ಯುವ ಬಂಟರ ಸಂಘದ ಬಂಟೆರೆ ಪರ್ಬ ಸಮಾರೋಪ

0

ಅತ್ಯುತ್ತಮ ಕಾರ್‍ಯಕ್ರಮ-ಸದಾಶಿವ ಶೆಟ್ಟಿ
ಪುತ್ತೂರಿಗೆ ಹೆಸರು ತಂದ ಕಾರ್‍ಯಕ್ರಮ-ಹೇಮನಾಥ ಶೆಟ್ಟಿ

ಪುತ್ತೂರು: ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಯುವ ಬಂಟರ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡ ತುಳುನಾಡ ಬಂಟೆರೆ ಪರ್ಬ-2023 ಕಾರ್‍ಯಕ್ರಮದ ಸಮಾರೋಪ ಜು. 23 ರಂದು ಸಂಜೆ ಜರಗಿತು.


ಅತ್ಯುತ್ತಮ ಕಾರ್‍ಯಕ್ರಮ- ಕನ್ಯಾನ ಸದಾಶಿವ ಶೆಟ್ಟಿ:
ಸ್ವರ್ಧೆ ವಿಜೇತರಿಗೆ ಬಹುಮಾನ ವಿತರಿಸಿದ ಹೇರಂಭಾ ಗ್ರೂಪ್ಸ್ ಅಫ್ ಇಂಡಸ್ಟ್ರೀಸ್, ಮುಂಬೈ ಇದರ ಮಾಲಕ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ, ಪುತ್ತೂರು ಯುವ ಬಂಟರ ಸಂಘದ ಆಯೋಜನೆಯಲ್ಲಿ ಅತ್ಯುತ್ತಮವಾದ ಕಾರ್‍ಯಕ್ರಮ ಬಂಟೆರೆ ಪರ್ಬ ಮೂಡಿಬಂದಿದೆ, ಇದರಲ್ಲಿ ಎಲ್ಲಾ ಸಾಂಸ್ಕೃತಿಕ ಕಾರ್‍ಯಕ್ರಮ ಯಶಸ್ವಿಯಾಗಿ ನಡೆದಿದೆ. ಸಂಘದ ಅಧ್ಯಕ್ಷ ಶಶಿರಾಜ್ ರೈ ಮತ್ತು ತಂಡದ ಪ್ರಯತ್ನ ಮೆಚ್ಚುವ ಕಾರ್‍ಯವಾಗಿದೆ. ಬಂಟ ಸಮಾಜದಲ್ಲಿ ಇನ್ನೂ ಬಡತನದಲ್ಲಿ ಇರುವ ಅನೇಕ ಕುಟುಂಬಗಳು ಇದ್ದು, ಅದನ್ನು ಗುರುತಿಸಿ, ಅವರ ಬದುಕಿಗೆ ಒಳ್ಳೆಯ ದಾರಿಯನ್ನು ತೋರಿಸುವ ಕೆಲಸ ಆಗಬೇಕು. ಬಂಟರಲ್ಲಿ ಇರುವ ಪ್ರತಿಭೆಗೆ ಪ್ರೋತ್ಸಾಹವನ್ನು ನಾನು ಸದಾ ನೀಡುತ್ತೇನೆ ಎಂದು ಹೇಳಿ, ಪುತ್ತೂರು ಬಂಟರ ಸಂಘದ ಉದ್ದೇಶಿತ ಜಾಗ ಖರೀದಿಗೆ ನನ್ನ ಸಹಕಾರ ಇದೆ ಎಂದು ಹೇಳಿದರು.


ಪುತ್ತೂರಿಗೆ ಹೆಸರು ತಂದ ಕಾರ್‍ಯಕ್ರಮ- ಕಾವು ಹೇಮನಾಥ ಶೆಟ್ಟಿ:
ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು ಮಾತನಾಡಿ ಯುವ ಬಂಟರು ದೊಡ್ಡ ಮಟ್ಟದ ಕಾರ್‍ಯಕ್ರಮ ಮಾಡಿ, ಯಶಸ್ಸು ಕಂಡಿದ್ದಾರೆ, ಇಂದಿನ ಯುವ ಬಂಟರು ಒಂದಾಗಿ ಬಂಟೆರೆ ಪರ್ಬ ಆಯೋಜಿಸಿ, ಪುತ್ತೂರಿಗೆ ಹೆಸರು ತಂದಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.


ಉತ್ತಮ ಕಾರ್‍ಯಕ್ರಮ- ಶಶಿಕುಮಾರ್ ರೈ ಬಾಲ್ಯೊಟ್ಟು:
ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ಯುವ ಬಂಟರ ಸಂಘದವರು ಉತ್ತಮ ಕಾರ್‍ಯಕ್ರಮ ಸಂಘಟಿಸಿದ್ದಾರೆ. ಇದು ತುಂಬಾ ಮೆಚ್ಚುಗೆ ತಂದಿದೆ. ಇಂಥ ಕಾರ್‍ಯಕ್ರಮ ನಿರಂತರಾಗಿ ಸಮಾಜದಲ್ಲಿ ನಡೆಯಬೇಕು ಎಂದು ಹೇಳಿದರು.


ಸಮಾಜ ಗುರುತಿಸಿದ ಕಾರ್‍ಯಕ್ರಮ- ಮುಂಡಾಳಗುತ್ತು ಶಶಿರಾಜ್ ರೈ :
ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಮುಂಡಾಳಗುತ್ತು ಶಶಿರಾಜ್ ರೈರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಯುವ ಬಂಟರ ಸಂಘ ಸಮಾಜದಲ್ಲಿ ಗುರುತಿಸುವಂಥ ಕಾರ್‍ಯಕ್ರಮ ಮಾಡಿ ಯಶಸ್ಸು ಕಂಡಿದೆ. ಇದು ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಕಾರ್‍ಯಕ್ರಮದ ಸಂಚಾಲಕರುಗಳಿಗೆ ದೊರೆತ ಯಶಸ್ಸು ಎಂದು ಹೇಳಿದರು.

ಮಾತೃ ಸಂಘದ ನಿರ್ದೇಶಕ ಕುಂಬ್ರ ದುರ್ಗಾಪ್ರಸಾದ್ ರೈ, ತಾಲೂಕು ಯುವ ಬಂಟರ ಸಂಘದ ನಿಕಟಪೂರ್ವಾಧ್ಯಕ್ಷ ಪ್ರಕಾಶ್ ರೈ ಸಾರಕರೆ, ಮಾಜಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಕಂಬಳತಡ್ಕ, ಅಬುಧಾಬಿಯ ಉದ್ಯಮಿ ಜಯರಾಮ ರೈ ಮಿತ್ರಂಪಾಡಿ, ಬಂಟರ ಸಂಘದ ಮಾಜಿ ಅಧ್ಯಕ್ಷ ಜಗನ್ನಾಥ ರೈ ನುಳಿಯಾಲು, ಬಂಟರ ಸಂಘದ ಕಾರ್‍ಯದರ್ಶಿ ರಮೇಶ್ ರೈ ಡಿಂಬ್ರಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ, ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರ್‍ಯ ಮನವಳಿಕೆಗುತ್ತು, ಸಹಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ಸೀತಾರಾಮ ರೈ ಕೈಕಾರ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ದಯಾನಂದ ರೈ ಕೋರ್ಮಂಡ, ಬಂಟ್ವಾಳ ಬಂಟರ ಭವನದ ಅಧ್ಯಕ್ಷ ಚಂದ್ರಹಾಸ್ ರೈ, ಯುವ ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ರಂಜಿನಿ ಶೆಟ್ಟಿ, ಉಪಾಧ್ಯಕ್ಷ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಕೋಶಾಧಿಕಾರಿ ಅಶೋಕ್ ಶೆಟ್ಟಿ ಕೆ.ಸಿ, ಕಾರ್‍ಯಕ್ರಮದ ಸಂಚಾಲಕ ಹರ್ಷಕುಮಾರ್ ರೈ ಮಾಡಾವು ಉಪಸ್ಥಿತರಿದ್ದರು.


ವಿಶಿಷ್ಟ ಕಾರ್‍ಯಕ್ರಮ- ಭಾಗ್ಯೇಶ್ ರೈ:
ತುಳುನಾಡ ಬಂಟೆರೆ ಪರ್ಬ ಕಾರ್‍ಯಕ್ರಮದ ಸಂಚಾಲಕ ಭಾಗ್ಯೇಶ್ ರೈ ಕೆಯ್ಯೂರು ಪ್ರಾಸ್ತಾವಿಕವಾಗಿ ಮಾತನಾಡಿ ಯುವ ಪೀಳಿಗೆಯನ್ನು ಸಮಾಜದ ಸಂಘಟನೆಯ ಕಡೆಗೆ ಬರುವಂತೆ ಮಾಡುವ ಉದ್ದೇಶದಿಂದ ಇಂಥ ವಿಶಿಷ್ಟ ಕಾರ್‍ಯಕ್ರಮವನ್ನು ಆಯೋಜನೆ ಮಾಡಲಾಯಿತು ಎಂದರು.
ಯುವ ಬಂಟರ ಸಂಘದ ಸಂಯೋಜಕ ರವಿಪ್ರಸಾದ್ ಶೆಟ್ಟಿ ಬನ್ನೂರು ಸ್ವಾಗತಿಸಿ, ಕ್ರೀಡಾ ಸಂಚಾಲಕ ನವೀನ್ ರೈ ಪಂಜಳ ಹಾಗೂ ಧಾರ್ಮಿಕ ಸಂಚಾಲಕ ಮನ್ಮಥ ಶೆಟ್ಟಿ ಕೊಡಿಪ್ಪಾಡಿ ಕಾರ್‍ಯಕ್ರಮ ನಿರೂಪಿಸಿದರು.


ಸನ್ಮಾನ ಸಮಾರಂಭ:
ಬಂಟ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವೈಷ್ಣವಿ ಹೆಗ್ಡೆ, ರಾಣಿ ರೈ, ಸೃಜನ್ ರೈ, ಸುಧೀನ್ ರೈ ನೆಲ್ಯೊಟ್ಟು, ಸನತ್‌ಕುಮಾರ್ ರೈಯವರನ್ನು ಸನ್ಮಾನಿಸಲಾಯಿತು. ಕನ್ಯಾನ ಸದಾಶಿವ ಶೆಟ್ಟಿ, ಕಾವು ಹೇಮನಾಥ ಶೆಟ್ಟಿಯವರನ್ನು ಯುವ ಬಂಟರ ಸಂಘದಿಂದ ಸನ್ಮಾನಿಸಿ, ಗೌರವಿಸಲಾಯಿತು.


ಇಂಟರ್ ನ್ಯಾಷನಲ್ ಸಿವಿಲ್ ಸರ್ವೆಂಟ್ ನಿತ್ಯಾನಂದ ಶೆಟ್ಟಿ ನೆಲ್ಲಿಕಟ್ಟೆ, ಮಂಗಳೂರು ಮಹಾನಗರ ಪಾಲಿಕೆ ಜಂಟಿ ಆಯುಕ್ತೆ ವಾಣಿ ಆಳ್ವ, ಜಿ.ಪಂ. ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಮಾತೃ ಸಂಘದ ನಿರ್ದೇಶಕಿ ವಾಣಿ ಶೆಟ್ಟಿ ನೆಲ್ಯಾಡಿ, ಅಭಿಮತ ಟಿ.ವಿ. ಮಾಲಕಿ ಮಮತ ಶೆಟ್ಟಿ, ಮುಂಬೈಯ ನಿವೃತ್ತ ಪೊಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿ, ಬಂಟರ ಸಂಘದ ನಿರ್ದೇಶಕ ಸಂತೋಷ್ ಶೆಟ್ಟಿ ಸಾಜ, ಯುವ ಬಂಟರ ಸಂಘದ ಮಾಜಿ ಅಧ್ಯಕ್ಷ ರವೀಂದ್ರ ರೈ ನೆಕ್ಕಿಲು, ಉದ್ಯಮಿ ಶಿವಪ್ರಸಾದ್ ಶೆಟ್ಟಿ ಕಿನಾರರವರುಗಳು ಉಪಸ್ಥಿತರಿದ್ದರು.


ಸಿನಿಮಾ ತಾರೆಯರು- ಸಂಗೀತ ಗಾಯಕರು ಸಾಥ್:
ಕಾರ್‍ಯಕ್ರಮದಲ್ಲಿ ಕಾಂತಾರ ಚಿತ್ರ ಖ್ಯಾತಿಯ ಸ್ವರಾಜ್ ಶೆಟ್ಟಿ, ದೀಪಕ್ ರೈ ಪಾಣಾಜೆ, ಸುಂದರ ರೈ ಮಂದಾರ, ಸರ್ಕಸ್ ಖ್ಯಾತಿಯ ರಚನಾ ರೈ ಪುತ್ತೂರು, ಪ್ರಸಾದ್ ಶೆಟ್ಟಿ, ಕಲಾವಿದ ನಿಶಾಂತ್ ರೈ ಮಠಂತಬೆಟ್ಟುರವರುಗಳು ಆಗಮಿಸಿ, ಪ್ರೇಕ್ಷಕರನ್ನು ರಂಜಿಸಿದರು


`ಪುಳಿಮುಂಚಿ’ ತುಳು ಸಿನಿಮಾದ ಪ್ರಚಾರ:
ತುಳು ಚಿತ್ರರಂಗದ ಹಾಸ್ಯಮಯ, ಕುತೂಹಲ ಭರಿತ ಪುಳಿಮುಂಚಿ ತುಳು ಸಿನಿಮಾದ ಪ್ರಚಾರ ನಡೆಯಿತು. ಚಿತ್ರದ ನಟ ಸ್ವರಾಜ್ ಶೇಟ್ಟಿ, ನಿರ್ದೇಶಕ ತ್ರಿಶೂಲ್ ಶೆಟ್ಟಿ, ಅದ್ವಿಕ್ ಶೆಟ್ಟಿ ಮಂಗಳೂರು, ಛಾಯಾಗ್ರಾಹಕ ಮಯೂರ್ ಆರ್ ಶೆಟ್ಟ, ಶಿವಪ್ರಸಾದ್ ರೈ, ಸಿನಿಮಾ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿರವರುಗಳು ಉಪಸ್ಥಿತರಿದ್ದರು.

ತೀರ್ಪುಗಾರರು:
ಚಲನ ಚಿತ್ರ ನಟ ಸುಂದರ ರೈ ಮಂದಾರ, ತೃಷಾ ಶೆಟ್ಟಿ ಹಾಗೂ ಪ್ರಮೋದ್ ಆಳ್ವರವರುಗಳು ತೀರ್ಪುಗಾರರಾಗಿ ಸಹಕರಿಸಿದರು. ವೇದಿಕೆಯ ಕಾರ್‍ಯಕ್ರಮ ನಿರೂಪಕರಾಗಿ ನಿತೇಶ್ ಎಕ್ಕಾರು, ರಂಜಿತಾ ಶೆಟ್ಟಿ ಕಾವು, ಸುದೇಶ್ ರೈ, ವಿಜೇತ್‌ರವರುಗಳು ಸಹಕರಿಸಿದರು.


ಬಹುಮಾನಗಳ ಪ್ರಾಯೋಜಕತ್ವ:
ಪ್ರಥಮ-35 ಸಾವಿರ ನಗದು ಹಾಗೂ ಟ್ರೋಫಿ( ನಗದು- ಅರಿಯಡ್ಕ ಜಯಂತಿ ಟಿ.ರೈ ಮತ್ತು ಮಕ್ಕಳು, ಟ್ರೋಫಿ- ಶಿವರಾಮ ಆಳ್ವ ಬಳ್ಳಮಜಲುಗುತ್ತು) ದ್ವಿತೀಯ- 25 ಸಾವಿರ ನಗದು ಹಾಗೂ ಟ್ರೋಫಿ( ನಗದು- ಸಾಥಿ ಬಾರ್ ಮತ್ತು ರೆಸ್ಟೋರೆಂಟ್ ಕಲ್ಲಗುಡ್ಡೆ ಹಾಗೂ ರತ್ನ ಶ್ರೀ ಗ್ರೂಪ್ಸ್ ಪುತ್ತೂರು, ಟ್ರೋಫಿ- ಶಿವರಾಮ ಆಳ್ವ ಬಳ್ಳಮಜಲುಗುತ್ತು) ತೃತೀಯ- 15 ಸಾವಿರ ನಗದು ಹಾಗೂ ಟ್ರೋಫಿ, (ನಗದು- ಅಜಿತ್ ಭಂಡಾರಿ, ಶ್ರೀಕರ ಕುತ್ಯಾಡಿ ಉದ್ಯಮಿ ಮುಂಬೈ, ಟ್ರೋಫಿ-ಶಿವರಾಮ ಆಳ್ವ ಬಳ್ಳಮಜಲುಗುತ್ತು) ಮಧ್ಯಾಹ್ನದ ಭೋಜನ ಪ್ರಾಯೋಜಕರು ಎನ್ ಮುತ್ತಪ್ಪ ರೈಯವರ ಸಹೋದರ ಉದ್ಯಮಿ ಎನ್. ಕರುಣಾಕರ ರೈ ದೇರ್ಲ, ಸಹೋದರರು, ಸಹೋದರಿ ಮತ್ತು ಮಕ್ಕಳು. ಸ್ಮರಣಿಕೆ ಪ್ರಾಯೋಜಕತ್ವ- ಯುವ ಉದ್ಯಮಿ ಕೆ.ಸಿ.ಅಶೋಕ್ ಶೆಟ್ಟಿ, ಅಶೋಕ್ ಹೋಂ ಪ್ರೊಡೆಕ್ಸ್, ಹೊಸಗದ್ದೆ( ಅರಿಯಡ್ಕ)ರವರುಗಳು ಸಹಕರಿಸಿದರು.

ನಾಡಿನ ಕಲೆ ಸಂಸ್ಕೃತಿ, ಅಚಾರ-ವಿಚಾರಗಳನ್ನು ಉಳಿಸುವ ನಿಟ್ಟಿನಲ್ಲಿ ಯುವ ಬಂಟರು ಬಂಟೆರೆ ಪರ್ಬ ಕಾರ್‍ಯಕ್ರಮದ ಮೂಲಕ ಹೆಜ್ಜೆಯನ್ನು ಇಟ್ಟಿದ್ದಾರೆ. ಒಳ್ಳೆಯ ಕಾರ್‍ಯಕ್ರಮ, ಬಂಟ ಸಮಾಜದ ಗುರು ಹಿರಿಯರ ಬಗ್ಗೆ ಅಭಿಮಾನ ಮೂಡಿಸುವ ಕಾರ್‍ಯಕ್ರಮವಾಗಿತ್ತು
ಮಿತ್ರಂಪಾಡಿ ಜಯರಾಮ ರೈ ಉದ್ಯಮಿಗಳು ಅಬುಧಾಬಿ
( ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)


ಕಾರ್‍ಯಕ್ರಮ ನಿರೀಕ್ಷೆಗೂ ಮೀರಿ ಅದ್ಬುತ ಯಶಸ್ಸು ಕಂಡಿದೆ. ಇದರಲ್ಲಿ ಭಾಗವಹಿಸಿದ ತಂಡಗಳಿಗೆ ಮತ್ತು ಯಶಸ್ಸಿಗೆ ದುಡಿದ ಎಲ್ಲರಿಗೂ ಅಭಿನಂದನೆಗಳು- ಮುಂಡಾಳಗುತ್ತು ಶಶಿರಾಜ್ ರೈ ಅಧ್ಯಕ್ಷರು ಯುವ ಬಂಟರ ಸಂಘ ಪುತ್ತೂರು


ಯುವ ಮನಸುಗಳಿಗೆ ಸಂತೋಷಕೊಡುವ ಕಾರ್‍ಯಕ್ರಮವಾಗಿತ್ತು, ಸಮಾಜ ಬಾಂಧವರು ಸಂತೋಷಪಟ್ಟಿದ್ದಾರೆ- ಭಾಗ್ಯೇಶ್ ರೈ ಕೆಯ್ಯೂರು, ಹರ್ಷಕುಮಾರ್ ರೈ ಮಾಡಾವು
ಕಾರ್‍ಯಕ್ರಮದ ಸಂಚಾಲಕರುಗಳು


ಯುವ ಬಂಟರ ಸಂಘದ ಮೂಲಕ ಮೂಡಿಬಂದ ಕಾರ್‍ಯಕ್ರಮ ವಿಭಿನ್ನ ಆಗಿತ್ತು. ಜನಾಕರ್ಷಣೆ ಇತ್ತು. ಇದರಿಂದ ಯುವ ಬಂಟರ ಸಂಘ ಮತ್ತಷ್ಟು ಬೆಳೆಯಲು ಸಹಕಾರಿ ಆಗಲಿದೆ-
ಸಾಜ ರಾಧಾಕೃಷ್ಣ ಆಳ್ವ ಸ್ಥಾಪಕಾಧ್ಯಕ್ಷರು. ಯುವ ಬಂಟರ ಸಂಘ


ಬಂಟೆರೆ ಪರ್ಬ ನೋಡಿ ಖುಷಿ ಆಯತು. ನಮ್ಮ ಮಹಿಳಾ ಬಂಟರ ಸಂಘದಿಂದ ಮಹಿಳಾ ಬಂಟ ಪ್ರತಿಭೆಗಳ ಸ್ವರ್ಧಾ ಕಾರ್‍ಯಕ್ರಮ ಆಯೋಜನೆ ಮಾಡುವ ಯೋಜನೆ ಇದೆ
-ಅನಿತಾ ಹೇಮನಾಥ ಶೆಟ್ಟಿ ಕಾವು. ಜಿ.ಪಂ. ಮಾಜಿ ಸದಸ್ಯರು

ಬಂಟರೆ ಪರ್ಬ ಸಾಂಸ್ಕೃತಿ ಸ್ವರ್ಧೆಯ ವಿಜೇತ ಬಂಟರ ತಂಡಗಳು. ಪ್ರಥಮ- ಕಾರ್ಕಳ, ದ್ವಿತೀಯ- ಬಂಟ್ವಾಳ, ತೃತೀಯ- ಸುಳ್ಯ, ಚತುರ್ಥ-ಮಾಣಿ ಹಾಗೂ ಪಂಚಮ- ಕಡಬ ತಂಡ ಪಡೆದು ಕೊಂಡಿದೆ.

LEAVE A REPLY

Please enter your comment!
Please enter your name here