ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ನದಿ ಸೇತುವೆಯ ಇಕ್ಕೆಲಗಳಲ್ಲಿ ತುಂಬಿದ್ದ ಮಣ್ಣನ್ನು ತೆಗೆಯುವ ಮೂಲಕ ಉಪ್ಪಿನಂಗಡಿಯ ಎಸ್ ಕೆ ಎಸ್ ಎಸ್ ಎಫ್ ವಿಖಾಯ ತಂಡವು ಜನರಿಗಾಗುತ್ತಿದ್ದ ತೊಂದರೆಯನ್ನು ತಪ್ಪಿಸಿದೆ.
ನೇತ್ರಾವತಿ ನದಿ ಸೇತುವೆಯ ಎರಡೂ ಬದಿಗಳಲ್ಲಿ ಮಳೆ ನೀರು ಹರಿದು ಹೋಗಲು ಇದ್ದ ರಂಧ್ರಗಳು ಮಣ್ಣು, ಹುಲ್ಲುಗಳಿಂದ ತುಂಬಿ ಮುಚ್ಚಿ ಹೋಗಿತ್ತು. ಇದರಿಂದ ಸೇತುವೆಯ ಮೇಲಿನ ಮಳೆ ನೀರು ಹರಿದು ಹೋಗಲು ಸಾಧ್ಯವಾಗದೇ ಸೇತುವೆಯಲ್ಲೇ ನಿಲ್ಲುತ್ತಿತ್ತು. ಘನ ವಾಹನಗಳು ಸೇತುವೆಯ ಮೇಲೆ ಸಂಚರಿಸುವಾಗ ಈ ರೀತಿ ನಿಂತ ಕೆಸರು ನೀರು ಪಾದಚಾರಿ, ದ್ವಿಚಕ್ರ ವಾಹನ ಸವಾರರ ಮೇಲೆ ಪ್ರೋಕ್ಷಣೆಯಾಗುತ್ತಿತ್ತು. ಇಲ್ಲಿ ಜನರಿಗೆ ಸಮಸ್ಯೆಯಾಗುವುದನ್ನು ಅರಿತ ಉಪ್ಪಿನಂಗಡಿಯ ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡವು ಶ್ರಮದಾನ ನಡೆಸಿ, ಸೇತುವೆಯ ಬದಿಗಳಲ್ಲಿ ಶೇಖರಣೆಯಾಗಿದ್ದ ಮಣ್ಣು, ಹುಲ್ಲುಗಳನ್ನು ತೆಗೆದು, ಸೇತುವೆಯ ಆರಂಭದ ಭಾಗದಲ್ಲಿ ರಸ್ತೆಗೆ ಬಾಗಿಕೊಂಡಿದ್ದ ಗಿಡಗಳನ್ನು ತೆರವುಗೊಳಿಸಿದರು.