ಅಗಲಿದ ಹಿರಿಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ; ಶಾಸಕ ಅಶೋಕ್ ರೈ
ಪುತ್ತೂರು: ಕೋಡಿಂಬಾಡಿ ಗ್ರಾಮದಲ್ಲಿ ನಿಧನರಾದ ಗ್ರಾಮದ ಪ್ರಮುಖ ವ್ಯಕ್ತಿಗಳಾಗಿದ್ದ ಸೀತಮ್ಮ ಎಂಐತಾಳ ನಡುಮನೆ ಮಠಂತಬೆಟ್ಟು,ಅನಂತ ನಾಯಕ್ ಮೈರಾ ಪೆರ್ನೆ,ಪ್ರಕಾಶ್ ಕುಮಾರ್ ಜೈನ್ ಮಿತ್ತಳಿಕೆ,ಚೆನ್ನಪ್ಪ ಮರ್ದನಳಿಕೆಯವರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ ಕೋಡಿಂಬಾಡಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಸಭಾಂಗಣದಲ್ಲಿ ಜು.24 ರಂದು ನಡೆಯಿತು.
ಮೃತರಿಗೆ ನುಡಿನಮನ ಸಲ್ಲಿಸಿದ ಪುತ್ತೂರು ಶಾಸಕ ಅಶೋಕ್ ರೈ ಮಾತನಾಡಿ ಮಹಿಷಮರ್ಧಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಯದಲ್ಲಿ ದೇವರ ಸೇವೆ ಮಾಡಿದ ಮಹಾತ್ಮರುಗಳಾಗಿದ್ದವರು ಮಾತ್ರವಲ್ಲದೆ ದೇವರ ಸೇವೆಯಲ್ಲಿ ತಮ್ಮ ಕುಟುಂಬವನ್ನೇ ತೊಡಗಿಸಿಕೊಂಡಿದ್ದವರಾಗಿದ್ದರು ಹಿರಿಯರ ಸೇವೆಯನ್ನು ನೆನಪಿಸಿಕೊಳ್ಳಬೇಕಾದ್ದು ನಮ್ಮ ಕರ್ತವ್ಯವಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಹಿರಿಯರ ಮಾರ್ಗದರ್ಶನದಲ್ಲೇ ಇಲ್ಲಿನ ಬಹುತೇಕ ಅಭಿವೃದ್ದಿ ಕಾರ್ಯಗಳು ನಡೆದಿದ್ದು ಅದು ಜನ ಮಾನಸದಲ್ಲಿ ಈಗಲೂ ಜೀವಂತವಾಗಿರುವುದಕ್ಕೆ ಅವರ ಶ್ರದ್ದೆ ಮತ್ತು ಪ್ರಾಮಾಣಿಕತೆ ಕಾರಣವಾಗಿದೆ. ನಮ್ಮನ್ನಗಲಿದವರು ನಮ್ಮ ಕಣ್ಣಿನಿಂದ ದೂರವಾಗಿರಬಹುದು ಆದರೆ ಅವರನ್ನು ನಾವು ಸದಾ ಸ್ಮರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುವ ಕೆಲಸವನ್ನು ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಮಾಜಿ ಜಿಪಂ ಅಧ್ಯಕ್ಷ ಬಾಲಕೃಷ್ಣ ಬೋರ್ಕರ್ ಮಾತನಾಡಿ ನಮ್ಮ ಗ್ರಾಮದಲ್ಲಿ ಅಗಲಿದ ನಾಲ್ಕುಮಂದಿ ಹಿರಿಯರ ಸಮಾಜ ಸೇವೆ ಅಪಾರವಾಗಿದ್ದು ಕೋಡಿಂಬಾಡಿ ಏನೂ ಅಲ್ಲದ ಕಾಲದಲ್ಲಿ ಈ ಗ್ರಾಮಕ್ಕೆ ಬೇಕಾದ ಸೌಲಭ್ಯವನ್ನು ಕಲ್ಪಿಸುವಲ್ಲಿ ಅವಿರತ ಶ್ರಮ ವಹಿಸಿದವರಾಗಿದ್ದರು. ಕೋಡಿಂಬಾಡಿ ಮಹಿಷಮರ್ಧಿನಿ ದೇವಸ್ಥಾನ ,ಕೋಡಿಂಬಾಡಿ ಸರಕಾರಿ ಶಾಲೆ ಸೇರಿದಂತೆ ಅಂದಿನ ಕಾಲದ ಜನರ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸಿದವರು ಎಂದು ಹೇಳಿದರು. ಅವರ ಅಗಲುವಿಕೆ ಗ್ರಾಮಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಮುರಳೀದರ್ ರೈ ಮಠಂತಬೆಟ್ಟು ಮಾತನಾಡಿ ನಾಲ್ವರು ಹಿರಿಯರು ಸಮಾಜಕ್ಕೆ ಆದರ್ಶ ಪ್ರಾಯರಾಗಿದ್ದವರು.ಹಸಿದವರ ಹೊಟ್ಟೆ ತುಂಬಿಸಿದ ಮಹಾತ್ಮರುಗಳಾಗಿದ್ದ ಇವರುಗಳು ಕೋಡಿಂಬಾಡಿ ಗ್ರಾಮದ ಪಾಲಿಗೆ ಪೋಷಕರಾಗಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೋಡಿಂಬಾಡಿ ಗ್ರಾಪಂ ಸದಸ್ಯರಾದ ಜಗನ್ನಾಥ ಶೆಟ್ಟಿ ನಡುಮನೆ,ಜಯಪ್ರಕಾಶ್ ಬದಿನಾರ್ , ಪೂರ್ಣಿಮಾ ಯತೀಶ್ಶೆಟ್ಟಿ ಬರಮೇಲು, ಗ್ರಾಪಂ ಮಾಜಿ ಉಪಾಧ್ಯಕ್ಷ ಬಾಬು ಗೌಡ ಭಂಡಾರದ ಮನೆ, ದೇವಳದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ನಿರಂಜನ್ ರೈ ಮಠಂತಬೆಟ್ಟು,ಪೆರ್ನೆ ಗ್ರಾಪಂ ಸದಸ್ಯರಾದ ನವೀನ್ ಕುಮಾರ್ ಪದಬರಿ, ಪ್ರಮುಖರಾದ ಮುರಳೀದರ್ ರೈ ಮಠಂತಬೆಟ್ಟು, ಸುಧಾಕರ ನಾಯಕ್ ಮೈರಾ, ರಾಜೀವ ಶೆಟ್ಟಿ ಕೇದಗೆ, ಸದಾಶಿವ ಸಾಮಾನಿ ಸಂಪಿಗೆ ಬಳಿ, ಕುಮಾರನಾಥ ಪಲ್ಲತ್ತಾರು, ರವೀಂದ್ರ ಐತಾಳ್ ಸಾಮೆತ್ತಡ್ಕ, ಶಿವಪ್ರಸಾದ್ ರೈ ಮಠಂತಬೆಟ್ಟು, ಬಾಲಕೃಷ್ಣ ಶೆಟ್ಟಿ ಮಠಂತಬೆಟ್ಟು, ಸದಾಶಿವ ರೈ ಮಠಂತಬೆಟ್ಟು, ವಸಂತಪೂಜಾರಿ ಕುಂಡಾಪು, ಯೋಗೀಶ್ ಸಾಮಾನಿ ಸಂಪಿಗೆ ಬಳಿ,ಕೋಡಿಂಬಾಡಿ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಕೇಶವ ಭಂಡಾರಿ ಕೈಪ, ಪ್ರೇಮಾನಂದ ಕಾಮತ್, ರಾಧಿಕಾ ಸಾಮಂತ್, ಅನುರಾಧಾ ನಾಯಕ್,ಶೇಖರ ಪೂಜಾರಿ ಜೇಡರ ಪಾಲು, ಚಂದ್ರ ಶೇಕರ ರೈ ಕೆದಿಕಂಡೆ ಗುತ್ತು, ಯತೀಶ್ ಶೆಟ್ಟಿ ಬರಮೇಲು, ರಘುರಾಮ ಸಾಮಾನಿ, ಕೇಶವ ಗೌಡ ಬರಮೇಲು, ದೇವಳದ ವ್ಯವಸ್ಥಾಪಕ ಸಂತೋಷ್ ರೈ ಕೆದಿಕಂಡೆ ಗುತ್ತು, ಚಂದ್ರಶೇಖರ ಸಾಮಾನಿ ಮೊದಲಾದವರು ಉಪಸ್ಥಿತರಿದ್ದರು.