ಪುತ್ತೂರು: ಶ್ರೀಲಂಕಾದ ಜಾಫ್ನಾದಲ್ಲಿ ನಡೆದ ಭರತನಾಟ್ಯ, ಸ್ಯಾಕ್ಸೋಫೋನ್ ಮತ್ತು ಮೃದಂಗ ನಾದವೈಭವಂ ಕಾರ್ಯಕ್ರಮದಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾಕೇಂದ್ರದ ನೃತ್ಯಗುರು, ವಿದುಷಿ ಶಾಲಿನಿ ಆತ್ಮಭೂಷಣ್ ಅವರು ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ನೃತ್ಯಗುರು ಉಳ್ಳಾಲ ನಾಟ್ಯನಿಕೇತನ ನಿರ್ದೇಶಕಿ, ಕರ್ನಾಟಕ ಕಲಾಶ್ರೀ ಪುರಸ್ಕೃತ ವಿದುಷಿ ರಾಜಶ್ರೀ ಉಳ್ಳಾಲ್ ನಿರ್ದೇಶನದಲ್ಲಿ ವಿದುಷಿ ಶಾಲಿನಿ ಆತ್ಮಭೂಷಣ್ ಸೇರಿದಂತೆ ಏಳು ಮಂದಿ ಹಿರಿಯ ಕಲಾವಿದೆಯರ ತಂಡ ನೃತ್ಯ ಪ್ರದರ್ಶನ ನೀಡಿತು. ಅಲ್ಲದೆ ವಿದುಷಿ ಶಾಲಿನಿ ಆತ್ಮಭೂಷಣ್ ಅವರು ತಮಿಳಿನ ಪ್ರಸಿದ್ಧ ತಣಿಗೈವ ರೈವಾಳುಂ.. ಶಾಸ್ತ್ರೀಯ ಹಾಡಿಗೆ ಸೋಲೋ ನೃತ್ಯ ಪ್ರದರ್ಶನ ನೀಡಿದರು.
ಜಾಫ್ನಾದ ಚುನ್ನಕಂ ಎಂಬಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಎಲಾಕಲಿ ವೆಸ್ಟ್ ಶ್ರೀವಿನಯಾಗರ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಸಹಯೋಗ ನೀಡಿತ್ತು. ಬಳಿಕ ಎಲ್ಲ ಕಲಾವಿದರನ್ನು ಪುರಸ್ಕರಿಸಲಾಯಿತು.