ಪುತ್ತೂರು: ಮುಖ್ಯರಸ್ತೆಯ ಮಹಮ್ಮಾಯ ದೇವಸ್ಥಾನದ ಬಳಿಯ ಚೇತನಾ ಆಸ್ಪತ್ರೆಯಲ್ಲಿ ಲಿಪಿಡ್ ಪ್ರೊಫೈಲ್, HBA1C(3 ತಿಂಗಳ ಸರಾಸರಿ ಶುಗರ್) ಪರೀಕ್ಷೆಯ ಉಚಿತ ತಪಾಸಣಾ ಶಿಬಿರವು ಜು.25 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.
ತಪಾಸಣೆಗೆ ಆಗಮಿಸಿದ ಫಲಾನುಭವಿಗಳಿಗೆ ಆಸ್ಪತ್ರೆ ವೈದ್ಯರಾದ ಡಾ.ಜೆ.ಸಿ ಅಡಿಗರವರು ಸೂಕ್ತ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಲ್ಯಾಬೋರೇಟರಿ ಮುಖ್ಯಸ್ಥ ಹಾಗೂ ಮ್ಯಾನೇಜರ್ ನೋಯಲ್ ಡಿ’ಸೋಜ, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿರವರು ಉಪಸ್ಥಿತರಿದ್ದರು. ಮೈಕ್ರೋಲ್ಯಾಬ್ ಲಿಮಿಟೆಡ್ ಸಿಬ್ಬಂದಿ ಹಾಗೂ ಚೇತನಾ ಆಸ್ಪತ್ರೆ ಸಿಬ್ಬಂದಿ ಸಹಕರಿಸಿದರು.