ಪುತ್ತೂರು: ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಹೊಸ ಕಟ್ಟಡ ಸೋರಿಕೆಯಾಗುತ್ತಿದ್ದು ಈ ಬಗ್ಗೆ ಕಟ್ಟಡದ ಕಾಮಗಾರಿ ಗುತ್ತಿಗೆದಾರ ಕೆಆರ್ಡಿಎಲ್ ಸಂಸ್ಥೆಯವರನ್ನು ಶಾಸಕರು ತರಾಟೆಗೆ ಎತ್ತಿಕೊಂಡು ತನ್ನ ಕಚೇರಿಗೆ ಬರುವಂತೆ ಜು.22ರಂದು ತಿಳಿಸಿದ್ದರು. ಜು.24ರಂದು ಕಚೇರಿಗೆ ಬಂದ ಸಂಸ್ಥೆಯವರನ್ನು ಶಾಸಕರು ಮತ್ತೆ ತರಾಟೆಗೆ ಎತ್ತಿಕೊಂಡಿದ್ದು, ಕಾಮಗಾರಿ ಕಳಪೆಯಾಗದಂತೆ ಮತ್ತು ಎಲ್ಲಾ ಕೆಲಸಗಳನ್ನು 15 ದಿನದೊಳಗೆ ಪೂರ್ಣಮಾಡಬೇಕು ಎಂದು ಸೂಚನೆ ನೀಡಿದ್ದು ಶಾಸಕರ ಸೂಚನೆಯನ್ನು ಸಂಸ್ಥೆ ಒಪ್ಪಿಕೊಂಡಿದೆ.
2016ರಲ್ಲಿ ಕಾಲೇಜು ಕಟ್ಟಡ ಕಾಮಗಾರಿ ಪ್ರಾರಂಭವಾಗಿತ್ತು. ಆಮೆಗತಿಯಲ್ಲಿ ಸಾಗಿದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಜು.22ರಂದು ಕಾಲೇಜಿಗೆ ಭೇಟಿ ನೀಡಿದ ಶಾಸಕರು ಕಾಲೇಜಿನ ವೆರಾಂಡದಲ್ಲಿ ನೀರು ಹರಿಯುತ್ತಿರುವುದನ್ನು ಕಂಡು ಆಕ್ರೋಶಗೊಂಡಿದ್ದರು. ತಕ್ಷಣವೇ ಕಾಮಗಾರಿ ಗುತ್ತಿಗೆ ಸಂಸ್ಥೆ ಕೆಆರ್ಡಿಎಲ್ ಸಂಸ್ಥೆಯವರಿಗೆ ಕರೆ ಮಾಡಿ ಹೊಸ ಕಟ್ಟಡ ಸೋರಿಕೆಯಾಗುತ್ತಿದೆ, ಇದರಲ್ಲಿ ಎಷ್ಟು ಕಮಿಷನ್ ಹೊಡೆದಿದ್ದೀರಿ 40% ಅಥವಾ 60% ಹೊಡೆದಿದ್ದೀರಾ? ಕಾಲೇಜಿನ ಒಳಗಡೆ ನೀರು ತುಂಬಿದೆ. ಮೆಟ್ಟಿಲುಗಳಿಗೆ ರಕ್ಷಾ ರಾಡ್ ಅಳವಡಿಸಿಲ್ಲ ಏನಾದರೂ ಹೆಚ್ಚು ಕಮ್ಮಿಯಾದರೆ ಯಾರು ಹೊಣೆ ಎಂದು ತರಾಟೆಗೆ ಎತ್ತಿಕೊಂಡಿದ್ದರು.
ಕೋಟ್ 15 ದಿನದೊಳಗೆ ಕಾಮಗಾರಿ ಮುಗಿಸುವುದಾಗಿ ಹೇಳಿದ್ದಾರೆ. ಗುತ್ತಿಗೆದಾರಗೆ ಖಡಕ್ ಸೂಚನೆಯನ್ನು ನೀಡಿದ್ದೇನೆ, ಏನೆಲ್ಲಾ ಕಾಮಗಾರಿ ಅರ್ಧಂಬರ್ಧ ಬಾಕಿ ಇದೆಯೋ ಅದೆಲ್ಲವನ್ನೂ ಮುಗಿಸುವಂತೆ ಸೂಚನೆಯನ್ನು ನೀಡಿದ್ದೇನೆ.
ಅಶೋಕ್ ರೈ
ಶಾಸಕರು ಪುತ್ತೂರು