರಣ ಮಾರಾಟ ಮಾಡಲಾಗಿದ್ದು ಒಟ್ಟು ರೂ.19,000 ಆದಾಯ ಗಳಿಸಿದೆ. ವಾರ್ಷಿಕ ಖರ್ಚು ವೆಚ್ಚಗಳನ್ನು ಕಳೆದು ಸಂಘವು ಒಟ್ಟು ರೂ.1,16,594.75 ನಿವ್ವಳ ಲಾಭಗಳಿಸಿದೆ. ಲಾಭಾಂಶವನ್ನು ಇಲಾಖೆಯ ನಿಯಮದಂತೆ ವಿಂಗಡನೆ ಮಾಡಲಾಗಿದೆ ಎಂದರು.
ಹಾಲಿನ ದರ ಏರಿಕೆಗೆ ಆಗ್ರಹ
ಹೈನುಗಾರರಿಗೆ ಈಗ ಸಿಗುವ ದರ ತೀರಾ ಕಡಿಮೆ. ಹಾಲಿನ ಉತ್ಪಾದನಾ ವೆಚ್ಚವು ಹಾಲಿನ ದರಕ್ಕಿಂತ ಅಧಿಕವಾಗಿದೆ. ಇದರಿಂದಾಗಿ ಹೈನಗಾರರ ಪ್ರಮಾಣ ಕಡಿಮೆಯಾಗುತ್ತಿದೆ. ಹೀಗಾಗಿ ನಿಟ್ಟಿನಲ್ಲಿ ಹಾಲಿನ ದರವನ್ನು ಪ್ರತಿ ಲೀಟರ್ಗೆ ಕನಿಷ್ಟ ದರ ರೂ.40 ನೀಡುವಂತೆ ಸದಸ್ಯರು ಆಗ್ರಹಿಸಿದರು.
ದ.ಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಡಿ.ಆರ್ ಸತೀಶ್ ರಾವ್ ಮಾತನಾಡಿ, ಹಸುಗಳ ಸಾಕಾಣಿಕೆ, ರಕ್ಷಣೆಯ ಹಾಗೂ ಸರಕಾರದಿಂದ ದೊರೆಯುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು. ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಪಿ. ಮಾತನಾಡಿ, ಹೈನುಗಾರರಿಗೆ ಒಕ್ಕೂಟದಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷ ಎನ್. ಅಂಬ್ರೋಸ್ ಡಿ’ಸೋಜಾ, ನಿರ್ದೇಶಕರಾದ ಸತ್ಯಪ್ರಸಾದ್ ರೈ ಕೆ., ವಿಜಯ ಕುಮಾರ್ ರೈ ಜಿ., ಲಕ್ಷಿö್ಮÃ ರೈ ಜಿ., ವಿಶ್ವೇಶ್ವರ ಭಟ್ ಕೆ., ಶಿವರಾಮ ಭಟ್ ಕೆ., ಹೈದರಾಲಿ ಎಚ್., ಸುಂದರ ಎಂ., ಆನಂದ ಪೂಜಾರಿ ಜಿ. ಹಾಗೂ ವಾರಿಜ ರೈ ಎ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ:
ಸಂಘದ ಸದಸ್ಯರ ಮಕ್ಕಳಿಗೆ ನೀಡುವ ಪ್ರತಿಭಾ ಪುರಸ್ಕಾರವನ್ನು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ದೀಪ್ತಿಲಕ್ಷಿö್ಮÃ ಕೆ., ಪ್ರಣಾಮ್ ಜೆ.ಕೆ, ಎಸ್ಎಸ್ಎಲ್ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಎಂ. ಸ್ಕಂದ ಕುಮಾರ್, ಸಾನಿಕ ಜಿ.ರೈ ಹಾಗೂ ಅಥಾಮಿಕರವರಿಗೆ ನೀಡಿ ಗೌರವಿಸಲಾಯಿತು.
ಅಧ್ಯಕ್ಷ ಕೆ. ಚಂದಪ್ಪ ಪೂಜಾರಿ ಕಾಡ್ಲ ಸ್ವಾಗತಿಸಿದರು. ಕಾರ್ಯದರ್ಶಿ ಜನಾರ್ದನ ಕೆ. ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ಅಂಬ್ರೋಸ್ ಡಿ’ಸೋಜಾ ಎ. ವಂದಿಸಿದರು. ಹಾಲು ಪರೀಕ್ಷಕ ಮನೋಜ್ ಕುಮಾರ್ ಕೆ. ಸಹಕರಿಸಿದರು.