ಸಾವಯವ ಕೃಷಿ ಪದ್ಧತಿಯನ್ನು ಮರೆಯದಿರಲು ವಿದ್ಯಾರ್ಥಿಗಳಿಗೆ ಕರೆ
ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಹನುಮಗಿರಿ, ಈಶ್ವರಮಂಗಲದಲ್ಲಿ ಮಾತೃಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಯೋಜನೆ ‘ವಿವೇಕ ಸಂಜೀವಿನಿ’ ಕಾರ್ಯಕ್ರಮದ ಅಡಿಯಲ್ಲಿ ‘ತಾರಸಿ ತೋಟ’ ಮತ್ತು ‘ಕೈತೋಟ’ ರಚನಾ ಮಾಹಿತಿ ಕಾರ್ಯಗಾರ ಜು.20 ರಂದು ನಡೆಯಿತು.
ಮುಖ್ಯ ಅತಿಥಿಗಳಾಗಿ ಮಂಗಳೂರಿನ ಪ್ರಸಿದ್ಧ ತಾರಸಿ ಕೃಷಿಕ ಹಾಗೂ ಶಿಕ್ಷಣ ಇಲಾಖೆಯ ನಿವೃತ್ತ ಉದ್ಯೋಗಿ ಕೃಷ್ಣಪ್ಪ ಗೌಡ ಪಡ್ಡಂಬೈಲುರವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ತಾರಸಿ ತೋಟದ ಉದ್ದೇಶಗಳನ್ನು ತಿಳಿಸಿದರು. ತಮ್ಮ ಮನೆಯ ತಾರಸಿಯಲ್ಲಿ ಬೆಳೆದ ಕೈತೋಟದ ವಿಡಿಯೋ ಚಿತ್ರಣವನ್ನು ವಿದ್ಯಾರ್ಥಿಗಳ ಮುಂದೆ ಪ್ರಸ್ತುತಿ ಪಡೆಸಿ ಮಾತನಾಡಿ, “ನಾವು ಸ್ವತಃ ಬೆಳೆಸಿದ ತರಕಾರಿಗಳನ್ನು ಉಪಯೋಗಿಸುವುದರಿಂದ ನಮ್ಮ ಆರೋಗ್ಯ ಶೈಲಿಯಲ್ಲಿ ಬದಲಾವಣೆ ಸಾಧ್ಯ, ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಸಾವಯವ ಕೃಷಿ ಪದ್ಧತಿಯನ್ನು ಮರೆಯದೆ, ಈಗಿನ ಆಧುನಿಕ ಯುಗದ ರಾಸಾಯನಿಕ ಗೊಬ್ಬರಗಳನ್ನು ಬಳಸದೆ, ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳುವುದು ಬಹಳ
ಮುಖ್ಯ” ಎಂದು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವೇದಿಕೆಯಲ್ಲಿ ಸುಳ್ಯ ಸುದ್ದಿ ಬಿಡುಗಡೆ ಪತ್ರಿಕೆಯ ಕಛೇರಿ ವ್ಯವಸ್ಥಾಪಕ ಯಶ್ಚಿತ್ ಕಾಳಂಮನೆ, ಸಂಸ್ಥೆಯ ಸಂಚಾಲಕ ಶಿವರಾಮ ಪಿ, ಪ್ರಾಂಶುಪಾಲ ಕೆ ಶಾಮಣ್ಣ, ಮುಖ್ಯಗುರು ಅಮರನಾಥ ಬಿ ಪಿ, ಮಂಗಳೂರಿನ ಜಲ್ಲಿಗುಡ್ಡೆ ಸ್ವಸ್ತಿಕ್ ಕಲಾ ಕೇಂದ್ರದ ಕೋಶಾಧಿಕಾರಿ ಆಶೋಕ್ ರಾವ್ ಜಾದವ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೃಷ್ಣಪ್ಪ ಗೌಡರನ್ನು ಸಂಸ್ಥೆಯ ವತಿಯಿಂದ ಗೌರವಿಸಿಲಾಯಿತು.ವಿದ್ಯಾರ್ಥಿನಿಯರಾದ ತನಿಷ ಹೆಗ್ಡೆ, ಶಾವ್ಯ, ವೀಕ್ಷಾ ಪ್ರಾರ್ಥಿಸಿ, ಕು ಅನುಷ್ಕಾ ಸ್ವಾಗತಿಸಿ, ಶರಣ್ ಪಿ ವಂದಿಸಿದರು. ಕು.ಪ್ರೀತಿಕಾ ಕಾರ್ಯಕ್ರಮ ನಿರೂಪಿಸಿದರು.